ವಿಜಯಪುರ | ಸಮಯಕ್ಕೆಬಾರದ ಬಸ್‌, ದಲಿತ ವಿದ್ಯಾರ್ಥಿ ಪರಿಷತ್‌ ಪ್ರತಿಭಟನೆ

Date:

ಇಂಡಿಯ ದಲಿತ ವಿದ್ಯಾರ್ಥಿ ಪರಿಷತ್  ಹಾಗೂ ಪ್ರಗತಿಪರ ಸಂಘಟನೆಗಳು ಹಂಜಗಿ ಮತ್ತು ನಿಂಬಾಳ ಗ್ರಾಮಕ್ಕೆ ಸರಿಯದ ಸಮಯಕ್ಕೆ ಬಸ್ ಬರದೇ ಇರುವ ಕಾರಣಕ್ಕಾಗಿ ಪ್ರತಿಭಟನೆ ನಡೆಸಿವೆ.

ಬಸ್‌ ಸರಿಯಾದ ಸಮಯಕ್ಕೆ ಬಾರದೇ ಶಾಲಾ, ಕಾಲೇಜುಗಳಿಗೆ ಬಸ್‌ನಲ್ಲಿ ತೆರಳುವ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದ್ದು, ಸರಿಯಾದ ಸಮಯಕ್ಕೆ ತಲುಪಲು ಸಮಸ್ಯೆಯಾಗುತ್ತಿದೆ. ಕಾರಣ, ಬಸ್ ತಡೆದ ಪ್ರತಿಭಟನಾಕಾರರು, ಹಂಜಗಿ ಗ್ರಾಮದಿಂದ ಏಳು ಕಿಲೋ ಮೀಟರ್‌ವರೆಗೆ ಬಸ್ ಡಿಪೋವರೆಗೆ ನಡೆಯುವ ಮೂಲಕ ಪ್ರತಿಭಟನೆ ಮಾಡಿ, ಬಸ್ ಡಿಪೋ ಮ್ಯಾನೇಜರ್‌ಗೆ ಮನವಿ ಸಲ್ಲಿಸಿದ್ದಾರೆ.

ಪ್ರತಿಭಟನೆಯಲ್ಲಿ ಡಿವಿಪಿ ತಾಲೂಕು ಅಧ್ಯಕ್ಷ ವಿನೋದ ಕಾಳೆ, ರಾಮ ಕಾಂಬಳೆ,ಜೆಡಿಎಸ್‌ ಮುಖಂಡ ಬಿ.ಡಿ. ಪಾಟೀಲ್, ಸೋಮು ಅಂಜುಟಗಿ, ಸೋಹೇಲ್ ಕುಣಬಿ, ತೌಶಿಫ್ ಕರೋಶಿ, ಸಾಗರ್ ಕಟ್ಟಿಮನಿ, ಖಾಷಿಮ್ ವಾಲಿಕಾರ, ಅಪ್ರಾನ ಬಿರಾದಾರ್, ಪೂಜಾ ರಾಠೋಡ್, ವೈಷ್ಣವಿ ಕಮಲಾಕರ್, ಪ್ರೀತಿ ಬಗಲಿ, ಹಾಗೂ ವಿದ್ಯಾರ್ಥಿಗಳ ಸಮೋಹ ಭಾಗಿಯಾಗಿತ್ತು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...