ವಿಜಯಪುರ ಜಿಲ್ಲೆಯಲ್ಲಿ ಅವಧಿ ಮುಗಿಯುತ್ತಿರುವ ಗ್ರಾಮ ಪಂಚಾಯಿತಿಗಳಿಗೆ ಈಗಿರುವ ಆಡಳಿತ ಸಮಿತಿಯನ್ನು ಮರುನೇಮಕ ಮಾಡುವಂತೆ ವಿಧಾನ ಪರಿಷತ್ ಸದಸ್ಯ ಸುನೀಲಗೌಡ ಪಾಟೀಲ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯಿತಿ ಅಭಿವೃದ್ಧಿ ಸಚಿವ ಪ್ರಿಯಾಂಕ ಖರ್ಗೆ ಅವರಿಗೆ ಮನವಿ ಮಾಡಿದ್ದಾರೆ.
ಯಾವುದೇ ಪಂಚಾಯಿತಿ ಸದಸ್ಯರ ಅವಧಿ ಮೊದಲ ಸಭೆ ಗೊತ್ತುಪಡಿಸಿದ ದಿನಾಂಕದಿಂದ ಐದು ವರ್ಷಗಳ ಅಸ್ತಿತ್ವದಲ್ಲಿದ್ದು, ಐದು ವರ್ಷಗಳು ಪೂರ್ಣಗೊಂಡ ನಂತರ ಅವಧಿ ಮುಕ್ತಾಯವಾಗುತ್ತದೆ. 2020ರಿಂದ 2025ರವರೆಗೆ ರಚಿತವಾದ ರಾಜ್ಯದ ಗ್ರಾ. ಪಂ ಅವಧಿಯು 2026ರ ಜನವರಿಯಿಂದ ಮಾರ್ಚ್‌ವರೆಗೆ ನಾನಾ ದಿನಾಂಕಗಳಂದು ಮುಕ್ತಾಯವಾಗಲಿದೆ. ಆದ್ದರಿಂದ ರಾಜ್ಯ ಸರ್ಕಾರ ಅವಧಿ ಮುಗಿಯುವ ಗ್ರಾಮ ಪಂಚಾಯಿತಿಗಳಿಗೆ ಆಡಳಿತಾಧಿಕಾರಿಗಳನ್ನು ನೇಮಿಸುವಂತೆ ಜಿಲ್ಲಾಧಿಕಾರಿಗಳಿಗೆ ಆದೇಶ ನೀಡಿದೆ. ಈ ಹಿನ್ನೆಲೆಯಲ್ಲಿ ಆಡಳಿತಾಧಿಕಾರಿಗಳ ನೇಮಿಸುವ ಆದೇಶವನ್ನು ಹಿಂಪಡೆದು ಕೂಡಲೇ ಈಗಿರುವ ಆಡಳಿತ ಸಮಿತಿಯನ್ನು ಮುಂದಿನ ಆರು ತಿಂಗಳವರೆಗೆ ಮುಂದುವರೆಸಬೇಕು” ಎಂದು ಒತ್ತಾಯಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? 400 ಕೋಟಿ ದರೋಡೆ ಶಾಕ್: 3 ವರ್ಷಗಳ ಬಳಿಕ ಬೆಳಕಿಗೆ ಬಂದ ಚೋರ್ಲಾ ಘಾಟ್ ಮಹಾಕಳ್ಳತನ!: ಗೃಹ ಸಚಿವರ ಮಹತ್ವದ ಹೇಳಿಕೆ
90ರ ದಶಕದಲ್ಲಿ ಇದೇ ರೀತಿ ಅಂದಿನ ಸಮಿತಿಯನ್ನು ಮುಂದುವರೆಸಲಾಗಿತ್ತು ಎಂಬುದನ್ನು ಮುಖ್ಯಮಂತ್ರಿ ಮತ್ತು ಸಚಿವರಿಗೆ ನೀಡಿರುವ ಮನವಿ ಪತ್ರದಲ್ಲಿ ಗಮನ ಸೆಳೆದಿದ್ದಾರೆ.





