ವಿಜಯಪುರ ಜಿಲ್ಲೆಯ ಕೊಲ್ಹಾರ ತಾಲ್ಲೂಕಿನ ಹಳ್ಳದ ಗೆಣ್ಣೂರು ಗ್ರಾಮದಲ್ಲಿ ನಡೆಯುತ್ತಿರುವ ಕೆನಾಲ್ ಕಾಮಗಾರಿ ಸ್ಥಳಕ್ಕೆ ಸಚಿವ ಶಿವಾನಂದ ಪಾಟೀಲ ಭೇಟಿನೀಡಿ ಪರಿಶೀಲನೆ ಮಾಡಿದರು.
ಬಳಿಕ ಮಾತನಾಡಿ, “ಕಳಪೆ ಕಾಮಗಾರಿ ಕುರಿತು ಶೀಘ್ರವೇ ಗುತ್ತಿಗೆದಾರರಿಗೆ ನೋಟಿಸ್ ಜಾರಿಗೆಗೊಳಿಸಿ. ಕಾಲುವೆ ಯಾವ ಕಾರಣಕ್ಕೆ ಒಡೆಯಿತು ಎಂಬುದನ್ನು ಪರಿಶೀಲಿಸಿ, ಶೀಘ್ರವೇ ಕಾಮಗಾರಿಯನ್ನು ಗುಣಮಟ್ಟದಿಂದ ಪೂರ್ಣಗೊಳಿಸಿ” ಎಂದು ಅಧಿಕಾರಿಗಳಿಗೆ ತಿಳಿಸಿದರು.
“ಮುಂದಿನ ಬೆಳೆಗಳು ಒಣಗದಂತೆ ಸಣ್ಣ ಪ್ರಮಾಣದಲ್ಲಿ ಕಾಲುವೆಗೆ ನೀರು ಹರಿಸಬೇಕು. ಜಮೀನುಗಳಿಗೆ ನೀರು ನುಗ್ಗಿ ಹಾನಿಯಾಗಿರುವ ರೈತರಿಗೆ ಶೀಘ್ರದಲ್ಲಿ ಪರಿಹಾರ ವಿತರಿಸುವಂತೆ ಸರ್ಕಾರಕ್ಕೆ ಒತ್ತಾಯಿಸುತ್ತೇನೆ” ಎಂದು ಹೇಳಿದರು.
ತಹಶೀಲ್ದಾರ್ ಎಸ್.ಎಂ. ಮ್ಯಾಗೇರಿ, ಪಿಎಸ್‌ಐ ಅಶೋಕ್ ನಾಯಕ್, ಸೋಮು ಬಿರಾದಾರ್, ರವಿ ಗೊಳಸಂಗಿ, ಮಾತೇಶ ಗಿಡ್ಡಪ್ಪಗೋಳ, ರಮೇಶ ಸಂಗಳದ, ಮಹೇಶ್ ಪಾಟೀಲ್, ಮಂಜುನಾಥ್ ಪಾಟೀಲ್, ಸಂಗಮೇಶ್ ಬಗಲಿ, ಶ್ರೀಕಾಂತ್ ಗಣಿ ಮತ್ತು ಆಲಿಮಟ್ಟಿ, ಮಟ್ಟಿಹಾಳ ಕೆಬಿಜಿಎನ್ಎಲ್ ಅಧಿಕಾರಿಗಳು, ಗುತ್ತಿಗೆದಾರರು ಇದ್ದರು.





