ಕೊಲ್ಹಾರ | ಮುಳವಾಡ ಕೆಐಡಿಬಿ ಭೂಮಿ ವಿವಾದ; 30 ದಿನಗಳ ಸತ್ಯಾಗ್ರಹ ತಾತ್ಕಾಲಿಕ ಅಂತ್ಯ

Date:

ವಿಜಯಪುರ ಜಿಲ್ಲೆಯ ಕೊಲ್ಹಾರ ತಹಶೀಲ್ದಾರ ಕಚೇರಿ ಎದುರುಗಡೆ ಮುಳವಾಡ ಕೆಐಡಿಬಿಗೆ ಜಮೀನು ಕಳೆದುಕೊಂಡ ರೈತರು ಹಲವು ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಕಳೆದ 30 ದಿನಗಳಿಂದ ನಡೆಸುತ್ತಿದ್ದ ಉಪವಾಸ ಸತ್ಯಾಗ್ರಹವನ್ನು ರೈತರು ತಾತ್ಕಾಲಿಕವಾಗಿ ಹಿಂಪಡೆದರು.

ಬೇಡಿಕೆ ಈಡೇರಿಸುವುದಾಗಿ ಜಿಲ್ಲಾಧಿಕಾರಿಗಳು 30 ದಿನಗಳ ಕಾಲಾವಧಿ ಪಡೆದ ಹಿನ್ನೆಲೆ ಸಂತ್ರಸ್ತರು ಧರಣಿ ಹಿಂಪಡೆದರು. ಜಿಲ್ಲಾಧಿಕಾರಿ ಡಾ.ಆನಂದ ಕೆ ಈಚೆಗೆ ವಿಜಯಪುರದಲ್ಲಿ ಭೂಸಂತ್ರಸ್ತ ರೈತರು ಹಾಗೂ ಧಾರವಾಡ ಕೆಐಡಿಬಿ ಎಸ್ಎಲ್ಓ ಡಾ. ಕವಿತಾ ಯೋಗಪ್ಪನವರ ಜೊತೆ ಸಭೆ ನಡೆಸಿ ಚರ್ಚಿಸಿ, ಬೇಡಿಕೆಗಳನ್ನು ಈಡೇರಿಸಲು 30 ದಿನಗಳ ಕಾಲಾವಕಾಶ ತೆಗೆದುಕೊಂಡ ಹಿನ್ನೆಲೆ ಅಪಾರ ಜಿಲ್ಲಾಧಿಕಾರಿ ಡಾ. ಔದ್ರಾಮರವರು ಧರಣಿ ನಿರತ ಭೂಸಂತ್ರಸ್ಥರ ರೈತರ ಹೋರಾಟದ ಸ್ಥಳಕ್ಕೆ ಆಗಮಿಸಿ ಮನವಿ ಸ್ವೀಕರಿಸಿದ ಪ್ರಯುಕ್ತ ಭೂಸಂತ್ರಸ್ತ ರೈತರು ತಾತ್ಕಾಲಿಕವಾಗಿ ಧರಣಿ ಹಿಂಪಡೆದರು.

ಮುಳವಾಡ ಭೂ ಹಿತರಕ್ಷಣ ನಿರಾಶ್ರಿತರ ರೈತರ ಸಂಘದ ಉಪಾಧ್ಯಕ್ಷ ಬಸವರಾಜ ಬೀಳಗಿ ಮಾತನಾಡಿ, “ಮುಳವಾಡ ಗ್ರಾಮದಲ್ಲಿ ಕೆಐಡಿಬಿ ಧಾರವಾಡ ಲಕ್ಕಮ್ಮನಹಳ್ಳಿಯವರು ಮುಳವಾಡ ಗ್ರಾಮದ ರೈತರ ಭೂಮಿಯನ್ನು ಭೂ ಸ್ವಾಧೀನ ಪಡಿಸಿಕೊಂಡು ಒಟ್ಟು 3230.3 ಎಕರೆಗೆ ಯಾವುದೇ ಅವಾರ್ಡ್ ಮಾಡದೆ ಒಂದೇ ಕಂತಿನಲ್ಲಿ ಪರಿಹಾರ ವಿತರಿಸದೆ ಹಂತ ಹಂತವಾಗಿ ವಿತರಿಸಿದ್ದು ಮತ್ತು ನಮ್ಮ ಬೇಡಿಕೆಗಳನ್ನು ಈಡೇರಿಸದೆ ರೈತರಿಗೆ ದೊಡ್ಡ ಮಟ್ಟದಲ್ಲಿ ಮೋಸ ಮಾಡಿದ ಹಿನ್ನೆಲೆಯಲ್ಲಿ ನಾವು ಹೋರಾಟವನ್ನು ಹಮ್ಮಿಕೊಂಡಿದ್ದೇವೆ. ಒಂದು ವೇಳೆ 30 ದಿನದೊಳಗಾಗಿ ನಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೆ ಜಮೀನು ಕಳೆದುಕೊಂಡ ರೈತರೆಲ್ಲರೂ ಸೇರಿ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ಬೃಹತ್ ಹೋರಾಟ ಕೈಗೊಳ್ಳಲಾಗುವುದು” ಎಂದು ಎಚ್ಚರಿಕೆ ನೀಡಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಪ್ರಮುಖ ಬೇಡಿಕೆಗಳು:
1) ಕೋರ್ಟ್ ಆದೇಶದ ಪ್ರಕಾರ ಒಂದು ಎಕರೆ ನೀರಾವರಿ ಜಮೀನಿಗೆ ₹24 ಲಕ್ಷ, ಖುಷ್ಕಿ 20 ಲಕ್ಷ ಪರಿಹಾರ ನೀಡುವುದು.
2) ಯೋಜನಾ ನಿರಾಶ್ರಿತರ ಪ್ರಮಾಣ ಪತ್ರ ವಿತರಣೆ.
3) ನೊಂದಣಿ ರಿಯಾಯಿತಿ ಪ್ರಮಾಣ ಪತ್ರ ವಿತರಣೆ.
4) ಜಮೀನುಗಳಲ್ಲಿರುವ ಗಿಡ, ಮರ,ಭಾವಿ ಕೊಳವೆ ಬಾವಿಗೆ ಜೆಎಂಎಸ್ಸಿ ಪ್ರಕಾರ ಶೇ. 18 ಬಡ್ಡಿ ಸೇರಿಸಿ ಪರಿಹಾರ ವಿತರಿಸುವುದು.
5) ತೋಟದ ವಸ್ತಿ ಮನೆಗಳಿಗೆ ಕರ್ನಾಟಕ ಗ್ರಹ ಮಂಡಳಿಯಲ್ಲಿ ಜಾಗ ನೀಡುವುದು.
6) ಜಮೀನು ಕಳೆದುಕೊಂಡ ರೈತರ ಮಕ್ಕಳಿಗೆ ಸರ್ಕಾರಿ ನೌಕರಿ.
7) ಅ ಖರಾಬ ಜಮೀನಿಗೆ ಒಪ್ಪಿಗೆ ಪ್ರಕಾರ ಒಂದು ಎಕರೆ ನೀರಾವರಿಗೆ ₹9.5 ಲಕ್ಷ, ಖುಷ್ಕಿ ಭೂಮಿಗೆ ₹7.5 ಲಕ್ಷದಂತೆ ಮತ್ತು ಶೇ. 18 ಬಡ್ಡಿ ಸೇರಿಸಿ ಮುಂತಾದ ಪರಿಹಾರ.

ಇದನ್ನೂ ಓದಿ: ವಿಜಯಪುರ | ರೋಹಿತ್‌ ವೇಮುಲ ಕಾಯ್ದೆ ಜಾರಿಗೆ ದವಿಪ ರಾಜ್ಯಾಧ್ಯಕ್ಷ ಶ್ರೀನಾಥ ಪೂಜಾರಿ ಮನವಿ

ತಹಶೀಲ್ದಾರ ಸಂತೋಷ ಮ್ಯಾಗೇರಿ, ಪ್ರಭರಿತಸಿಲ್ದಾರ ಎಸ್ ಅರಿಕೇರಿ, ತಾಪಂ ಇಒ ಸುನಿಲ ಮುದ್ದಿನ್, ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಹುಲ ಕುಬಕಡ್ಡಿ, ಭೂ ಇತರ ಕ್ಷಣ ನಿರಾಶ್ರಿತರ ರೈತ ಸಂಘದ ಅಧ್ಯಕ್ಷ ಶಿವಾನಂದ ಕೆಂಗಲಗುತ್ತಿ, ಕರ್ನಾಟಕ ರಕ್ಷಣಾ ವೇದಿಕೆಯ ತಾಲೂಕು ಅಧ್ಯಕ್ಷ ರವಿ ಗೋಳಸಂಗಿ, ರೈತ ಸಂಘದ ಪದಾಧಿಕಾರಿಗಳು ಸೇರಿದಂತೆ ಮುಳುವಾಡ, ಮಲಘಣ ಹಾಗೂ ಕಲ ಗುರುಕಿ ಗ್ರಾಮದ ನೂರಾರು ರೈತರು ಇದ್ದರು.

WhatsApp Image 2025 05 16 at 6.54.26 PM
Sub Editor at Eedina.com |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂದಗಿ | ಇಂದಿನ ಯುವಕರಿಗೆ ಕೌಶಲ್ಯ ಅತ್ಯಗತ್ಯ: ಫಾ.ಸಂತೋಷ್

ಇಂದಿನ ಯುವಕ ಯುವತಿಯರು ಕೌಶಲ್ಯಗಳನ್ನು ಮೈಗೂಡಿಸಿಕೊಳ್ಳಬೇಕು. ಅದು ಅತ್ಯಗತ್ಯವೂ ಆಗಿದೆ ಎಂದು...

ವಿಜಯಪುರ | ಮಹಿಳಾ ಕೇಂದ್ರೀಕೃತ ಪುಸ್ತಕ ಪ್ರದರ್ಶನ ಮಹಿಳೆಯರ ಸಾಧನೆಗಳನ್ನು ತೋರಿಸುತ್ತದೆ: ಪ್ರೊ. ವಿಜಯ ಕೋರಿಶೆಟ್ಟರ್

ಮಹಿಳೆಯರ ಸಾಧನೆಗಳು, ಅವರ ಹಕ್ಕುಗಳು ಹಾಗೂ ಸಮಾಜಕ್ಕೆ ನೀಡಿದ ಕೊಡುಗೆಗಳನ್ನು ವಿದ್ಯಾರ್ಥಿಗಳು...

ವಿಜಯಪುರ | ಪ್ರಗತಿ ಹಂತದ ಮನರೇಗಾ ಕಾಮಗಾರಿಗಳು ಕೂಡಲೇ ಪೂರ್ಣಗೊಳ್ಳಬೇಕು: ಪ್ರಕಾಶ ವಡ್ಡರ

ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ(ಮನರೇಗಾ)ಯಡಿ ಪ್ರಗತಿ ಹಂತದಲ್ಲಿರುವ ಎಲ್ಲ...

ವಿಜಯಪುರ | ಬಸ್ ನಿಲ್ದಾಣಗಳ ಎಲ್‌ಇಡಿ ಪರದೆ ಮೇಲೆ ಬಜೆಟ್ ನೇರ ಪ್ರಸಾರ

ರಾಜ್ಯದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ರಾಜ್ಯದ ಎಲ್ಲ ರಸ್ತೆ ಸಾರಿಗೆ...