ಜಾತಿ ವ್ಯವಸ್ಥೆ ಭಾರತ ದೇಶಕ್ಕೆ ಅಂಟಿಕೊಂಡಿರುವ ದೊಡ್ಡ ಸಾಮಾಜಿಕ ಪಿಡುಗು. ಇದು ನಿರ್ಮೂಲನೆಯಾಗದ ಹೊರತು ದೇಶ ಸುಧಾರಿಸಲು ಸಾಧ್ಯವಿಲ್ಲ ಎಂದು ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಎಸ್ ಎಸ್ ಅಂಗಡಿ ಅಭಿಪ್ರಾಯಪಟ್ಟರು.
ಕಾಲೇಜಿನಲ್ಲಿ ಸಾಹಿತಿಗಳು, ಚಿಂತಕರು ಹಮ್ಮಿಕೊಂಡಿದ್ದ ದಲಿತ ಸಾಹಿತ್ಯ ಶಿವಪತ್ರ ಅಜಮನಿ ಅವರ ಸನ್ಮಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಹಿರಿಯ ಸಾಹಿತಿ ರುದ್ರೇಶ ಕಿತ್ತೂರು ಹಾಗೂ ಅತ್ಯುತ್ತಮ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪಡೆದವರು ಕಳೆದ 20 ವರ್ಷಗಳಿಂದ ಶಿವಪುತ್ರ ಅಜ್ಮನಿಯವರು ಸಾಹಿತ್ಯ ಕ್ಷೇತ್ರದಲ್ಲಿ ಮುಂದುವರೆದು ಬಂದಿದ್ದಾರೆ. ಆದರೆ ಎಲ್ಲಾ ಸಮಾಜದವರು ಕೂಡ ಗೌರವಿಸುವ ವ್ಯಕ್ತಿತ್ವ ಅವರದಾಗಿದೆ ವಿದೇಶದಲ್ಲಿ ಭಾರತದ ಅದರಲ್ಲೂ ಕನ್ನಡ ಸಾಹಿತ್ಯದ ಕಂಪನ್ನು ಪಸರಿಸುವುದಕ್ಕೆ ಸಲ್ಲುತ್ತದೆ ಎಂದರು.
ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಚಾಮರಾಜ ಬಿರಾದಾರ ಮಾತನಾಡಿ, “ಸಾಹಿತಿ ಶಿವಪುತ್ರ ಅಜಮನಿ ಅವರು ಯಾವುದೇ ಆಡಂಬರ ಹಾಗೂ ಪ್ರಚಾರ ಪಡೆದುಕೊಳ್ಳದೆ ಕೇವಲ ತಮ್ಮ ಅಕ್ಷರಗಳ ಮೂಲಕ ಹಲವಾರು ಪುಸ್ತಕಗಳನ್ನು ರಚಿಸಿ ದಲಿತ ಸಾಹಿತಿಯಾಗಿ, ಇತರರಿಗೂ ಮಾದರಿಯಾಗಿದ್ದಾರೆ. ಜಾತಿ ಪಿಡುಗಿನಿಂದ ಅದೆಷ್ಟೋ ಸಾಹಿತಿಗಳು ಸಾಧನೆಗೆ ಸೂಕ್ತ ವೇದಿಕೆಗಳು ಸಿಗದೇ ವಂಚಿತರಾಗಿದ್ದಾರೆ. ಅಂತಹವರನ್ನು ಹುಡುಕಿ ಸಾಹಿತ್ಯ ಕ್ಷೇತ್ರವನ್ನು ಇನ್ನಷ್ಟು ಬಲಗೊಳಿಸುವ ಜೊತೆಗೆ ಯುವ ಸಾಹಿತಿಗಳ ಚಿಂತನೆಗಳನ್ನು ಈ ನಾಡಿಗೆ ಕೊಡುಗೆ ನೀಡುವಂತೆ ಪ್ರೇರೇಪಿಸಲು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಸದಾ ಸಿದ್ಧವಿದೆ. ಶಿವಪುತ್ರ ಅಜಮನಿಯವರು ಬಡ ಕುಟುಂಬದಲ್ಲಿ ಜನಿಸಿರಬಹುದು, ಆದರೆ ಅವರಲ್ಲಿ ಸಾಹಿತ್ಯದ ಜ್ಞಾನ ಭಂಡಾರವೇ ಅಡಗಿದೆ. ಈಗಾಗಲೇ ರಚಿತವಾದ ಕೃತಿಗಳು ಹಾಗೂ ಅವರ ಆಲೋಚನೆಗಳು ಸಾಮಾಜಿಕ ಚಿಂತನೆಗಳು ಪ್ರತಿಯೊಬ್ಬರೂ ನಿಬ್ಬೆರಗಾಗುವಂತೆ ಮಾಡುತ್ತಿವೆ. ಸದ್ಯ ಅಂತಹವರನ್ನು ಸಹೃದಯ ಸಾಹಿತ್ಯ ಬಳಗವು ಗುರುತಿಸಿ ಗೌರಿವಿಸುತ್ತಿರುವ ಕಾರ್ಯ ನಿಜಕ್ಕೂ ಶ್ಲಾಘನೀಯ” ಎಂದರು.

ದಲಿತ ಸಾಹಿತಿ ಶಿವಪುತ್ರ ಅಜಮನಿ ಮಾತನಾಡಿ, “ದಲಿತ ಕುಟುಂಬದಲ್ಲಿ ಹುಟ್ಟಿದ ನಾನು, ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ಅವರ ಆಶಯಗಳನ್ನು ಮೈಗೂಡಿಸಿಕೊಳ್ಳಲು ಸದಾ ಪ್ರಯತ್ನಿಸುತ್ತೇನೆ. ಬಾಬಾ ಸಾಹೇಬರ ಆಶಯದಂತೆ ಅಸ್ಪೃಶ್ಯತೆಯನ್ನು ಬುಡ ಸಮೇತ ಕಿತ್ತೊಗೆಯುವುದರ ಜೊತೆಗೆ ಸರ್ವ ಧರ್ಮದವರು ಒಂದೇ ಎನ್ನುವ ಮಾನವೀಯ ಮೌಲ್ಯ ರೂಢಿಸಿಕೊಂಡು ಬಂದವನು. ಅವರ ದಾರಿಯಲ್ಲಿ ಮುನ್ನಡೆದು ಸಾಮಾಜಿಕ ಚಿಂತನೆಯುಳ್ಳ ಬರಹಗಳನ್ನು ಸಮಾಜಕ್ಕೆ ನೀಡಲು ಬಂದಿದ್ದೇನೆ” ಎಂದರು.
ಇದನ್ನೂ ಓದಿ: ತಾಳಿಕೋಟೆ | ಮಂಜೂರಾದರೂ ಆರಂಭವಾಗದ ಉಪನೋಂದಣಿ ಕಚೇರಿ; 2 ವರ್ಷಗಳ ನಿರ್ಲಕ್ಷ್ಯಕ್ಕೆ ಜನರ ಆಕ್ರೋಶ
ನನ್ನ ಪ್ರಯಾಣದಲ್ಲಿ ನನ್ನವರೇ ನನ್ನ ವ್ಯಕ್ತಿತ್ವವನ್ನು ಅಪಹಾಸ್ಯ ಮಾಡಿದ್ದರಲ್ಲದೆ ಮುಂದೆ ಬರದಂತೆ ಕಾಲೆಳೆಯುತ್ತಿದ್ದರು. ಇದೆಲ್ಲವನ್ನು ಸಹಿಸಿಕೊಂಡು ಸರಳ ಜೀವನ ನಡೆಸಿಕೊಂಡು ಬಂದಿದ್ದೇನೆ. ಸದ್ದ ನನ್ನ ಪ್ರತಿಭೆಯನ್ನು ಗುರುತಿಸಿದ ಸಹೃದಯ ಸಾಹಿತ್ಯ ಬಳಗವು ಸನ್ಮಾನಿಸಿ ಗೌರವಿಸುತ್ತಿರುವುದು ನನ್ನ ಸಾಹಿತ್ಯಕ್ಕೆ ಮತ್ತಷ್ಟು ಚೈತನ್ಯ ತುಂಬಿದೆ” ಎಂದರು.
ಈ ಸಂದರ್ಭದಲ್ಲಿ ಐಬಿ ಹಿರೇಮಠ, ಎಸ್ ಎಮ್ ನೆರಬೆಂಚಿ, ಬಸಯ್ಯ ನಂದಿಕೇಶ್ವರಮಠ, ರಾಮು ಸಜ್ಜನ್, ಎಚ್ ಆರ್ ಭಾಗವಾನ್, ಬಿಜಿ ದೊಡ್ಡಮನಿ, ಎಸ್ ಎಸ್ ಹುನಗುಂದ, ಬಾಪುಗೌಡ ಪಾಟೀಲ, ಬಸವರಾಜ ಚಲುವಾದಿ, ಕೆಎಂ ಇಬ್ರಾಹಿಂಪುರ, ಭರತ ಉಪ್ಪಲದಿನ್ನಿ, ನಿರ್ಮಲ ಶಾಸನೂರ, ಪರಶುರಾಮ ಹಡಲ್ಗೆರಿ ಸೇರದಂತೆ ಹಲವರು ಇದ್ದರು.





