ಮುದ್ದೇಬಿಹಾಳ | ಬಸವಣ್ಣ, ಮಹಿಳೆಯರಿಗೂ ಇಷ್ಟಲಿಂಗ ಧರಿಸುವ ಹಕ್ಕು ನೀಡಿದ ಮಹನೀಯ: ಜಗದ್ಗುರು ಮಲ್ಲಿಬೊಮ್ಮಯ್ಯ ಶರಣರು

Date:

ಬಸವಣ್ಣನವರು ಮಹಿಳೆಯರಿಗೂ ಇಷ್ಟಲಿಂಗ ಧರಿಸುವ ಮತ್ತು ದೇವ ಪೂಜೆ ಮಾಡುವ ಹಕ್ಕನ್ನು ನೀಡುವ ಮೂಲಕ ಲಿಂಗಸಮಾನತೆಯನ್ನು ಸಾಧಿಸಿದರು. ಸಾಮಾಜಿಕ ಭೇದಭಾವಗಳನ್ನು ವಿರೋಧಿಸಿ, ಸ್ತ್ರೀಯರಿಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುವ, ಸ್ವತಂತ್ರವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುವ ಹಕ್ಕನ್ನು ನೀಡುವ ಮೂಲಕ ಸಮಾಜದಲ್ಲಿ ಗೌರವಯುತ ಸ್ಥಾನವನ್ನು ಕಲ್ಪಿಸಿದರು ಎಂದು ಆಲಮೇಲ ವಿರಕ್ತ ಮಠದ ಶ್ರೀ ಜಗದ್ಗುರು ಮಲ್ಲಿಬೊಮ್ಮಯ್ಯ ಶರಣರು ಹೇಳಿದರು.

ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ನಾಲತವಾಡ ಸ್ಥಳೀಯ ಶ್ರೀ ವೀರೇಶ್ವರ ಮಹಾ ಮನೆ ಮಠದಲ್ಲಿ ಜರುಗಿದ ಶರಣ ದಂಪತಿಗಳ 107ನೇ ಪುಣ್ಯಸ್ಮರಣೆ ನಿಮಿತ್ತ ಪ್ರವಚನದಲ್ಲಿ ಮಾತನಾಡಿದ ಅವರು, “ಈ ಕನ್ನಡ ನೆಲದಿಂದ ಜಗತ್ತಿಗೆ ಮೊದಲು ಪ್ರಜಾಪ್ರಭುತ್ವದ ಅನುಭವ ಮಂಟಪ ಕೊಟ್ಟು, ಸ್ತ್ರೀ-ಪುರುಷರೆಂಬ ಭೇದವನ್ನು ತೊಡೆದುಹಾಕಿ, ಎಲ್ಲರಿಗೂ ಸಮಾನ ಅವಕಾಶಗಳನ್ನು ಕಲ್ಪಿಸುವುದು ಬಸವಣ್ಣನವರ ಮುಖ್ಯ ಉದ್ದೇಶವಾಗಿತ್ತು” ಎಂದು ಸ್ಮರಿಸಿದರು.

“ಬಸವಣ್ಣನವರ ಶರಣ ಸಂಸ್ಕೃತಿಯು ಸ್ತ್ರೀಯರಿಗೆ ವೈಚಾರಿಕ ಪ್ರಜ್ಞೆ, ಜ್ಞಾನ ಮತ್ತು ಸ್ವಾತಂತ್ರ್ಯದ ಮೂಲಕ ಸಬಲೀಕರಣದ ಮಾರ್ಗವನ್ನು ತೋರಿಸಿಕೊಟ್ಟಿತು. ಅಕ್ಕಮಹಾದೇವಿ, ಗಂಗಾಂಬಿಕೆ, ನೀಲಾಂಬಿಕೆ ಮೊದಲಾದ ಶರಣೆಯರ ವಚನಗಳ ಮೂಲಕ ಸ್ತ್ರೀ ಸಬಲೀಕರಣದ ಆಶಯಗಳನ್ನು ಬಸವಣ್ಣನವರು ಬೆಂಬಲಿಸಿದರು. ಕಾಯಕವೇ ಕೈಲಾಸ ಎಂಬ ತತ್ವದ ಮೂಲಕ ದುಡಿಮೆಯ ಮಹತ್ವವನ್ನು ಸಾರಿದರು. ಮಹಿಳೆಯರೂ ಸ್ವಾವಲಂಬಿಯಾಗಿ ಬದುಕಲು ಪ್ರೋತ್ಸಾಹ ನೀಡಿದರು” ಎಂದು ಹೇಳಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಈ ಸುದ್ದಿ ಓದಿದ್ದೀರಾ? ಚಿಕ್ಕಮಗಳೂರು | ಆಟೋ ಚಾಲಕರಿಂದ ಗಣರಾಜ್ಯೋತ್ಸವ ಆಚರಣೆ

“ಬಸವಣ್ಣನವರ ಸ್ತ್ರೀ ಸಬಲೀಕರಣದ ಪರಿಕಲ್ಪನೆಯು ಆ ಕಾಲದ ಸಾಮಾಜಿಕ ಕ್ರಾಂತಿಗೆ ನಾಂದಿ ಹಾಡಿತು ಮತ್ತು ಲಿಂಗ ಸಮಾನತೆಯ ತಳಹದಿಯನ್ನು ಹಾಕುವಲ್ಲಿ ಪ್ರಮುಖ ಪಾತ್ರವಹಿಸಿತು. ಸ್ತ್ರೀಗೆ ಸಮಾನತೆ ಕಲ್ಪಿಸಿದಾಗ ಮಾತ್ರ ಸಮಾಜದ ಪ್ರಗತಿ ಸಾಧ್ಯ ಎಂಬುದನ್ನು ಮನಗಂಡ 12ನೇ ಶತಮಾನದ ಬಸವಾದಿ ಶಿವಶರಣರು ಹೆಣ್ಣನ್ನು ಆತ್ಮಿಕ ನೆಲೆಯಲ್ಲಿ ಗುರುತಿಸಿ ಸಾಕ್ಷಾತ್ ದೇವತೆ ಎಂದು ಗೌರವಿಸಿದರು. 12ನೇ ಶತಮಾನದ ಸಾಮಾಜಿಕ ಕ್ರಾಂತಿಯ ಭಾಗವಾಗಿ, ಸ್ತ್ರೀಯರಿಗೆ ಪುರುಷರಂತೆಯೇ ಧಾರ್ಮಿಕ, ಸಾಮಾಜಿಕ ಮತ್ತು ಆರ್ಥಿಕ ಹಕ್ಕುಗಳನ್ನು ನೀಡುವಲ್ಲಿ ಬಸವಣ್ಣನವರು ಪ್ರಮುಖ ಪಾತ್ರ ವಹಿಸಿದರು. ಶರಣೆಯರ ವಚನಗಳ ಮೂಲಕ ಸ್ತ್ರೀ ಸ್ವಾತಂತ್ರ್ಯ, ಅರಿವು ಮತ್ತು ಸ್ವಾವಲಂಬನೆಗೆ ಒತ್ತು ನೀಡುವುದರ ಮೂಲಕ ಸ್ತ್ರೀ ಸಬಲೀಕರಣಕ್ಕೆ ಶ್ರಮಿಸಿದರು” ಎಂದರು.

ಶ್ರೀ ವೀರೇಶ್ವರ ವಿಶ್ವಸ್ಥ ಸಂಸ್ಥೆಯ ಪದಾಧಿಕಾರಿಗಳು, ಬಸವ ಕೇಂದ್ರದವರು ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂದಗಿ | ಇಂದಿನ ಯುವಕರಿಗೆ ಕೌಶಲ್ಯ ಅತ್ಯಗತ್ಯ: ಫಾ.ಸಂತೋಷ್

ಇಂದಿನ ಯುವಕ ಯುವತಿಯರು ಕೌಶಲ್ಯಗಳನ್ನು ಮೈಗೂಡಿಸಿಕೊಳ್ಳಬೇಕು. ಅದು ಅತ್ಯಗತ್ಯವೂ ಆಗಿದೆ ಎಂದು...

ವಿಜಯಪುರ | ಮಹಿಳಾ ಕೇಂದ್ರೀಕೃತ ಪುಸ್ತಕ ಪ್ರದರ್ಶನ ಮಹಿಳೆಯರ ಸಾಧನೆಗಳನ್ನು ತೋರಿಸುತ್ತದೆ: ಪ್ರೊ. ವಿಜಯ ಕೋರಿಶೆಟ್ಟರ್

ಮಹಿಳೆಯರ ಸಾಧನೆಗಳು, ಅವರ ಹಕ್ಕುಗಳು ಹಾಗೂ ಸಮಾಜಕ್ಕೆ ನೀಡಿದ ಕೊಡುಗೆಗಳನ್ನು ವಿದ್ಯಾರ್ಥಿಗಳು...

ವಿಜಯಪುರ | ಪ್ರಗತಿ ಹಂತದ ಮನರೇಗಾ ಕಾಮಗಾರಿಗಳು ಕೂಡಲೇ ಪೂರ್ಣಗೊಳ್ಳಬೇಕು: ಪ್ರಕಾಶ ವಡ್ಡರ

ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ(ಮನರೇಗಾ)ಯಡಿ ಪ್ರಗತಿ ಹಂತದಲ್ಲಿರುವ ಎಲ್ಲ...

ವಿಜಯಪುರ | ಬಸ್ ನಿಲ್ದಾಣಗಳ ಎಲ್‌ಇಡಿ ಪರದೆ ಮೇಲೆ ಬಜೆಟ್ ನೇರ ಪ್ರಸಾರ

ರಾಜ್ಯದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ರಾಜ್ಯದ ಎಲ್ಲ ರಸ್ತೆ ಸಾರಿಗೆ...