ನಾಲತವಾಡ | ದಿಢೀರ್ ಟೊಮೇಟೊ ದರ ಕುಸಿತ: ರೈತರಿಗೆ ಸಂಕಷ್ಟ!

Date:

ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ನಾಲತವಾಡ ಪಟ್ಟಣದ ಸಂತೆಯಲ್ಲಿ ಟೊಮೇಟೊ ದರ ದಿಢೀರ್ ಕುಸಿತ ಕಂಡ ಪರಿಣಾಮ ರೈತರು ನಷ್ಟ ಅನುಭವಿಸುವಂತಾಯಿತು. ಪಟ್ಟಣದ ವ್ಯಾಪ್ತಿಯಲ್ಲಿ ಈ ಬಾರಿ ಹೆಚ್ಚಿನ ಪ್ರಮಾಣದಲ್ಲಿ ಟೊಮೇಟೊ ಬೆಳೆಯಲಾಗಿದೆ. ಇದೀಗ ಬೆಲೆ ಕುಸಿತದಿಂದ ರೈತರು ಸಂಕಷ್ಟಕ್ಕೀಡಾಗಿದ್ದಾರೆ.

ಪಟ್ಟಣ ಸೇರಿ ಸುತ್ತಲಿನ ಭಾಗಗಳಿಂದ ಸಂತೆಗೆ ಹೆಚ್ಚಿನ ಪ್ರಮಾಣದ ಟೊಮೇಟೊ ಬಂದಿದ್ದರಿಂದ ದರ ಕಡಿಮೆಯಾಯಿತು ಎನ್ನಲಾಗುತ್ತಿದೆ. 20 ಕೆಜಿ ಬಾಕ್ಸ್ ಟೊಮೇಟೊ ಕೇವಲ 150 ರೂಪಾಯಿಗೆ ಹರಾಜು ಆಗಿದೆ. ದರ ಕೇಳಿ ಸಂತೆಗೆ ಬಂದಿದ್ದ ರೈತರು ತಲೆ ಮೇಲೆ ಕೈಹೊತ್ತು ಕುಳಿತುಕೊಳ್ಳುವಂತಾಯಿತು.

ಕಟಾವು ಮಾಡಿದ ಆಳಿನ ಕೂಲಿ, ಮಾರುಕಟ್ಟೆಗೆ ತಂದ ವಾಹನದ ಖರ್ಚು, ನಿರ್ವಹಣೆ ವೆಚ್ಚ ಸೇರಿದಂತೆ ಸಾವಿರಾರು ರೂಪಾಯಿ ಖರ್ಚಾಗಿರುತ್ತದೆ. ಅದರ ಕೂಲಿಯೂ ಹುಟ್ಟಿಲ್ಲ ಎಂದು ಕೆಲ ರೈತರು ಕಣ್ಣೀರು ಹಾಕಿದರು. ಕಾರ್ಮಿಕರಿಗೆ ನೀಡುವ ಕೂಲಿಯಷ್ಟು ಹಣ ಕೂಡಾ ಸಿಗಲಿಲ್ಲ ಎಂದು ರೈತರು ಬೇಸರ ವ್ಯಕ್ತಪಡಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಇದನ್ನೂ ಓದಿ: ವಿಜಯಪುರ | ಜ.25ರಂದು ರಾಷ್ಟೀಯ ಮತದಾರರ ದಿನಾಚರಣೆ

ಒಂದೆರಡು ತಿಂಗಳಿನಿಂದ ಕೆಜಿಗೆ ₹30 ರಿಂದ ₹40 ಇತ್ತು. ಆದರೆ ಇದ್ದಕ್ಕಿದ್ದಂತೆ ದರ ಕುಸಿತ ಕಂಡಿದೆ. ಹಾಗಾಗಿ ಗ್ರಾಹಕರು 4-5 ಕೆಜಿ ಕೊಂದುಕೊಂಡರೂ ರೈತರಿಗೆ ನಷ್ಟ ತಪ್ಪಲಿಲ್ಲ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂದಗಿ | ಇಂದಿನ ಯುವಕರಿಗೆ ಕೌಶಲ್ಯ ಅತ್ಯಗತ್ಯ: ಫಾ.ಸಂತೋಷ್

ಇಂದಿನ ಯುವಕ ಯುವತಿಯರು ಕೌಶಲ್ಯಗಳನ್ನು ಮೈಗೂಡಿಸಿಕೊಳ್ಳಬೇಕು. ಅದು ಅತ್ಯಗತ್ಯವೂ ಆಗಿದೆ ಎಂದು...

ವಿಜಯಪುರ | ಮಹಿಳಾ ಕೇಂದ್ರೀಕೃತ ಪುಸ್ತಕ ಪ್ರದರ್ಶನ ಮಹಿಳೆಯರ ಸಾಧನೆಗಳನ್ನು ತೋರಿಸುತ್ತದೆ: ಪ್ರೊ. ವಿಜಯ ಕೋರಿಶೆಟ್ಟರ್

ಮಹಿಳೆಯರ ಸಾಧನೆಗಳು, ಅವರ ಹಕ್ಕುಗಳು ಹಾಗೂ ಸಮಾಜಕ್ಕೆ ನೀಡಿದ ಕೊಡುಗೆಗಳನ್ನು ವಿದ್ಯಾರ್ಥಿಗಳು...

ವಿಜಯಪುರ | ಪ್ರಗತಿ ಹಂತದ ಮನರೇಗಾ ಕಾಮಗಾರಿಗಳು ಕೂಡಲೇ ಪೂರ್ಣಗೊಳ್ಳಬೇಕು: ಪ್ರಕಾಶ ವಡ್ಡರ

ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ(ಮನರೇಗಾ)ಯಡಿ ಪ್ರಗತಿ ಹಂತದಲ್ಲಿರುವ ಎಲ್ಲ...

ವಿಜಯಪುರ | ಬಸ್ ನಿಲ್ದಾಣಗಳ ಎಲ್‌ಇಡಿ ಪರದೆ ಮೇಲೆ ಬಜೆಟ್ ನೇರ ಪ್ರಸಾರ

ರಾಜ್ಯದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ರಾಜ್ಯದ ಎಲ್ಲ ರಸ್ತೆ ಸಾರಿಗೆ...