ಇಂದಿನ ಯುವಕ ಯುವತಿಯರು ಕೌಶಲ್ಯಗಳನ್ನು ಮೈಗೂಡಿಸಿಕೊಳ್ಳಬೇಕು. ಅದು ಅತ್ಯಗತ್ಯವೂ ಆಗಿದೆ ಎಂದು ಸಂಗಮ ಸಮಗ್ರ ಅಭಿವೃದ್ಧಿ ಕೇಂದ್ರದ ನಿರ್ದೇಶಕ ಫಾದರ್ ಸಂತೋಷ್ ಹೇಳಿದರು.
ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಸಂಗಮ ಸಮಗ್ರ ಗ್ರಾಮೀಣ ಅಭಿವೃದ್ಧಿ ಕೇಂದ್ರ ಮತ್ತು ಯುವ ಸಂಗಮ ಒಕ್ಕೂಟದ ವತಿಯಿಂದ ಆಯೋಜಿಸಿದ್ದ ಬೃಹತ್ ಉದ್ಯೋಗ ಮೇಳ ಮತ್ತು ಯುವ ಸಂಗಮ ಹಾಗೂ ಆಭರಣಗಳ ತಯಾರಿಕೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
“ಈಗಿನ ಕಾಲದ ಯುವಕರು ಶಿಕ್ಷಣದ ಜೊತೆ ಕೌಶಲ್ಯ ಮೈಗೂಡಿಸುಕೊಂಡು, ಒಳ್ಳೆಯ ನಾಗರಿಕನಾಗಿ ಹೊರಹೊಮ್ಮಬೇಕಾಗಿದೆ” ಎಂದರು.
ಬೆಂಗಳೂರಿನಿಂದ ಸಾಯಿ ಪ್ರೈವೇಟ್ ಲಿಮಿಟೆಡ್ ಕಂಪನಿಯ ವಿನಯ್ ಯುವಕ ಯುವತಿಯರಿಗೆ ಸಂದರ್ಶನ ಮಾಡಿದರು.
ಅಶೋಕ್ ಲೇಲ್ಯಾಂಡ್ ಪ್ರೈವೇಟ್ ಲಿಮಿಟೆಡ್ನ ವಿಶ್ವನಾಥ್, ಸಿಸ್ಟರ್ ಜಯ ಮತ್ತು ಮೀನಾಕ್ಷಿ ಸಿಂಗೆ ಯುವತಿಯರಿಗೆ ಆಭರಣಗಳ ಕುರಿತು ಮಾಹಿತಿ ನೀಡಿದರು.
ಇದನ್ನೂ ಓದಿ: ವಿಜಯಪುರ | ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯತ್ವ ನವೀಕರಣಕ್ಕೆ ಅರ್ಜಿ ಆಹ್ವಾನ
ಟಿಪ್ಪು ಕ್ರಾಂತಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ದಸ್ತಗೀರ ಮುಲ್ಲಾ ಯುವಕರನ್ನು ಉದ್ದೇಶಿಸಿ ಭಾರತ ಪ್ರಪಂಚದ ಅತಿ ದೊಡ್ಡ ಪ್ರಜಾಪ್ರಭುತ್ವ ದೇಶ. ನಾವು ಒಳ್ಳೆ ಮತದಾನದ ಮೂಲಕ ಒಳ್ಳೆಯ ನಾಯಕರನ್ನು ಆಯ್ಕೆ ಮಾಡಬೇಕೆಂದು ಹೇಳಿದರು. ಅರ್ಥಶಾಸ್ತ್ರ ಮತ್ತು ಇತಿಹಾಸ ಉಪನ್ಯಾಸಕ ಪರಶುರಾಮ್ ಬಿರಾದಾರ್ ಕಾರ್ಯಕ್ರಮವನ್ನು ಉದ್ದೇಶಿಸಿ ಮಾಹಿತಿ ಹಕ್ಕು ಅಧಿನಿಯಮದ ಕುರಿತು ಮಾತನಾಡಿದರು.
ಕಾರ್ಯಕ್ರಮದಲ್ಲಿ ರಾಜೀವ ಕುರಿಮನಿ, ಮಲ್ಲಪ್ಪ ಹಲಗಿ, ಕಲಾವತಿ ಕಿಂಗೆ ಮತ್ತು ಹಲವು ಯುವಕ ಯುವತಿಯರು ಹಾಜರಿದ್ದರು.





