ಗ್ಯಾರೆಂಟಿ ಯೋಜನೆಗಲ್ಲಿ ಒಂದಾದ ಶಕ್ತಿ ಯೋಜನೆಯ ಶೇ. 49ರಷ್ಟು ಮಹಿಳೆಯರ ಉದ್ಯೋಗಕ್ಕೆ ಅನುಕೂಲವಾಗುತ್ತಿದೆ ಎಂಬುದು ಅಧ್ಯಯನದ ವರದಿಗಳು ಹೇಳುತ್ತವೆ ಎಂದು ಜಾಗೃತ ಕರ್ನಾಟಕ ರಾಜ್ಯ ಮುಖಾಂಡ ಡಾ. ವಾಸು ಎಚ್ ವಿ ಹೇಳಿದರು.
ವಿಜಯಪುರ ನಗರದ ಕಂದಗಲ್ ಹನಮಂತರಾಯ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಗ್ಯಾರೆಂಟಿ ಯೋಜನೆ ಪ್ರಾಧಿಕಾರದ ಕಾರ್ಯಾಗಾರದಲ್ಲಿ ಮಾತನಾಡಿದರು.
“ಶಕ್ತಿ ಯೋಜನೆಯಿಂದ ಮಹಿಳೆಯರು ಹೊರಗಡೆ ಹೊಗಿ ಕೆಲಸ ಮಾಡಲು ಉತ್ತೇಜನ ಸಿಕ್ಕಂತಾಗಿದೆ. ಮಹಿಳೆಯರು ಇನ್ನೊಬ್ಬರ ಹತ್ತಿರ ಕೈಚಾಚುವುದು ತಪ್ಪಿದಂತಾಗಿದೆ ಹಾಗೂ ಆರ್ಥಿಕವಾಗಿ ಸಬಲರಾಗಿದ್ದಾರೆ” ಎಂದರು.
“ಬಿಟ್ಟಿ ಭಾಗ್ಯವೆಂದು ಬೊಬ್ಬೆ ಹೊಡೆಯುವವರಿಗೆ ಕೇಂದ್ರದ ಸಾಲ 2024-25ನೇ ಸಾಲಿನಲ್ಲಿ ₹11.63ಲಕ್ಷ ಕೋಟಿ ರೂ. ಹಾಗೂ 2025-26ನೇ ಸಾಲಿನಲ್ಲಿ ₹11.54 ಲಕ್ಷ ಕೋಟಿ ರೂ. ವಿತ್ತೀಯ ಕೊರೆತೆ -4.4 ಕುಸಿದರೆ ಅದೇ ಗ್ಯಾರೆಂಟಿ ಯೋಜನಗಳನ್ನು ಕೊಟ್ಟರೂ ಕೂಡ ರಾಜ್ಯದ ಸಾಲ 2024-25ನೇ ಸಾಲಿನಲ್ಲಿ ₹1,00,706 ಕೋಟಿ ರೂ. ಇದ್ದರೆ 2025-26ನೇ ಸಾಲಿನಲ್ಲಿ ವಿತ್ತೀಯ ಕೊರೆತೆ ಶೇ.2.9 ಇದೆ. ವಿಪರ್ಯಾಸ ಎಂದರೆ ಗ್ಯಾರೆಂಟಿ ಯೋಜನೆಗಳನ್ನು ಟೀಕೆ ಮಾಡುವವರೇ ಇವತ್ತು ಬೇರೆ ಬೇರೆ ರಾಜ್ಯಗಳಲ್ಲಿ ಈ ಯೋಜನೆಗಳನ್ನು ಜಾರಿಮಾಡಿದ್ದಾರೆ” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಶ್ರೀರಂಗಪಟ್ಟಣ | ವೈಜ್ಞಾನಿಕ ರೂಢಿಗಳಿಂದ ಮಾತ್ರ ಸಮಸಮಾಜ ನಿರ್ಮಾಣ ಸಾಧ್ಯ: ಅಗಲೆ ಯಾದವ್
ಈ ಸಂದರ್ಭದಲ್ಲಿ ಗ್ಯಾರಂಟಿ ಯೋಜನೆ ಪ್ರಾಧಿಕಾರ ರಾಜ್ಯ ಅಧ್ಯಕ್ಷ ಎಚ್ ಎಂ ರೇವಣ್ಣ, ಎಸ್ ಆರ್ ಪಾಟೀಲ(ಬ್ಯಾಡಗಿ), ಪುಷ್ಪ ಅಮರನಾಥ ರೆಡ್ಡಿ, ಜಿಲ್ಲಾ ಗ್ಯಾರೆಂಟಿ ಯೋಜನೆ ಪ್ರಾಧಿಕಾರದ ಅಧ್ಯಕ್ಷ ಇಲಿಯಾಸ ಬೋರಮಣಿ, ಶಾಸಕರಾದ ಸಿ ಎಸ್(ಅಪ್ಪಾಜಿ) ನಾಡಗೌಡ, ಅಶೋಕ ಮನಗೂಳಿ, ವಿಧಾನ ಪರಿಷತ್ ಸದಸ್ಯರಾದ ಸುನಿಲ ಗೌಡ ಪಾಟೀಲ, ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ, ಗ್ಯಾರೆಂಟಿ ಯೋಜನೆ ಅನುದಾನ ಸಮಿತಿಯ ಜಿಲ್ಲೆಯ ಎಲ್ಲ ಪದಾಧಿಕಾರಿಗಳು, ಜಿಲ್ಲಾಡಳಿತ ಜಿಲ್ಲಾ ಪಂಚಾಯತ್ ಸಿಬ್ಬಂದಿಗಳು ಇದ್ದರು.





