ಬಸವಣ್ಣನವರ ಜನ್ಮಭೂಮಿ, ಸೂಫಿ ಸಂತರು ನಡೆದಾಡಿದ ವಿಜಯಪುರ ಜಿಲ್ಲೆ ಭಾವೈಕ್ಯತೆಗೆ ಹೆಸರಾಗಿದೆ ಎಂದು ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಎಂ ಬಿ ಪಾಟೀಲ ಹೇಳಿದರು.
ನಗರದಲ್ಲಿ ಕೆ ಸಿ ಮಾರುಕಟ್ಟೆ ವ್ಯಾಪಾರಸ್ಥರ ಸಂಘ ಪವಿತ್ರ ರಂಜಾನ್ ಅಂಗವಾಗಿ ಆಯೋಜಿಸಿದ್ದ ಇಫ್ತಿಯಾರ್ ಕೂಟದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಬಸವಾದಿ ಶರಣರು ಸಮ ಸಮಾಜಕ್ಕಾಗಿ ಶ್ರಮಿಸಿದ್ದಾರೆ. ಆದಿಲ್ ಶಾಹಿಗಳು ಸಮಾಜವನ್ನು ಅಭಿವೃದ್ಧಿ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಸೌಹಾರ್ದತೆ ಮತ್ತು ಭಾವೈಕ್ಯತೆಗೆ ಜಿಲ್ಲೆ ಹೆಸರಾಗಿದೆ. ಈ ಬಾರಿ ಯುಗಾದಿ ಮತ್ತು ರಂಜಾನ್ ಜೊತೆಗೆ ಬಂದಿವೆ. ಎಲ್ಲರಿಗೂ ದೇವರು ಒಳಿತನ್ನು ಮಾಡಲಿ ಎಂದು ಹೇಳಿದರು.
ಇದನ್ನೂ ಓದಿ: ವಿಜಯಪುರ | ನೀರಾವರಿಗಾಗಿ ಭೂಮಿ ಕಳೆದುಕೊಂಡ ರೈತರ ಕಣ್ಣೀರು ಒರೆಸಲು ಸರ್ಕಾರ ಮುಂದಾಗಿದೆ: ಸಚಿವ ಎಂ ಬಿ ಪಾಟೀಲ
ಈ ಸಂದರ್ಭದಲ್ಲಿ ವಿಜಯಪುರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಗಂಗಾಧರ ಎಸ್. ಸಂಬಣ್ಣಿ, ಧರ್ಮಗುರು ತನ್ವೀರ್ ಪೀರಾ ಹಾಶ್ಮಿ, ಕಾಂಗ್ರೆಸ್ ಮುಖಂಡ ಅಬ್ದುಲ್ ಹಮೀದ್ ಮುಶ್ರಿಫ್, ಪ್ರಮಾಜಿ ಅಧ್ಯಕ್ಷ ಕನ್ನಾನ್ ಮುಶ್ರಿಫ್, ಮಾಜಿ ಮೇಯರ್ ಸಜ್ಜಾದೆ ಪೀರಾ ಮುಶ್ರಿಫ್, ಮುಖಂಡರಾದ ಆಜಾದ್ ಪಟೇಲ್, ಎಸ್ ಎಂ ಪಾಟೀಲ ಗಣಿಹಾರ, ಮಹಾದೇವ ಪವಾರ, ಅಶ್ಪಾಕ್ ಮನಗೂಳಿ, ಚಾಂದಸಾಬ ಗಡಗಲಾವ, ಅಬ್ದುಲ್ ರಜಾಕ್ ಹೊರ್ತಿ, ರಫೀಕ್ ಟಪಾಲ್, ಮೈನುದ್ದೀನ್ ಬೀಳಗಿ, ಶಕೀಲ ಸುತಾರ, ಜಮೀರ್ ಉಸ್ತಾದ, ಶಕೀಲ ಬಾಗಮಾರೆ, ಜಮೀರ್ ಭಕ್ಷಿ, ಶಬ್ಬೀರ ಜಹಾಗೀರದಾರ, ದಿನೇಶ ಹಳ್ಳಿ ಮುಂತಾದವರು ಉಪಸ್ಥಿತರಿದ್ದರು.





