ಉದ್ಯಮಗಳಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರಿಗೆ ರಾಜ್ಯ ಸರ್ಕಾರ ಕನಿಷ್ಟ ವೇತನ ಕರಡು ಅಧಿಸೂಚನೆಯನ್ಸ್ ಪ್ರಕಟಿಸಿದೆ. ಇದರಲ್ಲಿ ಕಾರ್ಮಿಕ ಸಂಘಟನೆಗಳು ಮಾಲೀಕರ ಸಂಘಟನೆಗಳು ಆಕ್ಷೇಪಣೆಗಳನ್ನು ಹಾಗೂ ಸಲಹೆಗಳನ್ನು ನೀಡಿರುತ್ತಾರೆ. ಇದರ ಭಾಗವಾಗಿ ಎರಡು ಸುತ್ತು ಚರ್ಚೆ ನಡೆದಿರುತ್ತದೆ, ಅದೇ ರೀತಿ ಕನಿಷ್ಟ ಕೂಲಿಯನ್ನು ಜಾರಿಗೆ ಮಾಡಬೇಕು ಎಂದು CITU ವಿಜಯಪುರ ಜಿಲ್ಲಾ ಸಂಚಾಲಕ ಲಕ್ಷ್ಮಣ ಹಂದ್ರಾಳ ಒತ್ತಾಯಿಸಿದರು.
ನಗರದ ಕಾರ್ಮಿಕ ಇಲಾಖೆಯ ಮುಂದೆ ಪ್ರತಿಭಟನೆ ಮಾಡಿ, ಕಾರ್ಮಿಕ ಅಧಿಕಾರಿ ಉಮಾಶ್ರೀ ಕೋಳಿ ಅವರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ ಅವರು ಮಾತನಾಡಿದರು.
ಈ ವೇಳೆ ಸುರೇಶ್ ಜಿಬಿಯವರು ಮಾತನಾಡಿ, “ಕನಿಷ್ಠ ವೇತನ ಪರಿಷ್ಕರಣೆಯಾಗಿರುವುದಿಲ್ಲ. ಕಾರ್ಮಿಕರ ಬೇಡಿಕೆಯ ಸಲುವಾಗಿ ದೇಶಾದ್ಯಂತ ಹೋರಾಟ ಮಾಡಲಾಗುತ್ತದೆ. ಬಂಡವಾಳಶಾಹಿ ವ್ಯವಸ್ಥೆಯಲ್ಲಿ ಸರ್ಕಾರಗಳು ಕಾರ್ಮಿಕ ವಿರೋಧಿ ಕಾನೂನುಗಳನ್ನು ಜಾರಿಗೆ ತರುತ್ತವೆ, ಇವುಗಳನ್ನು ಜಾರಿಯಾಗದಂತೆ ತಡೆಯಬೇಕು” ಎಂದು ಕರೆಕೊಟ್ಟರು.
ಕಟ್ಟಡ ಕಾರ್ಮಿಕ ಸಂಘಟನೆಯ ಸಂಚಾಲಕ ಈರಣ್ಣ ಬೆಳ್ಳುಂಡಗಿ ಮಾತನಾಡಿ, “ಕಟ್ಟಡ ಕಾರ್ಮಿಕ ಕಾನೂನು 1996 ಹಾಗೂ ಸೇಸ್ ಕಾನೂನುಗಳನ್ನು ಮರು ಸ್ಥಾಪಿಸಿ ಕಲ್ಯಾಣ ಮಂಡಳಿ ಹಾಗೂ ಕಾರ್ಮಿಕರ ಬದುಕನ್ನು ರಕ್ಷಿಸಬೇಕು. ದೇಶದಲ್ಲಿ ಏಳು ಕೋಟಿಗಿಂತ ಅಧಿಕ ಕಟ್ಟಡ ಕಾರ್ಮಿಕರಿದ್ದಾರೆ. ನಾಲ್ಕು ಲೇಬರ್ ಕೋಡ್ ಗಳಿಂದ ಬಿಒಸಿಡಬ್ಲ್ಯೂ ಅಡಿಯಲ್ಲಿ ಕಾರ್ಮಿಕರು ಪಡೆಯುತ್ತಿದ್ದ ರಕ್ಷಣೆ ಹಾಗೂ ಸೌಲಭ್ಯಗಳ ಮೇಲೆ ಸಾಕಷ್ಟು ಅಡ್ಡ ಪರಿಣಾಮ ಬೀರಲಿವೆ. ಎಲ್ಲ ಸಂಘಟಿತ ಅನಂಘಟಿತ ಕಾರ್ಮಿಕರಿಗೆ ಮಾನ್ಯ ಸರ್ವೋಚ್ಚ ನ್ಯಾಯಾಲಯದ ತೀರ್ಪಿನ ಇವತ್ತಿನ ಗ್ರಾಹಕ ಬೆಲೆ ಸೂಚ್ಯಂಕ, ಮನೆ ಬಾಡಿಗೆ ಹಾಗೂ ಇತರೆ ಖರ್ಚುಗಳ ಆಧಾರದಲ್ಲಿ ರಾಜ್ಯದ ಕಾರ್ಮಿಕ ಸಂಘಟನೆಗಳು ನೀಡಿರುವ ಸಲಹೆಗಳನ್ನು ಪರಿಗಣಿಸಬೇಕು” ಎಂದರು.
ಇದನ್ನೂ ಓದಿ: ವಿಜಯಪುರ | ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯತ್ವ ನವೀಕರಣಕ್ಕೆ ಅರ್ಜಿ ಆಹ್ವಾನ
ಗ್ರಾಮ ಪಂಚಾಯಿತಿ ನೌಕರರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲಾಲ್ ಅಹಮದ್ ಶೇಕ್ ಮಾತನಾಡಿದರು.
ಈ ವೇಳೆ ಸುಮಂಗಲಾ ಶೆಟ್ಟಿ,ಕಟ್ಟಡ ಕಾರ್ಮಿಕರ ಸಹ ಸಂಚಾಲಕರಾದ ಸಿದ್ದು ಅಂಗಡಿ, ಸಂಗಪ್ಪ ಕಪಾಲಿ, ಸುರೇಖಾ ವಾರೆ,ಮಹಾನಂದ ಚೌಹಾಣ್, ನೈನಜ್ ಮುಲ್ಲಾ, ರೇಣುಕಾ ನುಣಗಾರ್, ಮಹಾದೇವಿ ಸಾಶೆಟ್ಟಿ, ಮೋದಿನ್ ಸಾಬ್ ಮಮದಾಪುರ್, ಪರಶುರಾಮ್ ಬೆನಕಟ್ಟಿ, ಶಿವಾನಂದ ಅಣಿಮಿ ಮುಂತಾದವರು ಭಾಗವಹಿಸಿದ್ದರು.





