2026-27ನೇ ಸಾಲಿನಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖಾ ವತಿಯಿಂದ ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ಧ, ಸಿಖ್ ಹಾಗೂ ಪಾರ್ಸಿ ಅಭ್ಯರ್ಥಿಗಳಿಗೆ ಪಿಯುಸಿ ಶಿಕ್ಷಣದೊಂದಿಗೆ ಎರಡು ವರ್ಷಗಳ NEET, JEE, K-SET, ICAR, CA-ಫೌಂಡೇಶನ್, CLAT, CUET ಪರೀಕ್ಷೆಗಳಿಗೆ ಪೂರ್ವ ಉಚಿತ ತರಬೇತಿಗಾಗಿ ಆನ್‌ಲೈನ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಜಾಲತಾಣ https://dom.karnataka.gov.in ಮೂಲಕ ಅರ್ಜಿ ಸಲ್ಲಿಸಬಹುದಾಗಿದ್ದು, ಅರ್ಜಿ ಸಲ್ಲಿಸಲು ಮಾರ್ಚ್ 31 ಕೊನೆಯ ದಿನವಾಗಿದೆ.
ಹೆಚ್ಚಿನ ಮಾಹಿತಿಗೆ ವಿಜಯಪುರ ಉಪ ವಿಭಾಗದ ತಾಲೂಕು ವಿಸ್ತರಣಾಧಿಕಾರಿ ಮೊ:8970704986, ಇಂಡಿ ಉಪ ವಿಭಾಗದ ತಾಲೂಕು ವಿಸ್ತರಣಾಧಿಕಾರಿ ಮೊ:9900229780, ವಿಜಯಪುರ ಜಿಲ್ಲಾ ಅಲ್ಪಸಂಖ್ಯಾತರ ಮಾಹಿತಿ ಕೇಂದ್ರ ಮೊ:8123710766, ತಾಲೂಕು ಅಲ್ಪಸಂಖ್ಯಾತರ ಮಾಹಿತಿ ಕೇಂದ್ರಗಳಾದ ಬ.ಬಾಗೇವಾಡಿ ಮೊ:9972340721, ಮುದ್ದೇಬಿಹಾಳ ಮೊ:8722445552, ಮೊ:9900109759 ಹಾಗೂ ಸಿಂದಗಿ ಮೊ:9035558609ನ್ನು ಸಂಪರ್ಕಿಸಬಹುದು.
ಅದರಂತೆ ಅರಕೇರಿ ಅಲ್ಪಸಂಖ್ಯಾತರ ದೇಸಾಯಿ ಬಾಲಕಿಯರ ವಸತಿ ಶಾಲೆಯ ಪ್ರಾಂಶುಪಾಲ ಮಲ್ಲಿಕಾರ್ಜುನ: 9620828185, ಹಾಲಹಳ್ಳಿ ಮತ್ತು ಇಂಡಿ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ಪ್ರಾಂಶುಪಾಲ ರವಿಚಂದ್ರ ಕಾಂಬಳೆ ಮೊ:7892371709, ಸಿಂದಗಿ ಅಲ್ಪಸಂಖ್ಯಾತರ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲ ಸಿದ್ದಪ್ಪ ಕಾರಿಮುಂಗಿ ಮೊ:9980952960, ಮುದ್ದೇಬಿಹಾಳ ನಂ-1 ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲ ರಮೇಶ ಪಾಟೀಲ ಮೊ:9844493306, ಮುದ್ದೇಬಿಹಾಳ ನಂ-2 ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲರಾದ ಖೇಮು ರಾಠೋಡ ಮೊ:7259179398, ವಿಜಯಪುರದ ಅಫಜಲಪುರ ಟಕ್ಕೆ ಸರ್ಕಾರಿ ಮುಸ್ಲಿಂ ವಸತಿ ಶಾಲೆಯ ಪ್ರಾಂಶುಪಾಲ ಸಿದ್ರಾಮ ಎಂಟೆತ್ತ ಮೊ:9880103122, ಅರಕೇರಿ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಕಾಲೇಜು ಶಾಲೆಯ ಪ್ರಾಂಶುಪಾಲರಾದ ಸಂಗಣ್ಣ ಆಲಗೂರ ಮೊ:9591612073 ಇವರನ್ನು ಸಂಪರ್ಕಿಸಬಹುದು ಎಂದು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.
ಇದನ್ನೂ ಓದಿ: ವಿಜಯಪುರ | ಏ.10ರಿಂದ ರಾಜ್ಯಮಟ್ಟದ ಪುಸ್ತಕ ಮೇಳ





