ಕೇಂದ್ರ ಆಯವ್ಯಯ ಸಂಪೂರ್ಣ ಕಳಪೆಯಾಗಿದ್ದು, ಕೃಷಿ ಅಭಿವೃದ್ಧಿ, ರೈತನ ಕುರಿತು ಯಾವುದೇ ಕಾಳಜಿ ಇಲ್ಲ. ಎಸ್‌ಸಿ/ಎಸ್‌ಟಿ ಸಮುದಾಯಗಳ ಅಭಿವೃದ್ಧಿ ಬಗ್ಗೆ ವಿಶೇಷ ಕಾರ್ಯಕ್ರಮ ಇಲ್ಲ, ಒಟ್ಟಾರೆ ರಾಜ್ಯಕ್ಕೆ ಸೊನ್ನೆ ಬಜೆಟ್ ಮಂಡನೆಯಾಗಿದೆ. ಕೇಂದ್ರದ ಈ ನಡೆ ಖಂಡನೀಯ ಎಂದು ಮಾಜಿ ಶಾಸಕ ರಾಜು ಆಲಗೂರ ಆಕ್ರೋಶ ವ್ಯಕ್ತಪಡಿಸಿದರು.
ವಿಜಯಪುರದಲ್ಲಿ ಪತ್ರಿಕೆ ಪ್ರಕಟಣೆ ಹೊರಡಿಸಿರುವ ಅವರು, “ಜಿಲ್ಲೆಯ ಪ್ರವಾಸ ಅಭಿವೃದ್ಧಿಗ್ಗೆ ಪ್ರಸ್ತಾಪವಿಲ್ಲ, ಹಂಪಿಯನ್ನು ಕಡೆಗಣಿಸಿದ್ದಾರೆ” ಎಂದು ಆರೋಪಿಸಿದರು.
ಈ ಸುದ್ದಿ ಓದಿದ್ದೀರಾ? ಮೈಸೂರು | ಮನರೇಗಾ ಹೆಸರು ಬದಲಾವಣೆ; ಕೇಂದ್ರದ ವಿರುದ್ಧ ಅಹೋರಾತ್ರಿ ಧರಣಿ
“ವಿಜಯಪುರ ಜಿಲ್ಲೆಯನ್ನು ಕಡೆಗಣಿಸಿದ್ದಾರೆ. ಇಲ್ಲಿಯ ಸಂಸದರು ಲೋಕಸಭೆಯಲ್ಲಿ ಜಿಲ್ಲೆಯ ಅಭಿವೃದ್ಧಿ ಬಗ್ಗೆ ಬಾಯಿ ತೆಗೆದು ಪ್ರಸ್ತಾಪ ಮಾಡಿದ್ದರೆ ಪ್ರವಾಸೋದ್ಯಮ ಅಭಿವೃದ್ಧಿಗೆ ಹಣ ಸಿಗಬಹುದಿತ್ತು” ಎಂದು ಮಾಜಿ ಶಾಸಕರು ಅಭಿಪ್ರಾಯ ವ್ಯಕ್ತಪಡಿಸಿದರು.





