ಶರಣರ ವಿಚಾರಗಳು ಸಾರ್ವಕಾಲಿಕ ಸತ್ಯವಾಗಿವೆ. ಬಸವಣ್ಣನವರ ವಿಚಾರಗಳು ಇಂಗ್ಲಿಷ್ ಭಾಷೆಯಲ್ಲಿ ಇದ್ದಿದ್ದರೆ ಜಗತ್ತಿಗೇ ಪ್ರಸಿದ್ಧವಾಗಿರುತ್ತಿದ್ದವು ಎಂದು ವಿಜಯಪುರದ ಬಾಗೇವಾಡಿಯ ವಿರಕ್ತ ಮಠದ ಸಿದ್ದಲಿಂಗ ಮಹಾಸ್ವಾಮಿ ತಿಳಿಸಿದರು.
8ನೇ ವಿಜಯಪುರ ಕನ್ನಡ ಸಾಹಿತ್ಯ ಪರಿಷತ್ ಸಮ್ಮೇಳನದ ಶರಣ ಸಾಹಿತ್ಯದ ಚಿಂತನಗೋಷ್ಠಿಯ ಸಾನಿಧ್ಯವಹಿಸಿ ಅವರು ಮಾತನಾಡಿದರು. “ಶರಣರ ವಚನಗಳನ್ನು ನಾವು ಕೇಳುವುದಷ್ಟೇ ಅಲ್ಲ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಶರಣರ ಪ್ರತಿ ವಿಚಾರವೂ ಇಂದಿಗೂ ಪ್ರಸ್ತುತವಾಗಿವೆ” ಎಂದರು.
ಇದೇ ಸಂದರ್ಭದಲ್ಲಿ ಮಧುಮಾಲ ಲೇಗಾಡೆಯವರ ʼಶಿವ ಬೆಳಗುʼ ಹಾಗೂ ʼಸಿಂಧುʼ ಎಂಬ ಗ್ರಂಥಗಳನ್ನು ಬಿಡುಗಡೆ ಮಾಡಲಾಯಿತು.

ಉಪನ್ಯಾಸಕಿ ಶೋಭಾ ಮೇಡದಾರ ಮಾತನಾಡಿ, “ಶರಣ ಸಾಹಿತ್ಯಕ್ಕೆ ಶಿವಶರಣೆಯರ ಕೊಡುಗೆ ಅಪಾರವಾದದ್ದು, ಶರಣಯ್ಯರ ಕುಟುಂಬ ಮತ್ತು ಕಾಯಕ ಹಾಗೂ ಸಮಾಜ ಸೇವೆ ಎಲ್ಲವನ್ನು ಸರಿದೂಗಿಸಿಕೊಂಡು ಹೋದವರು ಅವರು” ಎಂದು ಹೇಳಿದರು.
ಉಪನ್ಯಾಸಕಿ ಶರಣಮ್ಮ ಹಾದಿಮನಿ ಮಾತನಾಡಿ, “12ನೇ ಶತಮಾನದಲ್ಲಿ ಶರಣರು ಕಾಯಕದ ಪ್ರಜ್ಞೆಯನ್ನು ಜಗತ್ತಿಗೆ ಸಾರಿದರು. ಕಾಯಕವೇ ಕೈಲಾಸ ಎನ್ನುವ ಬಸವಣ್ಣನವರು ದುಡಿದು ತಿನ್ನಬೇಕು ಎಂಬ ಶ್ರೇಷ್ಠ ಪ್ರಜ್ಞೆಯನ್ನು ಅಂದೇ ಮೂಡಿಸಿದ್ದರು” ಎಂದು ಹೇಳಿದರು.
ಇದನ್ನೂ ಓದಿ: ವಿಜಯಪುರ | ಜ.25ರಂದು ರಾಷ್ಟೀಯ ಮತದಾರರ ದಿನಾಚರಣೆ
ಡಾ. ಮಲ್ಲಿಕಾರ್ಜುನ ಮೇತ್ರಿ ಜಂಬುನಾಥ ಚಂಚಾಣಿ ಮಾತನಾಡಿದರು. ಡಾ. ಐ ಡಿ ಐಹೊಳಿ ಅಧ್ಯಕ್ಷತೆ ವಹಿಸಿದ್ದರು. ರಾಜೇಶ್ವರಿ ಮೊಪಗಾರ, ಡಾ. ವಿ ಬಿ ಮರ್ತುರ, ಆರ್ ಜಿ ಅಳ್ಳಗಿ, ಡಾ. ರಾಜಶೇಖರ ಬೆನಕನಹಳ್ಳಿ, ಲಲಿತಾ ಬಿರಾದಾರ, ಗೀತಾ ಚೌಧರಿ, ಸುಶೀಲಬಾಯಿ ತಲೆವಾಡ, ಜಯಶ್ರೀ ಕೌಲಗಿ ಹಾಗೂ ಇತತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.





