ನೈಜ ಚುನಾವಣೆ ಎಂದು ಕರೆಯಬೇಕಾದರೆ ಮತಗಳ್ಳತನ ನಿಲ್ಲಬೇಕು, ಜನರ ಭಾವನೆಗಳಿಗೆ ಆಸ್ಪದ ನೀಡಬೇಕು ಹಾಗೂ ಚುನಾವಣೆಗಳು ದೋಷ ಮುಕ್ತವಾಗಿ ನಡೆಯಬೇಕು ಎಂದು ಕಾಂಗ್ರೆಸ್ ಪಕ್ಷದ ರಾಜ್ಯ ಪ್ರಚಾರ ಸಮಿತಿ ಅಧ್ಯಕ್ಷ ವಿನಯ್ ಕುಮಾರ್ ಸೊರಕೆ ಹೇಳಿದರು.
ಉಡುಪಿ ಕಾಂಗ್ರೆಸ್ ಭವನದಲ್ಲಿ ನಡೆದ ಜಿಲ್ಲಾ ಕಾಂಗ್ರೆಸ್ ಸಮಿತಿಯ ಸಭೆಯಲ್ಲಿ ಅವರು ಮಾತನಾಡುತ್ತಾ, ಚುನಾವಣಾ ಆಯೋಗದೊಂದಿಗೆ ಬಿಜೆಪಿ ನಡೆಸುತ್ತಿರುವ ಮತಗಳ್ಳತನದ ವಿರುದ್ಧ ರಾಜ್ಯದಾದ್ಯಂತ 70 ರಿಂದ 80 ಲಕ್ಷ ಸಹಿ ಸಂಗ್ರಹಿಸಲಾಗಿದೆ. ಮತಗಳ್ಳತನವು ರಾಷ್ಟ್ರಮಟ್ಟದ ಗಂಭೀರ ವಿಚಾರವಾಗಿದ್ದು, ಸಹಿ ಸಂಗ್ರಹದ ಬಳಿಕ ರಾಷ್ಟ್ರಪತಿಗಳಿಗೆ ಸಲ್ಲಿಸಲಾಗುವುದು ಎಂದು ತಿಳಿಸಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡುವೂರು ಮಾತನಾಡಿ, ಪಕ್ಷ ಬಲಪಡಿಸದೆ ಚುನಾವಣೆ ಗೆಲ್ಲುವುದು ಅಸಾಧ್ಯ. ಕೇಂದ್ರ ಸರ್ಕಾರ ಮತಗಳ್ಳತನದ ಧೋರಣೆಯನ್ನು ನಿಲ್ಲಿಸದಿದ್ದರೆ ಚುನಾವಣೆ ನಡೆಸುವುದೇ ವ್ಯರ್ಥ. ಬಿಜೆಪಿಯ ಈ ಷಡ್ಯಂತ್ರವನ್ನು ಜನತೆಗೆ ತಿಳಿಸಲು ಸಹಿ ಸಂಗ್ರಹ ಅಭಿಯಾನ ಅತ್ಯಂತ ಪ್ರಾಮುಖ್ಯವಾಗಿದೆ ಎಂದು ಹೇಳಿದರು.
ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ ಅವರು ಮಾತನಾಡಿ, ಕರ್ನಾಟಕ, ಮಹಾರಾಷ್ಟ್ರದ ನಂತರ ಹರಿಯಾಣದಲ್ಲೂ ಮತಗಳ್ಳತನದ ಆರೋಪಗಳು ಕೇಳಿಬಂದಿವೆ. ಅಂಕಿ ಅಂಶಗಳೊಂದಿಗೆ ಮತಗಳ್ಳತನ ಹೇಗೆ ನಡೆಯುತ್ತಿದೆ ಎಂಬುದನ್ನು ವಿಶ್ಲೇಷಿಸಬೇಕು. ಚುನಾವಣಾ ಆಯೋಗ ಇದನ್ನು ಗಂಭೀರವಾಗಿ ಪರಿಗಣಿಸಬೇಕು. ಸಹಿ ಸಂಗ್ರಹದೊಂದಿಗೆ ಜನಜಾಗೃತಿ ಮೂಡಿಸುವುದು ಅಗತ್ಯ ಎಂದರು.
ಈ ಸಂದರ್ಭದಲ್ಲಿ ಕರಾವಳಿ ಪ್ರಾಧಿಕಾರದ ಅಧ್ಯಕ್ಷರಾಗಿ ಆಯ್ಕೆಯಾದ ಎಂ.ಎ. ಗಪೂರ್, ರಾಜ್ಯ ಕ್ರೈಸ್ತ ಅಭಿವೃದ್ಧಿ ನಿಗಮದ ನಿರ್ದೇಶಕರಾದ ಪ್ರಶಾಂತ್ ಜತ್ತನ್ನ, ಹಾಗೂ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಬಿಪಿನ್ ಚಂದ್ರ ಪಾಲ್ ನಕ್ರೆ ಅವರನ್ನು ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಸನ್ಮಾನಿಸಲಾಯಿತು.
ಸಭೆಯಲ್ಲಿ ಎಂ.ಎ. ಗಪೂರ್, ಪ್ರಸಾದ್ ರಾಜ್ ಕಾಂಚನ್, ದಿನೇಶ್ ಹೆಗ್ಡೆ ಮೊಳಹಳ್ಳಿ, ಮಲ್ಲಾಡಿ ಶಿವರಾಂ ಶೆಟ್ಟಿ, ವೆರೋನಿಕಾ ಕರ್ನೇಲಿಯೋ, ಕೃಷ್ಣ ಶೆಟ್ಟಿ ಬಜಗೋಳಿ, ಹರೀಶ್ ಕಿಣಿ, ದಿನಕರ ಹೇರೂರು, ನವೀನ್ ಚಂದ್ರ ಶೆಟ್ಟಿ, ಹಿರಿಯಣ್ಣ, ಶಬ್ಬೀರ್ ಅಹ್ಮದ್, ದೇವಕಿ ಸಣ್ಣಯ್ಯ, ಶಂಕರ್ ಕುಂದರ್, ವೈ. ಸುಕುಮಾರ್, ರಮೇಶ್ ಕಾಂಚನ್, ರಾಘವೇಂದ್ರ ಶೆಟ್ಟಿ ಕರ್ಜೆ, ಶುಭದ ರಾವ್ ಕಾರ್ಕಳ, ರಮೇಶ್ ಶೆಟ್ಟಿ, ಮಹಾಬಲ ಕುಂದರ್, ಪ್ರಖ್ಯಾತ್ ಶೆಟ್ಟಿ, ಜಯ ಕುಮಾರ್, ಕಿರಣ್ ಹೆಗ್ಡೆ, ಡಾ. ಸುನಿತಾ ಶೆಟ್ಟಿ, ಮಮತಾ ಶೆಟ್ಟಿ, ರೋಶನಿ ಒಲಿವರಾ, ಹರಿಪ್ರಸಾದ್ ರೈ, ಲಕ್ಷ್ಮೀಶ ಶೆಟ್ಟಿ, ಎಂ.ಪಿ. ಇದಿನಬ್ಬ, ದಿಲೀಪ್ ಹೆಗ್ಡೆ ಕುಕ್ಕೆಹಳ್ಳಿ, ಹಬೀಬ್ ಆಲಿ, ಸೌರವ್ ಬಲ್ಲಾಳ್, ಮೀನಾಕ್ಷಿ ಮಾಧವ ಬನ್ನಂಜೆ, ಗೋಪಿ ನಾಯ್ಕ, ಫರ್ಜಾನಾ ಸಂಜಯ, ಬಾಲಕೃಷ್ಣ ಪೂಜಾರಿ, ಸುರೇಶ್ ಶೆಟ್ಟಿ ಬನ್ನಂಜೆ, ಉದ್ಯಾವರ ನಾಗೇಶ್ ಕುಮಾರ್, ಕಿಶೋರ್ ಕುಮಾರ್ ಎರ್ಮಾಳ್, ಸತೀಶ್ ಕೊಡವೂರು, ಸಂಜಯ ಆಚಾರ್ಯ ಸೇರಿದಂತೆ ಅನೇಕ ನಾಯಕರು ಉಪಸ್ಥಿತರಿದ್ದರು.
ಸಹಕಾರಿ ಕಾಂಗ್ರೆಸ್ ಅಧ್ಯಕ್ಷ ಅಣ್ಣಯ್ಯ ಸೇರಿಗಾರ್ ಸ್ವಾಗತಿಸಿದರು. ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಜ್ಯೋತಿ ಹೆಬ್ಬಾರ್ ವಂದಿಸಿದರು. ಜಿಲ್ಲಾ ವಕ್ತಾರ ಭಾಸ್ಕರ ರಾವ್ ಕಿದಿಯೂರು ಕಾರ್ಯಕ್ರಮ ನಿರ್ವಹಿಸಿದರು.





