ಉಡುಪಿ | ಎಂಟು ಮಕ್ಕಳಿದ್ದರೂ ಅನ್ನ ಆಹಾರವಿಲ್ಲದೆ ವೃದ್ಧ ತಾಯಿ ಉಪವಾಸ !

Date:

ಮಕ್ಕಳಿಂದ ಸಿಗಬೇಕಾದ ಜೀವನಾಂಶದ ಆದೇಶವಿದ್ದರೂ ಸಿಗದೆ ದಿನ ಕಳೆಯಲು ಇನ್ನೊಬ್ಬರ ಕೈಕಾಲು ಹಿಡಿಯಬೇಕಾದ ಪರಿಸ್ಥಿತಿಯಲ್ಲಿ ಬದುಕುತ್ತಿದ್ದ ವೃದ್ದ ತಾಯಿ ಮನನೊಂದು ಮನಸ್ಥಿತಿಯನ್ನು ಕಳೆದುಕೊಂಡು ನ್ಯಾಯಾಲಯದ ಮೆಟ್ಟಿಲಲ್ಲಿ ರೋದಿಸುತ್ತಿದ್ದು ಆಕೆಯನ್ನು ಹಾಗೂ ಆಕೆಯ ಅಸಹಾಯಕ ಮಗನನ್ನು ವಿಶುಶೆಟ್ಟಿ ಅಂಬಲಪಾಡಿಯವರು ತುರ್ತು ಚೇತರಿಕೆಗಾಗಿ ಬಾಳಿಗಾ ಆಸ್ಪತ್ರೆಗೆ ದಾಖಲಿಸಿದ ಘಟನೆ ನಡೆದಿದೆ‌.

ಶಂಕರಪುರದ ನಿವಾಸಿ ಗ್ರೇಸಿ ಡಿಸಿಲ್ವಾ (80 ವರ್ಷ) ಹಾಗೂ ಮಗ ಅಸಹಾಯಕರಾದವರು. ನಾಲ್ಕು ದಿನಗಳ ಹಿಂದೆ ವೃದ್ದ ಮಹಿಳೆಯನ್ನು ರಕ್ಷಿಸಿ ವಿಶುಶೆಟ್ಟಿ ಸಂಬಂಧಪಟ್ಟ ಇಲಾಖೆಯ ಗಮನಕ್ಕೆ ತಂದಿದ್ದರು. ಇದೀಗ ವೃದ್ದ ಮಹಿಳೆ ಉಟ್ಟ ಉಡುಪಿನಲ್ಲಿ ಪುನಃ ನ್ಯಾಯಾಲಯಕ್ಕೆ ಬಂದಿದ್ದು ವಿಶುಶೆಟ್ಟಿಯವರು ಸಖಿ ಸೆಂಟರಿನ ಕಾನೂನು ಸಲಹೆಗಾರರಾದ ಅಂಜಲಿನ್ ಮೆಂಡೋನ್ಸಾ ಹಾಗೂ ಮಹಿಳಾ ಪೋಲಿಸರ ಸಹಾಯದಿಂದ ರಕ್ಷಿಸಿ ಜೊತೆಗೆ ಶಂಕರಪುರ ಮನೆಯಲ್ಲಿ ಉಪವಾಸವಿದ್ದ ಮಗನನ್ನು ಕರೆತಂದು ದಾಖಲಿಸಿದ್ದಾರೆ.

ವೃದ್ದೆಯ ಬ್ಯಾಂಕಿನಲ್ಲಿದ್ದ ಲಕ್ಷಾಂತರ ರೂಪಾಯಿ ಹಣವನ್ನು ಮಕ್ಕಳು ಮೋಸ ಮಾಡಿ ತೆಗೆದುಕೊಂಡು ನನ್ನನ್ನು ನಡು ದಾರಿಯಲ್ಲಿ ಬಿಟ್ಟಿದ್ದಾರೆ. ಸ್ಪಂದಿಸುತ್ತಿದ್ದ ಓರ್ವ ಕೂಡ ಈಗ ಸ್ಪಂದಿಸುತ್ತಿಲ್ಲ. ಎಂಟು ಮಕ್ಕಳಿದ್ದರೂ ಅನ್ನ ಆಹಾರವಿಲ್ಲದೆ ಉಪವಾಸದಲ್ಲಿ ಬದುಕುವಂತ ಪರಿಸ್ಥಿತಿ ನನಗೆ ಬಂದಿದೆ. ಆರೋಗ್ಯ ಕೂಡಾ ಹದಗೆಟ್ಟಿದೆ. ಈ ಬಗ್ಗೆ ಮಾನ್ಯ ಕುಂದಾಪುರ ಉಪ ವಿಭಾಗಾಧಿಕಾರಿಯವರ ನ್ಯಾಯಲಯದಿಂದ ನನಗೆ ಮಕ್ಕಳು ನೀಡಬೇಕಾದ ಜೀವನಾಂಶ ಹಣ ಹಾಗೂ ಆಶ್ರಯದ ಬಗ್ಗೆ 5 ವರ್ಷಗಳ ಹಿಂದೆ ಆದೇಶ ಆಗಿದೆ ಎಂದಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ತೀರಾ ಅಸಹಾಯಕ ಸ್ಥಿತಿಯಲ್ಲಿ ಬದುಕುತ್ತಿದ್ದ ಇವರಿಗೆ ಕೂಡಲೇ ನ್ಯಾಯ ಸಿಗಲಿ ಹಾಗೂ ಇವರು ವಾಸಿಸುತ್ತಿದ್ದ ಮನೆಯ ಸುತ್ತ ಹುಲ್ಲು ದಟ್ಟವಾಗಿ ಬೆಳೆದಿದ್ದು ನೆಮ್ಮದಿಯ ಜೀವನಕ್ಕೆ ಸಂಬಂಧಪಟ್ಟ ಇಲಾಖೆ ಕೂಡಲೇ ಸ್ಪಂದಿಸುವಂತೆ ವಿಶುಶೆಟ್ಟಿಯವರು ಆಗ್ರಹಿಸಿದ್ದಾರೆ.

ಈ ಬಗ್ಗೆ ಮಾಧ್ಯಮದ ಜೊತೆ ಮಾಹಿತಿ ಹಂಚಿಕೊಂಡ ಸಮಾಜ ಸೇವಕ ವಿಶು ಶೆಟ್ಟಿ, ವೃದ್ದೆಯು ಉತ್ತಮ ಆರೋಗ್ಯವಂತರಾಗಿದ್ದರೂ ಸರಿಯಾದ ಆಹಾರವಿಲ್ಲದೆ ಅನಾರೋಗ್ಯಕ್ಕೆ ತುತ್ತಾಗಿದ್ದಾರೆ. ಅವರ ದೇಹದಲ್ಲಿ ರಕ್ತದ ಅಂಶ ಬಹಳಷ್ಟು ಕುಸಿದು ಅಪಾಯದ ಅಂಚಿನಲ್ಲಿದ್ದಾರೆ ಎಂದು ವೈದ್ಯಕೀಯ ಪರೀಕ್ಷೆಯಿಂದ ತಿಳಿದು ಬಂದಿದೆ. ಇಂತಹ ಅದೆಷ್ಟೋ ಪ್ರಕರಣಗಳಲ್ಲಿ ಹಿರಿಯ ನಾಗರಿಕರಿಗೆ ನ್ಯಾಯಾಲಯದ ಆದೇಶವಿದ್ದರೂ ಅದನ್ನು ಕಾರ್ಯರೂಪಕ್ಕೆ ತರುವಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಆದೇಶ ಪಾಲನೆ ಮಾಡದೇ ಕರ್ತವ್ಯ ಲೋಪ ಮಾಡುವುದು ಹಿರಿಯರಿಗೆ ಮಾಡುವ ದ್ರೋಹ. ಇನ್ನಾದರು ಅದೆಷ್ಟೋ ಆದೇಶವಾದ ಹಿರಿಯ ನಾಗರಿಕರ ಪ್ರಕರಣಗಳು ಕಾರ್ಯರೂಪಕ್ಕೆ ಕೂಡಲೇ ಬರುವಂತಾಗಲಿ ಎಂದು ಹೇಳಿದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...