ನಿಖಾ ಕಾರ್ಯಕ್ರಮವೊಂದರಲ್ಲಿ ಹಲ್ಲೆ ನಡೆಸಿರುವುದಾಗಿ ಆರೋಪಿಸಿ ದೂರು- ಪ್ರತಿದೂರು ದಾಖಲಾದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲ ಪೊಲೀಸ್ ಠಾಣೆಯಲ್ಲಿ ವರದಿಯಾಗಿದೆ.
ದೂರುದಾರರಾದ ಅಬುಸಾಲಿ ಆದಂ ಕುಂಞಿ ಎಂಬುವವರು ಶಬೀರ್ ಯಾನೆ ಚಬ್ಬಿ ಅವರ ನಿಖಾಹ ಕಾರ್ಯಕ್ರಮಕ್ಕೆ ಹೋದಾಗ, ಅಬ್ದುಲ್ ರಹಿಮಾನ್ ಅವರ ಪ್ರಚೋದನೆಗೆ ರೈಯೀಸ್ ಎಂಬವರು ರಾಡ್‌ನಿಂದ ಹಣೆಗೆ ಹೊಡೆದು ಗಾಯಪಡಿಸಿದ್ದು, ಇತರ ಆರೋಪಿಗಳು ಸೇರಿ ಅಬುಸಾಲಿಯನ್ನು ನೆಲಕ್ಕೆ ದೂಡಿ ತುಳಿದು, ಕಲ್ಲು ಎಸೆದು ಕಾಲಿಗೆ ಗಾಯಪಡಿಸಿರುವುದಾಗಿ ದೂರು ದಾಖಲಾಗಿದೆ.ಹಲ್ಲೆ ನಡೆಸುವ ದೃಶ್ಯಾವಳಿಗಳು ಘಟನಾ ಸ್ಥಳದಲ್ಲಿ ಅಳವಡಿಸಿದ್ದ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಶಬೀರ್ ಅವರ ಮದುವೆಗೆ ದೂರುದಾರರರು ಸಹಕರಿಸಿದ್ದೇ ಘಟನೆಯ ಕಾರಣವಾಗಿದೆ. ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಅಬುಸಾಲಿ ನೀಡಿದ ದೂರಿನ ಅನ್ವಯ ವಿಟ್ಲ ಪೊಲೀಸ್ ಠಾಣೆಯಲ್ಲಿ ಅ.ಕ್ರ: 142/2025 ಕಲಂ: 118(1),115(2) , 351(2) r/w 190 BNS-2023 ನಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗಿ ಅಹಮದ್ ರಈಸ್ ನ್ನು ವಶಕ್ಕೆ ಪಡೆದು ತನಿಖೆ ನಡೆಸಲಾಗುತ್ತಿದೆ.

ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪಿರ್ಯಾದಿದಾರರಾದ ಅಹಮದ್ ರಈಸ್ ರವರು ತನಗೆ ಅಲ್ಲಿ ಇದ್ದವರು ಸೇರಿ ಹಲ್ಲೆ ಮಾಡಿದ್ದಾರೆಂದು ಪ್ರತಿ ದೂರನ್ನು ನೀಡಿದ್ದು, ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಅ.ಕ್ರ: 144/2025 ಕಲಂ:352, 118(1), 115(2), 351(2) r/w 3(5) BNS-2023 ನಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.





