ಎಚ್ಚರ ಎಸ್‌ಐಆರ್ ಎಂಬುದು ಪ್ರಜಾತಂತ್ರವನ್ನು ಕೊಲ್ಲುವ ಅಸ್ತ್ರ: ಎದ್ದೇಳು ಕರ್ನಾಟಕದ ಆರೋಪ

Date:

ಚಿಕ್ಕಬಳ್ಳಾಪುರ: ಎಸ್‌ಐಆರ್ ಎಂಬುದು ಪ್ರಜಾತಂತ್ರದ ಕಗ್ಗೊಲೆಗೆ ಹೊಸ ಸಂಚಾಗಿದೆ.ಸಂವಿಧಾನದ ಮೂಲಭೂತ ಹಕ್ಕಾದ ಮತದಾನದಿಂದ ಈ ದೇಶದ ಮೂಲನಿವಾಸಿಗಳನ್ನು ದೂರವಿಡುವ ಹುನ್ನಾರ ಇದರ ಹಿಂದೆ ಇದ್ದು ಪ್ರತಿಯೊಬ್ಬರೂ ಈ ಬಗ್ಗೆ ಜಾಗೃತರಾಗಬೇಕು ಎಂದು ಎದ್ದೇಳು ಕರ್ನಾಟಕದ ಪ್ರತಿ ಜಿಲ್ಲೆಯಲ್ಲಿಯೂ ಜಾಗೃತಿ ಮೂಡಿಸುತ್ತಿದೆ ಎಂದು ಸಂಚಾಲಕ ರವಿ ಮೋಹನ್ ತಿಳಿಸಿದರು.

ನಗರದ ಪತ್ರಕರ್ತರ ಭವನದಲ್ಲಿ ಮಂಗಳವಾರ ಎದ್ದೇಳು ಕರ್ನಾಟಕ ನಡೆಸಿದ ಸುದ್ದಿಗೋಷ್ಟಿಯಲ್ಲಿ ಅವರು ಮಾತನಾಡಿದರು.
ಬಾಬಾ ಸಾಹೇಬ್ ಆಂಬೇಡ್ಕರ್ ರಚಿತ ಸಂವಿಧಾನವನ್ನು ಒಪ್ಪದ ಹಿಂದುತ್ವದ ಸನಾತನಿ ಪರಿವಾರ ಮತ್ತು ದೇಶವನ್ನು ಅಭಿವೃದ್ದಿಯ ಹೆಸರಿನಲ್ಲಿ ತನ್ನ ಖಾಸಗಿ ಸ್ವತ್ತನ್ನಾಗಿಸಲು ಬಯಸುವ ಕಾರ್ಪೊರೇಟ್ ಪರಿವಾರ ಕೂಡಿಕೊಂಡು ಈ ದೇಶದ ಸಂವಿಧಾನ ಮತ್ತು ಪ್ರಜಾತಂತ್ರ ವ್ಯವಸ್ಥೆಯನ್ನು ದ್ವೇಷಿಸುತ್ತವೆ ಏಕೆಂದರೆ ಇವರು ಬಯಸುವ ಕನಸಿಗೆ ಇವು ಕಂಠಕವಾಗಿವೆ.ಕಾರಣ ಭಾರತೀಯ ಸಂವಿಧಾನವು ಇವರು ಬಯಸುವ ಅಸಮಾನತೆಯನ್ನು ಸೃಷ್ಟಿಸುವ ಬದಲಿಗೆ ಸಮಾನತೆಯನ್ನು ಪ್ರತಿಪಾದಿಸುತ್ತದೆ ಎಂದರು.

ವರ್ಣ ಹಾಗೂ ವರ್ಗ ವ್ಯವಸ್ಥೆಯನ್ನು ಪ್ರತಿಪಾದಿಸುತ್ತಾ ಬಂದಿರುವ ಈ ಶಕ್ತಿಗಳಿಗೆ ಸಮಾನತೆ ಮತ್ತು ಸ್ವಾತಂತ್ರ್ಯ ಬೇಸರದ ವಿಚಾರಗಳಾಗಿವೆ.ಹಾಗಾಗಿಯೇ ಸಮಾನತೆ ಸ್ವಾತಂತ್ರ್ಯ ಸೋದರತೆ ಹಾಗೂ ಸಾಮಾಜಿಕ ನ್ಯಾಯವನ್ನು ಪ್ರತಿಪಾದಿಸುವ ಸಂವಿಧಾನವನ್ನು ಬದಲಾಯಿಸಿ ಇನ್ನೊಂದು ಸನಾತನವಾದಿ ಜಾತಿವಾದಿ ಕೋಮುವಾದಿ ಲಿಂಗವಾದಿ ಹಿಂದುತ್ವ ರಾಷ್ಟವಾಗಿ ಘೋಷಿಸುವುದು ಇವರ ಗುರಿಯಾಗಿದೆ ಇದನ್ನು ಸಾಧಿಸಲು ಸಂವಿಧಾನ ಬದಲಾಯಿಸುವಷ್ಟು ಸಂಖ್ಯಾಬಲವಿರುವ ಪಕ್ಷವಾಗಿ ಅಧಿಕಾರಕ್ಕೆ ಬರಬೇಕು.೪೦೦ ಮಂದಿ ಸಂಸದರ ಸಂಖ್ಯೆಯ ಗುರಿಯನ್ನು ಹೊಂದುವುದಕ್ಕಾಗಿ ಕಸರತ್ತು ಮಾಡುತ್ತಲೇ ಇದೆ. ಸಿಎಎ ಎನ್‌ಆರ್‌ಸಿ ಈಗ ಎಸ್‌ಐಆರ್ ವಿಶೇಷ ತೀವ್ರ ಮತಪಟ್ಟಿ ಪರಿಷ್ಕರಣೆ ಮೂಲಕ ಜನರ ಮನಸ್ಸು ಕೆಡಿಸಿ ಅದರ ಲಾಭ ತಾನು ಮಾಡಿಕೊಳ್ಳಲು ಮುಂದಾಗಿದೆ ಎಂದು ತಿಳಿಸಿದರು.

ಆರ್‌ಎಸ್‌ಎಸ್ ೨೦೨೫ರ ಅಕ್ಟೋಬರ್‌ಗೆ ೧೦೦ ವರ್ಷ ಪೂರೈಸಿದೆ ಆದರೂ ಅದರ ಹಿಂದುತ್ವ ರಾಷ್ಟ್ರದ ಕನಸು ಈಡೇರಲಿಲ್ಲ ಇದನ್ನು ಸಾಧಿಸಬೇಕಾದರೆ ಸಂವಿಧಾನವನ್ನು ಬದಲಾಯಿಸಲು ಬೇಕಾದ ಚಾರ್ ಸೌ ಪಾರ್ ಸಂಖ್ಯಾಬಲ ಲೋಕಸಭೆಯಲ್ಲಿ ಆಗಬೇಕು ಪರಿಸ್ಥಿತಿ ಇದರ ಹತ್ತಿರಕ್ಕೂ ಇಲ್ಲ ಕೋಮುದ್ವೇಷದ ಭಾಷಣಗಳು ಮುಸ್ಲೀಮರ ಕಾಡಿಸುವ ವಕ್ಫ್ ಕಾಯ್ದೆ ಪೆಹಲ್ಗಾಮ್ ಯವುದೂ ಕೈಹಿಡಿಯುತ್ತಿಲ್ಲ ಏನೇ ಆಗಲಿ ಅಧಿಕಾರದಲ್ಲಿ ಉಳಿಯಬೇಕು ಮಾತ್ರವಲ್ಲ ಚಾರ್‌ ಸೌ ದಾಟಬೇಕು.ಇದಕ್ಕಾಗಿ ಇರುವ ಏಕೈಕ ಮಾರ್ಗ ಪ್ರಜಾತಂತ್ರದ ಕಗ್ಗೊಲೆಯಾಗಿದೆ.ಚುನಾವಣೆ ಎಂಬ ದೇಹ ಇರಬೇಕು,ಆದರೆ ಅದರ ಆತ್ಮವನ್ನು ಕೊಲ್ಲಬೇಕು ಈ ನಿಟ್ಟಿನಲ್ಲಿ ಕಂಡುಕೊಂಡಿರುವ ಹೊಸ ಮಾರ್ಗವೇ ಎಸ್‌ಐಆರ್ ಎಂಬ ತಂತ್ರ ಎಂದು ದೂರಿದರು

ಜೀವಿಕ ನಾರಾಯಣಸ್ವಾಮಿ ಮಾತನಾಡಿ ಪ್ರಧಾನಿಗಳು ಯಾವುದೇ ಮುನ್ಸೂಚನೆ ಇಲ್ಲದೆ ಲೋಕಸಭೆಯಲ್ಲಿ ಚರ್ಚೆಯನ್ನೂ ನಡೆಸದೆ ದಿಢೀರಂತ ಎಸ್‌ಐಆರ್ ಜಾರಿಗೆ ತರಲಾಗಿದೆ.ಹಳೆಯ ಓಟರ್ ಕಾರ್ಡ್ ನಡೆಯುವುದಿಲ್ಲ ಹೊಸದನ್ನು ಕೊಳ್ಳಬೇಕು ಇದಕ್ಕೆ ಒದಗಿಸುವ ಆಧಾರ್ ರೇಷನ್ ಕಾರ್ಡ್ ದಾಖಲೆಗಳು ನಡೆಯುವುದಿಲ್ಲ ಎಂದಾಗ ಓಟ್ ಚೋರ್ ಗದ್ದೀ ಛೋಡ್ ಎಂಬ ಘೋಷಣೆ ಹೋರಾಟದ ರೂಪ ಪಡೆಯಿತು. ಎಡಿಆರ್ ಸಂಸ್ಥೆ ಸುಪ್ರಿಂಕೋರ್ಟಿಗೆ ಹೋಯಿತು ಎಸ್‌ಐಆರ್‌ಗೆ ತಡೆ ನೀಡಲಿಲ್ಲ.ಚುನಾವಣಾ ಆಯೋಗಕ್ಕೆ ಬೈದಂತೆ ಮಾಡಿ ಮತದಾನಕ್ಕೆ ಆಧಾರ್ ಪರಿಗಣಿಸಿ ಎಂದು ಡಿಲೀಟ್ ಆದವರ ಪಟ್ಟಿಯನ್ನು ಪರಿಗಣಿಸಿ ಎಂದು ತಾಕೀತು ಮಾಡಿದಂತೆ ಮಾಡಿ ಕೈತೊಳೆದುಕೊಂಡಿತು. ಇದೇ ಅವಧಿಯಲ್ಲಿ ಬಿಹಾರ ಚುನಾವಣೆ ನಡೆದಾಗ ೬೫ ಲಕ್ಷ ಓಟುಗಳು ಮತದಾರರ ಪಟ್ಟಿಯಿಂದ ಡಿಲೀಟ್ ಆದವು ೧೭೪ ಕ್ಷೇತ್ರಗಳಲ್ಲಿ ಡಿಲೀಟ್ ಆದ ಓಟುಗಳ ಸಂಖ್ಯೆ ಅಂತಿಮವಾಗಿ ಬಂದ ಗೆಲುವಿನ ಅಂತರಕ್ಕಿಂತ ಹೆಚ್ಚಿರುವುದು ಗಮನಿಸಬೇಕಾದ ಅಂಶ ಇವುಗಳ ಪೈಕಿ ೯೧ ಕ್ಷೇತ್ರಗಳು ವಿರೋಧ ಪಕ್ಷಗಳು ಗಟ್ಟಿಯಾಗಿ ನೆಲೆನಿಂತಿದ್ದ ಕ್ಷೇತ್ರಗಳಾಗಿದ್ದ ಈ ಪೈಕಿ ೭೫ ಕ್ಷೇತ್ರಗಳು ಎನ್‌ಡಿಎ ಪಾಲಾಗಿರುವುದು ಎಸ್‌ಐಆರ್ ಮ್ಯಾಜಿಕ್ ಆಗಿದೆ ಎಂದರು.

ಕೆಪಿಸಿಸಿ ಘಟಕದ ಮೊಹಮ್ಮದ್ ನೂರು ಉಲ್ಲಾ ಮಾತನಾಡಿ ಬಿಹಾರ ಚುನಾವಣೆ ಫಲಿತಾಂಶ ಪ್ರಕಟವಾದ ಬೆನ್ನಲ್ಲೇ ೧೨ ರಾಜ್ಯಗಳಲ್ಲಿ ಎಸ್‌ಐಆರ್ ಪ್ರಕ್ರಿಯೆ ನಡೆಸುವ ಘೋಷಣೆಯನ್ನು ಚುನಾವಣೆ ಆಯೋಗ ಮಾಡಿತು.ಫೇಸ್ ೨ ಎಂದು ಕರೆಯಲಾಗುವ ಈ ಪ್ರಕ್ರಿಯೆ ಛತ್ತೀಸ್‌ಘಡ ಗೋವಾ ಗುಜರಾತ್ ಕೇರಳ ಮಧ್ಯಪ್ರದೇಶ ರಾಜಸ್ಥಾನ ತಮಿಳುನಾಡು ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳ ಅಂಡಮಾನ್ ನಿಕೋಬಾರ್ ಲಕ್ಷ ದೀಪ್ ಪುದುಚೆರಿಗಳು ಭರದಿಂದ ಸಾಗಿದ್ದು ಕರಡು ಮತದಾರರ ಪಟ್ಟಿ ಬಿಡುಗಡೆ ಆಗುತ್ತಿವೆ.ಕರ್ನಾಟಕದಲ್ಲಿ ಈಗ ನಡೆಯುತ್ತಿದೆ ಎಂದರು.

ಎಸ್‌ಐಆರ್ ಪರಿಣಾಮ ಪಶ್ಚಿಮ ಬಂಗಾಳದಲ್ಲಿ-೫೮ ಲಕ್ಷ, ರಾಜಸ್ಥಾನ-೪೨ ಲಕ್ಷ, ಗೋವಾ-೧೦ ಲಕ್ಷ, ಗುಜರಾತ್-೭೪ ಲಕ್ಷ, ತಮಿಳುನಾಡು-೯೭ ಲಕ್ಷಕ್ಕೂ ಅಧಿಕ ಮತದಾರರನ್ನು ಪಟ್ಟಿಯಿಂದ ತೆಗೆದುಹಾಕಲಾಗಿದೆ.ಉತ್ತರ ಪ್ರದೇಶವೊಂದರಲ್ಲೇ ೩ ಕೋಟಿ ಮತಗಳನ್ನು ಕಟ್ ಮಾಡಿದ್ದಾರೆ ಎಂದ ಅವರು ಅತಿಹೆಚ್ಚಿನ ಓಟುಗಳು ಅವರು ಡಿಲೀಟ್ ಆಗಿರುವುದು ಅವರು ನೀಡಿರುವ ವಿಳಾಸದಲ್ಲಿ ಇಲ್ಲ ಎಂಬ ಕಾರಣಕ್ಕೆ ಆಗಿದೆ ಎಂದರು.

ಹಾಗಾದರೆ ಇವರೆಲ್ಲ ಎಲ್ಲಿ ಹೋದರು? ಯಾವುದೋ ಒಂದು ರಾಜ್ಯದಲ್ಲಿ ಸೇರ್ಪಡೆ ಆಗಿರಬೇಕಲ್ಲ.ಎಲ್ಲೆ ಇದ್ದರೂ ಅವರ ಹಕ್ಕನ್ನು ಕಸಿಯಲು ಆಗುವುದಿಲ್ಲ ತಾನೆ? ದೇಶದ ಯಾವುದೇ ಭಾಗದಲ್ಲಿ ಇದ್ದರೂ, ಪ್ರತಿಯೊಬ್ಬ ಭಾರತೀಯ ವಾಸಿಗೆ ಮತದಾನದ ಹಕ್ಕು ನೀಡುವುದು ಚುನಾವಣಾ ಆಯೋಗದ ಕರ್ತವ್ಯವಲ್ಲವೆ? ಮತದಾನದ ಹಕ್ಕು ಉಳಿಸುವ ಕೆಲಸ ಮಾಡಬೇಕಾದ ಆಯೋಗ ಕಸಿಯುವ ಕೆಲಸ ಮಾಡುತ್ತಿದೆ ಎಂದು ದೂರಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ದಸಂಸ ಪರಮೇಶ್ ಮಾತನಾಡಿ ಪ್ರಜಾತಾಂತ್ರಿಕ ಚುನಾವಣಾ ಪದ್ಧತಿಯನ್ನು ಯಾವ ರಾಜಕೀಯ ಪಕ್ಷಗಳು ಎಂದೂ ಗೌರವಿಸಿಲ್ಲ ಪಾಲಿಸಿಲ್ಲ. ಸಜ್ಜನರು ಚುನಾವಣೆಯಲ್ಲಿ ನಿಂತು ಗೆಲ್ಲುವುದು ಅಸಾಧ್ಯ ಎಂಬ ಪರಿಸ್ಥಿತಿ ಇದ್ದರೂ ಕೂಡ ಸಂವಿಧಾನವನ್ನು ಉಳಿಸುವ ಸಲುವಾಗಿ ದನಿ ಎತ್ತಬೇಕಿದೆ.ಭಾರತದ ಸಂವಿಧಾನವನ್ನು ಪ್ರಜಾತಂತ್ರöವನ್ನು ಪ್ರೀತಿಸುವ ಪ್ರತಿಯೊಬ್ಬರೂ ಕೇಂದ್ರ ಸರಕಾರದ ಅಣತಿಯಂತೆ ನಡೆಯುವ ಚುನಾವಣಾ ಆಯೋಗ ಜಾರಿಗೆ ತಂದಿರುವ ಎಸ್‌ಐಆರ್ ವಿರುದ್ಧ ನಾವೆಲ್ಲಾ ಧ್ವನಿ ಎತ್ತೋಣ ಎಂದು ಕರೆ ನೀಡಿದರು.

ಇದನ್ನು ಓದಿದ್ದೀರಾ..? ಹೊನ್ನುಡಿ ಪ್ರಭಾಕರ್ ನಿಧನಕ್ಕೆ ಪತ್ರಕರ್ತರ ಸಂಘದ ವತಿಯಿಂದ ಸಂತಾಪ ಹಾಗೂ ನುಡಿ ನಮನ

ಈ ವೇಳೆ ಸಂವಿಧಾನ ಸಂರಕ್ಷಣಾ ಪಡೆಯ ನಾರಾಯಣಪ್ಪ,ಜೀವಿಕ ಸಂಸ್ಥೆಯ ನಾರಾಯಣಸ್ವಾಮಿ, ಎದ್ದೇಳು ಕರ್ನಾಟಕದ ರವಿ ಮೋಹನ್,ಕೆಪಿಸಿಸಿ ಘಟಕದ ಮೊಹಮ್ಮದ್ ನೂರುಲ್ಲಾ, ಸಮೀರ್, ದಸಂಸ ತಾಲೂಕು ಸಂಚಾಲಕ ಎನ್.ಪರಮೇಶ್ ಮತ್ತಿತರರು ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...