ಕಲಬುರಗಿ | ಹೈ-ಕ ಭಾಗದ ಸಾಹಿತಿಗಳೆಂಬ ಹಣೆಪಟ್ಟಿ ಏಕೆ: ಡಾ. ಚಿದಾನಂದ ಸಾಲಿ

Date:

  • ದಲಿತ ಸಾಹಿತಿಗಳು ಅಂತ ಇರುವ ಹಾಗೆ, ಬ್ರಾಹ್ಮಣ ಕತೆಗಾರರು ಎಂಬ ಹೆಸರು ಇಲ್ಲದಿರುವದೂ ಒಂದು ಸಾಹಿತ್ಯ ರಾಜಕೀಯ
  • ಸಾಹಿತ್ಯ ಎನ್ನುವುದು ಒಂದು ಪ್ರದೇಶವನ್ನು ಅರ್ಥ ಮಾಡಿಕೊಳ್ಳುವುದಕ್ಕೆ ಮುಖ್ಯವಾದ ಸಾಧನವಾಗಿದೆ.

ಹೈದ್ರಾಬಾದ್ ಕರ್ನಾಟಕದ ಕತೆಗಾರರು, ಸಾಹಿತಿಗಳು ಎಂಬ ಹಣೆಪಟ್ಟಿ ಇರುವ ಹಾಗೆ ಕರಾವಳಿ ಕತೆಗಾರರು, ಹಳೆ ಮೈಸೂರು ಕತೆಗಾರರು, ಸಾಹಿತಿಗಳು ಅಂತ ಯಾಕೆ ಇಲ್ಲ ಎಂದು ಹಿರಿಯ ಕತೆಗಾರ ಡಾ.ಚಿದಾನಂದ ಸಾಲಿ ಪ್ರಶ್ನಿಸಿದರು.

ಆಳಂದ ತಾಲೂಕಿನ ಕಡಗಂಚಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕನ್ನಡ ವಿಭಾಗವು ʼಬಿಸಿಲ ನಾಡಿನ ಸಣ್ಣಕತೆಗಳುʼ ಎಂಬ ವಿಷಯದ ಮೇಲೆ ನಡೆದ ಒಂದು ದಿವಸದ ವಿಚಾರ ಸಂಕಿರಣದಲ್ಲಿ ಆಶಯ ನುಡಿಗಳನ್ನಾಡಿದ ಅವರು, “ದಲಿತ ಸಾಹಿತಿಗಳು ಅಂತ ಮಾತ್ರ ಇರುವ ಹಾಗೆ, ಆದರೆ ಬ್ರಾಹ್ಮಣ ಕತೆಗಾರರು ಎಂಬ ಹೆಸರು ಇಲ್ಲದಿರುವಂತೆಯೆ ಒಂದು ಸಾಹಿತ್ಯ ರಾಜಕೀಯ. ಕರ್ನಾಟಕದ ಒಂದು ಭಾಗವನ್ನು ಹೀಗೆ ಗುರುತಿಸುವ ಮೂಲಕ ಅದಕ್ಕೂ ಒಂದು ಮಿತಿಯನ್ನು ಹೇರಲಾಗುತ್ತದೆ. ಈ ಮಿತಿಯನ್ನು ಅರಿತುಕೊಳ್ಳಬೇಕಿದೆ ಮತ್ತು ಅದನ್ನು ಒಡೆದು ಅಲ್ಲಿಂದ ಮುಂದಕ್ಕೆ ಸಾಗಬೇಕಿದೆ. ಇದು ನನಗೆ ಮತ್ತು ನಮ್ಮೆಲ್ಲರಿಗೆ ಮುಖ್ಯವಾದ ವಿಚಾರವಾಗಿದೆ” ಎಂದು ಅವರು ಹೇಳಿದರು.

“ಕತೆಗಳಲ್ಲಿ, ವಿವಿಧ ರೀತಿಯ ವರ್ಗೀಕರಣಗಳು ಕೂಡ ಈ ರೀತಿಯ ಕೆಲಸವನ್ನು ಮಾಡುತ್ತಿರುತ್ತವೆ. ಎಡ-ಬಲ ಎಂಬ ಎರಡು ತುದಿಗಳನ್ನು ಹೆಚ್ಚು ಮಾತನಾಡುವುದು ಕಾಣಿಸುತ್ತದೆ. ಎರಡು ಧ್ರುವಗಳ ನಡುವೆ ಇರುವ ಗಾಳಿ ಬೆಳಕನ್ನ, ಬದುಕನ್ನ ಕುರಿತು ಮಾತಾಡುವುದು ಇಲ್ಲವಾಗಿದೆ. ಹಾಗಾದರೆ, ಎಡ-ಬಲ ಎನ್ನುವುದು ಬಿಟ್ಟು ಮಧ್ಯಮ ಎಂಬುದೊಂದು ಇದೆಯೆ? ಇದನ್ನು ಕುಹಕವಾಡುವುದು ಬೇಡ. ಆಧುನಿಕ ಕಾಲದ ಭಾರತದಲ್ಲಿ ಜಾಗತಿಕವಾದ ಎರಡು ಶಕ್ತಿಗಳನ್ನು ಮೀರಿ ಮೂರನೆಯ ಜಗತ್ತಾಗಿ ಭಾರತ ನಿಂತಿರುವುದು ನಮಗೆ ಮಾದರಿಯಾಗಬೇಕಿದೆ” ಎಂದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ.ಬಟ್ಟು ಸತ್ಯನಾರಾಯಣ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, “ಸಾಹಿತ್ಯ ಎನ್ನುವುದು ಒಂದು ಪ್ರದೇಶವನ್ನು ಅರ್ಥ ಮಾಡಿಕೊಳ್ಳುವುದಕ್ಕೆ ಮುಖ್ಯವಾದ ಸಾಧನವಾಗಿದೆ. ಹೈದರಾಬಾದ ಕರ್ನಾಟಕ ಭಾಗವು ಹಿಂದುಳಿದ ಪ್ರದೇಶವಾಗಿರುವುದರಿಂದ ಈ ಭಾಗದ ಸಾಹಿತ್ಯವನ್ನು ವಿಶೇಷವಾಗಿ ಅಧ್ಯಯನ ಮಾಡಬೇಕಿದೆ ಮತ್ತು ಈ ಅಧ್ಯಯನಗಳು ಪಾಲಸಿಗಳನ್ನು ಮಾಡುವುದಕ್ಕೆ ಸಹಾಯಕವಾಗುವಂತೆ ಬರಬೇಕಿದೆ” ಎಂದು ಹೇಳಿದರು

ವಿಚಾರ ಸಂಕಿರಣದ ಸಂಯೋಜಕರಾದ ವಿಭಾಗದ ಮುಖ್ಯಸ್ಥ ಪ್ರೊ.ಬಸವರಾಜ ಕೋಡಗುಂಟಿ ಅವರು ಮಾತನಾಡಿ, “ಹೈದರಬಾದ ಕರ್ನಾಟಕ ಪ್ರದೇಶವು ಭೂರಚನೆಯ ಕಾಲದಿಂದ ವಿಶಿಷ್ಟ ಶಿಲಾರಚನೆ, ಮತ್ತು ಫಲವತ್ತಾದ ಮಣ್ಣನ್ನು ಹೊಂದಿ ಶಿಲಾಯುಗದ ಮಹತ್ವದ ಕೇಂದ್ರವಾಗಿ ಬೆಳೆಯಿತು. ಒಕ್ಕಲುತನ ಮೊದಲಾಗಿ ನಾಗರಿಕತೆ ಬೆಳೆದು ಸಂಕೀರ್ಣತೆ ಹೆಚ್ಚು ಇಲ್ಲಿ ಬೆಳೆದಿದೆ. ಈ ಸಂಕೀರ್ಣ ಪರಿಸರವನ್ನು ಅರಿತುಕೊಳ್ಳುವ ಆಶಯದೊಂದಿಗೆ ಈ ವಿಚಾರ ಸಂಕಿರಣವನ್ನು ಆಯೋಜಿಸಿದೆ” ಎಂದು ನುಡಿದರು.

ಈ ಸುದ್ದಿ ಓದಿದ್ದೀರಾ? ‘ಈ ದಿನ’ ಸಂಪಾದಕೀಯ | ಬಗರ್‌ ಹುಕುಂ ಸಮಸ್ಯೆ ಬಗೆಹರಿಸಿದರಷ್ಟೇ ಅರಣ್ಯ ಒತ್ತುವರಿ ತೆರವು ಸಲೀಸು

ಕಾರ್ಯಕ್ರಮದಲ್ಲಿ ಮಾನವಿಕ ಮತ್ತು ಭಾಷಾ ನಿಕಾಯದ ಡೀನ ಪ್ರೊ.ವಿಕ್ರಮ ವಿಸಾಜಿ, ಸಂಗೀತ ವಿಭಾಗದ ಡಾ.ಜಯದೇವಿ ಜಂಗಮಶೆಟ್ಟಿ ಉಪಸ್ಥಿತರಿದ್ದರು. ಡಾ.ಸ್ವಪ್ನಿಲ್ ಚಾಪೇಕರ್ ಅವರು ಪ್ರಾರ್ಥಿಸಿದರು ವಿಜಯಲಕ್ಷ್ಮಿ ನಿರೂಪಿಸಿದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...