‘ಬೆಳಗಾವಿ ಜಿಲ್ಲಾ ವಿಭಜನೆ ಯಾಕ್ ಮಾಡವಲ್ರಿ?’; ಜಿಲ್ಲೆಯ ಜನರು ಹೇಳ್ತಿರೋದೇನು ಗೊತ್ತೇ?

Date:

ಬೆಳಗಾವಿ ಜಿಲ್ಲಾ ವಿಭಜನೆ ಯಾಕ್ ಮಾಡವಲ್ರಿ. ಬಳ್ಳಾರಿ ಜಿಲ್ಲಾ ವಿಭಜನೆ ಮಾಡಿದ್ರಿ. ಆದ್ರ ನಮ್ಮ ಬೆಳಗಾವಿ ಜಿಲ್ಲಾ ವಿಭಜನೆ ಮಾಡಾಕ ನಿಮ್ಮಗೆ ಎನು ತೊಂದರೆ ಆಗೈತಿ ಅಂತ ಬೆಳಗಾವಿ ಜಿಲ್ಲಾ ಜನ ಕೇಳುದು ಕರೆಕ್ಪ್ ಐತ್ರಿ. ಬೆಳಗಾವಿ ಜಿಲ್ಲೆ ರಾಜ್ಯದಾಗ ದೊಡ್ಡ ಜಿಲ್ಲೆ ಐತಿ. 13,433 ಚ.ಕಿ.ಮೀ ವಿಸ್ತೀರ್ಣ, 15 ತಾಲೂಕುಗಳು, 3 ಲೋಕಸಭಾ ಕ್ಷೇತ್ರಗಳಲ್ಲಿ ಜಿಲ್ಲೆಯ ಹರಡಿಕೊಂಡಿದೆ.

ಸ್ವಾತಂತ್ರ್ಯ ಪೂರ್ವದಲ್ಲಿ ಬೆಳಗಾವಿ ಜಿಲ್ಲೆಯನ್ನು ಕದಂಬರು, ರಾಷ್ಟ್ರಕೂಟರು, ಚಾಲುಕ್ಯರು, ಬಹುಮನಿ ಸುಲ್ತಾನರು, ವಿಜಯನಗರದ ಅರಸರು, ಮೋಘಲರು, ಪೇಶ್ವೆಗಳು ಆಳಿದ್ದಾರೆ. 1947ರಲ್ಲಿ ಭಾರತ ಸ್ವಾತಂತ್ರವಾದ ನಂತರ ಬೆಳಗಾವಿ ಮುಂಬೈ ರಾಜ್ಯದ ಭಾಗವಾಗಿತ್ತು. 1956ರಲ್ಲಿ ಭಾಷಾವಾರು ರಾಜ್ಯಗಳ ಮರುವಿಂಗಡನೆಯ ನಂತರ ಮೈಸೂರು ರಾಜ್ಯದಲ್ಲಿ ಸೆರ್ಪಡೆಯಾಯಿತು.

ಕರ್ನಾಟಕದ ಅತಿ ದೊಡ್ಡ ಜಿಲ್ಲೆಯಲ್ಲಿ ಸಮಸ್ಯೆಗಳ ಸಾಗರವೇ ತುಂಬಿದೆ. ಸರಿಯಾದ ನೀರಾವರಿ ಯೋಜನೆಗಳಿಲ್ಲ. ಜಿಲ್ಲೆ ಯ ಬಹುಸಂಖ್ಯಾತರು ಕೃಷಿಯನ್ನೇ ಅವಲಂಬಿಸಿದ್ದರೂ, ಕೃಷಿಗೆ ಪ್ರೋತ್ಸಾಹವಿಲ್ಲ. ಜಿಲ್ಲೆಯ ಯುವಜನರು ಉದ್ಯೋಗಕ್ಕಾಗಿ ಹೊರ ರಾಜ್ಯ ಹಾಗೂ ಬೆಂಗಳೂರಿಗೆ ವಲಸೆ ಹೋಗಬೇಕಾದ ಪರಿಸ್ಥಿತಿ ಇದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಇಷ್ಟೆಲ್ಲ ಸಮಸ್ಯೆಗಳು ಇದ್ದರು ಬೆಳಗಾವಿ ಜಿಲ್ಲೆ ವೈವಿದ್ಯತೆಯಿಂದ ಕೂಡಿದೆ. ಇಲ್ಲಿ ಬೇರೆ ಬೇರೆ ಜನಾಂಗದ, ನಾನಾ ಭಾಷೆಗಳನ್ನು ಮಾತನಾಡುವ ಜನರಿದ್ದಾರೆ. ವಿವಿಧ ಧರ್ಮದ ಜನರು ಒಟ್ಟಾಗಿ ಬಾಳುತ್ತಿದ್ಧಾರೆ. ಭ್ರಿಟಿಷರ ವಿರುದ್ಧ ಹೋರಾಡಿದ ಕಿತ್ತೂರಿನ ರಾಣಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ, ಅಮಟೂರು ಬಾಳಪ್ಪರಂತಹ ಸ್ವಾತಂತ್ರ್ಯ ಹೋರಾಟಗಾರರ ತವರು ಜಿಲ್ಲೆಯಾಗಿದೆ. ಭವ್ಯ ಪರಂಪರೆಯನ್ನು ಹೊಂದಿರುವ ಜಿಲ್ಲೆಯನ್ನು ಆಡಳಿತಾತ್ಮಕ ದೃಷ್ಟಿಯಿಂದ ವಿಭಜನೆ ಮಾಡಬೇಕು ಎಂದು ಇಲ್ಲಿನ ಜನರು ಒತ್ತಾಯಿಸುತ್ತಿದ್ದಾರೆ.

ಬೆಳಗಾವಿ ಜಿಲ್ಲೆಯ ರಾಜಕಾರಣಿಗಳು ಪ್ರಭಾವಿಗಳಾಗಿದ್ದಾರೆ. ಬಳ್ಳಾರಿ ಜಿಲ್ಲೆಯ ವಿಭಜನೆ‌ಯ ಮುಂಚೆಯೇ ಬೆಳಗಾವಿ ಜಿಲ್ಲೆ ವಿಭಜನೆ ಮಾಡಬೇಕಿತ್ತು. ಅದು ಯಾಕ್ ಸಾಧ್ಯವಾಗಿಲ್ಲ. ಜಿಲ್ಲೆಯ ಕೆಲವರು ಒಂದು ಸರ್ಕಾರವನ್ನೇ ಬೀಳಿಸಿ ಆಪರೇಷನ್‌ ಮೂಲಕ ಹೊಸ ಸರ್ಕಾರ ರಚನೆ ಮಾಡುವಷ್ಟು ಪ್ರಭಾವಿಯಾಗಿದ್ದಾರೆ. ಅಂತಹವರಿದ್ದರೂ, ಜಿಲ್ಲೆ ವಿಭಜನೆ ಮಾಡಲಾಗಿಲ್ಲ. ಅವರಿಗೆಲ್ಲ ಇಚ್ಛಾಸಕ್ತಿ ಕೊರತೆ ಇದೆ ಎಂದು ಜಿಲ್ಲೆಯ ಜನರು ಕಿಡಿಕಾರಿದ್ದಾರೆ.

“ನಮ್ಮ ಊರಿಂದ ಬೆಳಗಾವಿ ಎಷ್ಟ ದೂರ ಆಗತ್ತ್ ಅಂತ ನಿಮ್ಮಗೆ ಗೊತ್ತೆನ್ರಿ. ಬೆಳಗಾವಿ ಹೋಗಿ ಜಿಲ್ಲಾ ಕಚೇರಿಯಾಗಿನ ಕೆಲಸ ಮಾಡ್ಕೊಂಡ ಬರಬೇಕಂದ್ರ ರಾತ್ರಿಯಾಗಿರ್ತದ. ತಿರುಗಿ ಬರಬೇಕು ಅಂದ್ರ ಬಸ್ ಇರಾಂಗಿಲ್ಲ. ನಮ್ಮ ಸಮಸ್ಯೆ ನಿಮಗೆ ಅರ್ಥ ಆಗುದಿಲೆನು. ನಾವೇನು ಮಲತಾಯಿ ಮಕ್ಕಳೆನ್ರಿ” ಅಂತ ಅಥಣಿ, ಚಿಕ್ಕೊಡಿ, ರಾಯಭಾಗ, ಕುಡಚಿ, ಖಾನಾಪೂರ, ಕಾಘವಾಡ, ನಿಪ್ಪಾಣಿ ತಾಲೂಕಿನ ಜನರು ಸರ್ಕಾರಗಳಿಗೆ ಪ್ರಶ್ನೆ ಮಾಡುತ್ತಲೇ ಇದ್ದಾರೆ.

169351952459768

ಚಿಕ್ಕೊಡಿ ಲೋಕಸಭಾ ವ್ಯಾಪ್ತಿಯಲ್ಲಿರುವ ತಾಲೂಕಿನ ಜನರು ಜಿಲ್ಲಾ ಕಚೇರಿಗಳಿಗೆ ತೆರಳಬೇಕು ಅಂದ್ರೆ 200 ಕಿ.ಮೀ ಪ್ರಯಾಣ ಮಾಡಬೇಕು. ಅಷ್ಟು ದೂರ ಹೋದರೂ, ಅಂದು ತಮ್ಮ ಕೆಲಸ ಆಗುತ್ತದೆ ಎಂಬ ಭರವಸೆ ಇರುವುದಿಲ್ಲ. ಅಧಿಕಾರಿಗಳನ್ನು ಹಿಡಿದು, ಕೆಲಸ ಮುಗಿಸಿಕೊಂಡು ಊರಿಗೆ ವಾಪಸ್‌ ಹೋಗಬೇಕು ಅಂದ್ರೆ ರಾತ್ರಿ ಆಗೋಗಿರುತ್ತದೆ. ನಮ್ಮ ಕಷ್ಟ ಅರ್ಥ ಮಾಡಿಕೊಂಡು, ಜಿಲ್ಲೆಯನ್ನು ವಿಭಜನೆ ಮಾಡಬೇಕೆಂದು ಚಿಕ್ಕೋಡಿ ಭಾಗದ ಜನರು ಪ್ರತಿಭಟನೆ ಮಾಡುತ್ತಲೇ ಇದ್ದಾರೆ.

ಬೆಳಗಾವಿ ಜಿಲ್ಲಾ ವಿಭಜನೆ ಕೂಗೂ ಇವತ್ತು ನಿನ್ನೆಯದಲ್ಲ, 1980ರಲ್ಲಿ ಅಂದಿನ ಸರ್ಕಾರ ಎಮ್.ಬಿ ಪ್ರಕಾಶ ಆಯೋಗ, ವಾಸುದೇವ ಆಯೋಗ, ಹುಂಡೇಕರ ಸಮಿತಿ, ಗದ್ಧಿಗೌಡರ ಆಯೋಗ ರಚನೆ ಮಾಡಿ ಅಧ್ಯಯನ ನಡಸಿದ್ದವು. ಈ ಎಲ್ಲ ಆಯೋಗಗಳೂ ಬೆಳಗಾವಿಯನ್ನು ಎರಡು ಜಿಲ್ಲೆಗಳನ್ನಾಗಿ ವಿಭಜಿಸಬೇಕೆಂದು ವರದಿ ನೀಡಿದ್ದವು. ಆದರೆ, ಗಡಿ ವಿವಾದ ಎದುರಿಸುತ್ತಿರುವ ಬೆಳಗಾವಿಯನ್ನು ವಿಭಜನೆ ಮಾಡಿದರೆ ಮಹಾರಾಷ್ಟ್ರ ಬೆಂಬಲಿತ ಸಂಘಟನೆಗಳಿಂದ ಮತ್ತಷ್ಟು ಉಪಠಳ ಹೆಚ್ಚಾಗಬಹುದು, ಗಡಿ ವಿವಾದ ಮತ್ತಷ್ಟು ಉಲ್ಬಣಗೊಳ್ಳಬಹುದು ಎಂಬ ಕಾರಣಕ್ಕೆ ಜಿಲ್ಲಾ ವಿಭಜನೆ ಮಾಡಲು ಸರ್ಕಾರಗಳು ಮುಂದಾಗಲಿಲ್ಲ.

ಈ ಸುದ್ದಿ ಓದಿದ್ದೀರಾ?: ಕಲಬುರಗಿ | ಬರಗಾಲ ಪರಿಹಾರಕ್ಕೆ ಆಗ್ರಹಿಸಿ ರೈತಸಂಘ ಜಾಥಾ

ಚಿಕ್ಕೊಡಿ ಜಿಲ್ಲಾ ರಚನೆಗೆ ಯಾರ ಅಭ್ಯಂತರವೂ ಇಲ್ಲ. ಆದರೆ, ಗೋಕಾಕ ಅಥವಾ ಬೈಲಹೊಂಗಲವ್ನು ಜಿಲ್ಲಾ ಕೇಂದ್ರವನ್ನಾಗಿ ಮಾಡುವುದು ಕಷ್ಟದಾಯಕವೆಂದು ಹೇಳಲಾಗುತ್ತಿದೆ. ಆದರೆ, ಗೋಕಾಕ ಜಿಲ್ಲೆ ಮಾಡಬೇಕೆಂದು ಗೋಕಾಕದ ಜನರು, ಬೈಲಹೊಂಗಲ ಐತಿಹಾಸಿಕ ತಾಲೂಕಾಗಿದೆ. ರಾಣಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ ಹೋರಾಡಿದ ಭೂಮಿ ಇದು. ಇದನ್ನೇ ಜಿಲ್ಲಾ ಕೇಂದ್ರ ಮಾಡಬೇಕೆಂದು ಆ ತಾಲೂಕಿನ ಜನರು ಒತ್ತಾಯಿಸುತ್ತಿದ್ದಾರೆ. ಅಲ್ಲದೆ, ಬೈಲಹೊಂಗಲದಲ್ಲಿ ಉಪ ವಿಭಾಗಧಿಕಾರಿ ಕಚೇರಿಯೂ ಇದೆ. ಹೀಗಾಗಿ, ಇದನ್ನೇ ಜಿಲ್ಲಾ ಕೇಂದ್ರ ಮಾಡಬೇಕೆಂಬ ಕೂಗು ಹೆಚ್ಚಾಗಿದೆ.

ಬೆಳಗಾವಿಯನ್ನು ವಿಭಜನೆ ಮಾಡುವುದಾದರೆ, ಚಿಕ್ಕೋಡಿಯನ್ನು ಜಿಲ್ಲಾ ಕೇಂದ್ರ ಮಾಡಿ. ಒಂದು ವೇಳೆ ಮೂರು ಜಿಲ್ಲೆಗಳಾಗಿ ವಿಂಗಡಿಸುವುದಾದರೆ, ಗೋಕಾಕವನ್ನು ಜಿಲ್ಲೆ ಮಾಡುವುದಾದರೆ, ಬೈಲಹೊಂಗಲವನ್ನೂ ಜಿಲ್ಲೆ ಮಾಡಿ. ಇಲ್ಲ ಅಂದ್ರೆ, ಅಖಂಡ ಜಿಲ್ಲೆ ಹಾಗೆಯೇ ಇರಲಿ ಎಂಬ ಅಭಿಪ್ರಾಯಗಳೂ ಬೈಲಹೊಂಗಲ ತಾಲೂಕಿನಲ್ಲಿ ವ್ಯಕ್ತವಾಗಿವೆ.

ಬೆಳಗಾವಿಯನ್ನು 3 ಜಿಲ್ಲೆಗಳಾಗಿ ವಿಂಗಡಿಸಬೇಕು ಎಂದು ಉಮೇಶ ಕತ್ತಿ ಸಚಿವರಾಗಿದ್ಧಾಗ ಜಿಲ್ಲೆ ವಿಭಜನೆಗೆ ಮುಂದಡಿ ಇಟ್ಟಿದ್ದರು. ಸದ್ಯ, ಕಾಂಗ್ರೆಸ್ ಸರ್ಕಾರದಲ್ಲಿ ಜಿಲ್ಲೆಯವರೇ ಆದ ಸತೀಶ ಜಾರಕಿಹೋಳಿ ಮತ್ತು ಲಕ್ಷ್ಮೀ ಹೆಬ್ಬಾಳ್ಕರ್ ಸಚಿವರಾಗಿದ್ದಾರೆ. ಅವರು ಬೆಳಗಾವಿ ಜಿಲ್ಲಾ ವಿಭಜನೆಗೆ ಒತ್ತುಕೊಡಬೇಕು ಎಂದು ಜಿಲ್ಲೆಯ ಜನರು ಒತ್ತಾಯಿಸಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಸುನಿಲ್ ಹಂಪನ್ನವರ
ಸುನಿಲ್ ಹಂಪನ್ನವರ
ಬೆಳಗಾವಿ ಜಿಲ್ಲಾ ಸಂಯೋಜಕರು

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...