ಏಳು ಬಾರಿ ಸಂಸದರಾಗಿ, ಕೇಂದ್ರ ಸಚಿವರಾಗಿ ಪ್ರಸ್ತುತ ಕರ್ನಾಟಕ ಸರ್ಕಾರದ ಆಹಾರ ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಸಚಿವರಾಗಿರುವ ಕೆ ಎಚ್ ಮುನಿಯಪ್ಪ ಅವರು ಪಕ್ಷಕ್ಕಾಗಿ ಹಗಲಿರುಳು ಶ್ರಮಿಸುತ್ತಿರುವ ಇವರನ್ನು ಯಾವುದೇ ಕಾರಣಕ್ಕೂ ಸಚಿವ ಸ್ಥಾನದಿಂದ ತೆಗೆದರೆ ರಾಜ್ಯಾದ್ಯಂತ ಹೋರಾಟ ಮಾಡಲಾಗುವುದು ಎಂದು ಯಾದಗಿರಿ ಜಿಲ್ಲಾ ಕಾಂಗ್ರೆಸ್ ಸಮಿತಿ ಎಸ್‌ಸಿ ವಿಭಾಗ ಸಂಘಟನಾ ಕಾರ್ಯದರ್ಶಿ ಮಲ್ಲು ಹಲಗಿ ಎಚ್ಚರಿಕೆ ನೀಡಿದರು.
“ಕೆ ಎಚ್ ಮುನಿಯಪ್ಪನವರು ಹಿರಿಯ ರಾಜಕಾರಣಿ ಹಾಗೂ ಕಾಂಗ್ರೆಸ್ ಪಕ್ಷದ ನಿಷ್ಠಾವಂತ ನಾಯಕ. ಪಕ್ಷಕ್ಕಾಗಿ ಹಗಲಿರುಳು ಶ್ರಮಿಸುತ್ತಿರುವ ಇವರನ್ನು ಯಾವುದೇ ಕಾರಣಕ್ಕೂ ಸಚಿವ ಸ್ಥಾನದಿಂದ ತೆಗೆದು ಹಾಕಬಾರದು” ಎಂದು ಹೇಳಿದರು.
“ಈಗಾಗಲೇ ಮಾಧ್ಯಮಗಳಲ್ಲಿ ಸಂಪುಟ ಪುನರ್ ರಚನೆಯಾದರೆ ಇವರನ್ನು ಸಂಪುಟದಿಂದ ತೆಗೆದುಹಾಕಬೇಕೆಂಬ ವರದಿ ಬಂದಿದೆ. ಇವರ ಹಿಂದೆ ಇಡೀ ಮಾದಿಗ ಸಮುದಾಯವಿಗು, ಅನುಭವಿ ಹಾಗೂ ಹಿರಿಯ ರಾಜಕಾರಣಿ ಆದ ಇವರನ್ನು ಸಚಿವ ಸಂಪುಟದಿಂದ ಕೈಬಿಟ್ಟರೆ ರಾಜ್ಯಾದ್ಯಂತ ತೀವ್ರ ಹೋರಾಟ ಮಾಡುತ್ತೇವೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ಲಿಂಗಾನುಪಾತದಲ್ಲಿ ಮಂಡ್ಯಕ್ಕೆ ಕಡೆಯ ಸ್ಥಾನ; ಹೆಣ್ಣು ಭ್ರೂಣ ಹತ್ಯೆ ಕಾರಣ?
ಈ ವೇಳೆ ಹನುಮಂತ ಮಾಲಹಳ್ಳಿ, ಮರಿಲಿಂಗ ವರಟುರ್, ಸುರೇಶ ಹಾಲಿಗೇರಾ, ಹನುಮಂತ ಒಡಕರ್, ಶಿವಾಶರಣಪ್ಪ ಗೋನಲ್, ದೇವು ಕುರೀಹಾಳ್ ಇದ್ದರು.





