ನಗರದ ಹಳೆ ಬಸ್ ನಿಲ್ದಾಣದ ಹತ್ತಿರ ಸ್ಥಾಪಿತವಾಗಿರುವ ಭಾರತರತ್ನ ಡಾ. ಬಾಬಾ ಸಾಹೇಬ ಅಂಬೇಡ್ಕರ್ ಮೂರ್ತಿ ಸ್ಥಳದಲ್ಲಿ ಬಾಕಿ ಉಳಿದ ಕಾಮಗಾರಿಗಳನ್ನು ಪೂರ್ಣಗೊಳಿಸಿ ಶೀಘ್ರದಲ್ಲೇ ಲೋಕಾರ್ಪಣೆ ಮಾಡಲು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಭೀಮ ಘರ್ಜನೆ) ಪದಾಧಿಕಾರಿಗಳು ಗುರುವಾರ ಕೈಗಾರಿಕಾ ಹಾಗೂ ಸಾರ್ವಜನಿಕ ಉದ್ದಿಮೆ ಸಚಿವ ಶರಣಬಸಪ್ಪಗೌಡ ದರ್ಶನಾಪುರ ಅವರಿಗೆ ಮನವಿ ಸಲ್ಲಿಸಿದ್ದಾರೆ.
ಮನವಿ ಸಲ್ಲಿಸಿ ವಿಭಾಗೀಯ ಸಂಚಾಲಕ ಮರೆಪ್ಪ ಕನ್ಯಕೊಳ್ಳೋರು ಮಾತನಾಡಿ, ‘ಡಾ. ಬಾಬಾ ಅಂಬೇಡ್ಕರ್ ಮೂರ್ತಿ ಈಗಾಗಲೇ ಕೂರಿಸಲಾಗಿದ್ದು, ಅದರ ಸುತ್ತಲೂ ಕಂಪೌಂಡ್ ಗೋಡೆ ನಿರ್ಮಿಸಬೇಕು, ಬೋರವೆಲ್ ಕೊರೆದು ಗಾರ್ಡನ್ ನಿರ್ಮಿಸಬೇಕು ಹಾಗೂ ಟೈಲ್ಸ್ ಅಳವಡಿಸುವಂತೆ ಬಾಕಿ ಉಳಿದ ಸಿವಿಲ್ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು. ಕಾಮಗಾರಿಗಳು ಮುಗಿದ ನಂತರ ಮೂರ್ತಿಯ ಲೋಕಾರ್ಪಣೆಯನ್ನು ಸಚಿವರ ಅಮೃತ ಹಸ್ತದಿಂದ ನಡೆಸಬೇಕೆಂದು ನಾವು ಮನವಿ ಮಾಡುತ್ತೇವೆ,’ ಎಂದು ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಮತಗಳವು ಆರೋಪ: ಆಳಂದ ಮಾಜಿ ಶಾಸಕ ಸುಭಾಷ್ ಗುತ್ತೇದಾರ್ ಮನೆ ಮೇಲೆ ಎಸ್‌ಐಟಿ ದಾಳಿಐಟಿ ದಾಳಿ
ಈ ವೇಳೆ ದಲಿತ ಸಂಘರ್ಷ ಸಮಿತಿಯ ಜಯರೆಡ್ಡಿ ಹೊಸ್ಮನಿ, ದೇವಿಂದ್ರಪ್ಪ ದಿಗ್ಗಿ, ಶರಣಪ್ಪ ಹೊಸ್ಮನಿ, ಮರೆಪ್ಪ ಬೇವಿನಹಳ್ಳಿ, ಗುರುಸಂಗಪ್ಪ ದಿಗ್ಗಿ, ಭೀಮಾಶಂಕರ ಸಲದಾಪುರ, ಮಲ್ಲಿಕಾರ್ಜುನ ಟೋಕಾಪುರ, ಮಲ್ಲಿಕಾರ್ಜುನ ಹಾಲಬಾವಿ, ಮಹಾಂತೇಶ ಸಿಂಗನಹಳ್ಳಿ, ಹಣಮಂತ ಶಾರದಳ್ಳಿ, ಸಂಗಣ್ಣ ಹಾಲಬಾವಿ, ನಿಜಾಂಶ, ಅಂಲ್ಲಪ್ಪ ಮಡ್ನಾಳ, ಶರಣಪ್ಪ ಸಲಾದಪುರ ಹಾಗೂ ಗೋವಿಂದಪ್ಪ ಕಾಡಂಗೇರಾ ಉಪಸ್ಥಿತರಿದ್ದರು.





