18 ವರ್ಷ ತುಂಬಿದ ಬಳಿಕ ಮದುವೆ ಆಗುವುದಾಗಿ ನಂಬಿಸಿ 13 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಆರೋಪದಡಿ ಬಾಲಕಿ ಸಂಬಂಧಿ ವಿರುದ್ಧ ಪ್ರಕರಣ ದಾಖಲಾಗಿರುವುದು ವರದಿಯಾಗಿದೆ.
ಬಾಲಕಿ ತಾಯಿ ಗಂಡನಿಂದ ದೂರವಿದ್ದು ದುಡಿಯಲು ಮಗನೊಂದಿಗೆ ಮುಂಬೈಗೆ ಹೋಗಿದ್ದರು. ಬಾಲಕಿಗೆ ಮನೆಯಲ್ಲಿ ಆಶ್ರಯ ನೀಡಿದ್ದ ಆರೋಪಿ ವಯಸ್ಕಳಾದ ಮೇಲೆ ಮದುವೆ ಆಗುವುದಾಗಿ ನಂಬಿಸಿದ್ದʼ ಎನ್ನಲಾಗಿದೆ.
ಸಂತ್ರಸ್ತೆ ತಾಯಿ ದಸರಾ ಹಬ್ಬಕ್ಕೆ ಗ್ರಾಮಕ್ಕೆ ಬಂದಿದ್ದರು. ಆಗ, ಬಾಲಕಿಯನ್ನು ಮನೆಯಿಂದ ಕಳುಹಿಸಿದ್ದ ಆರೋಪಿ ಮದುವೆ ಆಗುವುದಿಲ್ಲ ಎಂದು ಹೇಳಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಕೊಡೆಕಲ್ ಠಾಣೆಯಲ್ಲಿ ಪೋಕ್ಸೊ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : ಬೀದರ್ | ಯಾವ ಹುದ್ದೆಗೂ ಸಲ್ಲಿಕೆಯಾಗದ ನಾಮಪತ್ರ : ಪತ್ರಕರ್ತರ ಸಂಘಕ್ಕೆ ಪುನಃ ಚುನಾವಣೆ





