ಯಾದಗಿರಿ | ಸಚಿವ ಪ್ರಿಯಾಂಕ್ ಖರ್ಗೆ ಬೆಂಬಲಿಸಿ ಬೃಹತ್ ಪ್ರತಿಭಟನೆ

Date:

ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಅವರ ಕುಟುಂಬದ ವಿರುದ್ಧ ಜೀವ‌ ಬೆದರಿಕೆ ಹಾಕಿ, ಅವಾಚ್ಯ ಶಬ್ದಗಳಿಂದ ನಿಂದನೆ ನಡೆಸಿದ ಮನುವಾದಿ ಮನಸ್ಥಿತಿಯನ್ನು ಖಂಡಿಸಿ, ಸಂವಿಧಾನವನ್ನು ರಕ್ಷಿಸಿ ಪ್ರಜಾಪ್ರಭುತ್ವವನ್ನು ಉಳಿಸಬೇಕೆಂದು ಆಗ್ರಹಿಸಿ, ಜೊತೆಗೆ ಬಿಜೆಪಿ ನಾಯಕ ರಮೇಶ ಕತ್ತಿ ಅವರ ಅವಹೇಳನಕಾರಿ ಹೇಳಿಕೆಗಳನ್ನು ಖಂಡಿಸಿ ಯಾದಗಿರಿಯಲ್ಲಿ ಬೃಹತ್‌ ಪ್ರತಿಭಟನೆ ನಡೆಯಿತು.

ದಲಿತ ಸಂಘರ್ಷ ಸಮಿತಿ ಜಿಲ್ಲಾ ಘಟಕ, ಪ್ರಿಯಾಂಕ್ ಖರ್ಗೆ ಅಭಿಮಾನಿ ಬಳಗ, ವಾಲ್ಮೀಕಿ ಸಮಾಜ, ಅಹಿಂದ ಸಂಘಟನೆಗಳ ಒಕ್ಕೂಟ ಹಾಗೂ ಸತೀಶ ಜಾರಕಿಹೊಳಿ ಅಭಿಮಾನಿಗಳ ಬಳಗದ ನೇತೃತ್ವದಲ್ಲಿ ಗುರುವಾರ ಬೃಹತ್ ಪ್ರತಿಭಟನೆ ಮೆರವಣಿಗೆ ನಡೆಸಲಾಯಿತು.

ನಗರದ ಸುಭಾಷ್ ವೃತ್ತದಲ್ಲಿ ಮಾನವ ಸರಪಳಿ ನಿರ್ಮಾಣ ಮಾಡಿ ಬೃಹತ್ ಪ್ರತಿಭಟನಾ ಮೆರವಣಿಗೆ ಜ್ಞಾನಪ್ರಕಾಶ ಸ್ವಾಮೀಜಿಯವರು ಚಾಲನೆ ನೀಡಿ ಮಾತನಾಡಿದರು. ಬಳಿಕ ಜಿಲ್ಲಾಧಿಕಾರಿ ಕಚೇರಿ ವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು ಕೈಯಲ್ಲಿ ಬ್ಯಾನರ್‌ಗಳು ಹಾಗೂ ಫಲಕಗಳನ್ನು ಹಿಡಿದು “ಆರ್‌ಎಸ್‌ಎಸ್ ಬ್ಯಾನ್”, “ಮನುವಾದಿ ಮನೋಭಾವಕ್ಕೆ ಧಿಕ್ಕಾರ”, ‘ಪ್ರಿಯಾಂಕ್ ಖರ್ಗೆಗೆ ಜಯವಾಗಲಿ’ ಎಂಬ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...
435884

ಪ್ರತಿಭಟನೆಯನ್ನು ಉದ್ದೇಶಿಸಿ ದಸಂಸ ಹಿರಿಯ ಮುಖಂಡ ಮರೆಪ್ಪ ಚಟ್ಟೇಕರ್ ಮಾತನಾಡಿ, ‘ಪ್ರಿಯಾಂಕ್ ಖರ್ಗೆ ಅವರು ಬುದ್ಧ, ಬಸವ ಮತ್ತು ಬಾಬಾಸಾಹೇಬ ಅಂಬೇಡ್ಕರ್ ಅವರ ತತ್ವ-ಸಿದ್ಧಾಂತಗಳಲ್ಲಿ ನಂಬಿಕೆ ಇಟ್ಟು, ಜಾತಿ-ವರ್ಗ ರಹಿತ ಮತ್ತು ಶೋಷಣೆಯಿಲ್ಲದ ಸಮಾಜ ನಿರ್ಮಾಣದ ಹಾದಿಯಲ್ಲಿ ನಡೆಯುತ್ತಿರುವ ಪ್ರಗತಿಪರ ನಾಯಕರು. ಅವರ ವಿರುದ್ಧ ನಡೆಯುತ್ತಿರುವ ಜೀವ ಬೆದರಿಕೆ, ನಿಂದನೆ ಮತ್ತು ಸುಳ್ಳು ಪ್ರಚಾರಗಳು ಪ್ರಜಾಪ್ರಭುತ್ವದ ಮೇಲೆ ನಡೆದಿರುವ ನೇರ ದಾಳಿಯಾಗಿದೆ,’ ಎಂದು ಖಂಡಿಸಿದರು.

“ಆರ್‌ಎಸ್‌ಎಸ್ ಮನುವಾದಿ ಮನೋಭಾವವು ದೇಶದ ಏಕತೆ ಮತ್ತು ಸಂವಿಧಾನ ಮೌಲ್ಯಗಳಿಗೆ ಹಾನಿಕಾರಕವಾಗಿದೆ. ಈ ಮನೋಭಾವವನ್ನು ಬೆಳೆಸುವ ಪ್ರಯತ್ನಗಳು ಸಮಾಜದೊಳಗೆ ವಿಷ ಬೀಜ ಬಿತ್ತುವಂತಿವೆ. ಇಂತಹ ಶಕ್ತಿಗಳನ್ನು ತಡೆಗಟ್ಟುವುದು ಪ್ರಜಾಪ್ರಭುತ್ವದ ಹಿತಕ್ಕಾಗಿ ಅತ್ಯವಶ್ಯಕ,” ಎಂದು ಹೇಳಿದರು.

ಕಾಂಗ್ರೆಸ್ ಮುಖಂಡ ಭೀಮಣ್ಣ ಮೇಟಿ ಮಾತನಾಡಿ, ‘ಆರ್‌ಎಸ್‌ಎಸ್ ಅವರು ತಮ್ಮ ಶತಮಾನೋತ್ಸವದ ಅಂಗವಾಗಿ ಶಾಲೆ-ಕಾಲೇಜುಗಳಲ್ಲಿ ಸಂವಿಧಾನ ವಿರೋಧಿ ಚಟುವಟಿಕೆಗಳನ್ನು ನಡೆಸುತ್ತಿರುವ ಬಗ್ಗೆ ಪ್ರಿಯಾಂಕ್ ಖರ್ಗೆ ಅವರು ಸರ್ಕಾರದ ಗಮನಕ್ಕೆ ತಂದಿದ್ದರು. ಆದರೆ ಇದರ ವಿರುದ್ಧ ಕೆಲ ಮನುವಾದಿಗಳು ಸುಳ್ಳು ಪ್ರಚಾರ ನಡೆಸಿ, ಜೀವಬೇದರಿಕೆ ನೀಡಿರುವುದು ಅಸಹ್ಯಕರ ಹಾಗೂ ಕಾನೂನು ವಿರೋಧಿಯಾಗಿದೆʼ ಎಂದರು.

ʼಸರ್ಕಾರವು ತಕ್ಷಣ ಕ್ರಮ ಕೈಗೊಂಡು, ಅಪರಾಧಿಗಳನ್ನು ಬಂಧಿಸಿ ಕಠಿಣ ಶಿಕ್ಷೆ ನೀಡಬೇಕು. ಮನುವಾದಿ ಚಿಂತನೆಗಳಿಂದ ಸಮಾಜವನ್ನು ವಿಭಜಿಸಲು ಯತ್ನಗಳು ನಡೆಯುತ್ತಿವೆ. ಸಂವಿಧಾನದ ಮೂಲ ಅಂಶವಾದ ಸಮಾನತೆ, ಸ್ವಾತಂತ್ರ್ಯ ಮತ್ತು ಭ್ರಾತೃತ್ವವನ್ನು ಕಾಪಾಡುವುದು ಪ್ರತಿಯೊಬ್ಬರ ಕರ್ತವ್ಯ’ ಎಂದು ಹೇಳಿದರು.

ಇದನ್ನು ಓದಿದ್ದೀರಾ? ಯಾದಗಿರಿ | ಬಿಸಿ ಪಾನಕ ಬಿದ್ದು, ವಿದ್ಯಾರ್ಥಿಗೆ ಗಂಭೀರ ಗಾಯ: ಸ್ವಾಮಿ ನಾರಾಯಣ ಗುರುಕುಲ ವಿದ್ಯಾಪೀಠದ ಆಡಳಿತ ನಿರ್ಲಕ್ಷ್ಯ

ಇದೆ ವೇಳೆ ನೀಲಕಂಠ ಬಡಿಗೇರ, ಲಕ್ಷ್ಮಣ ರಾಠೋಡ, ಭೀಮರಾಯ ಠಾಣಗುಂದಿ, ಮಾರ್ಯಾಪ್ಪ, ಬಸರೆಡ್ಡಿ, ಬಾಷುಮೀಯ ವಡಗೇರಾ ಸೇರಿದಂತೆ ಹಲವು ಮುಖಂಡರು ಮಾತನಾಡಿ, ‘ಜೀವ ಬೆದರಿಕೆ ನೀಡಿದ ಆರೋಪಿಗಳನ್ನು ತಕ್ಷಣ ಬಂಧಿಸಿ ಕಾನೂನಿನ ಪ್ರಕಾರ ಕಠಿಣ ಶಿಕ್ಷೆಗೆ ಒಳಪಡಿಸುವುದು, ಮನುವಾದಿ ಪ್ರಚಾರವನ್ನು ತಡೆಗಟ್ಟುವ ಕ್ರಮ ಕೈಗೊಳ್ಳುವುದು ಹಾಗೂ ಸಚಿವ ಪ್ರಿಯಾಂಕ್ ಖರ್ಗೆ ಮತ್ತು ಅವರ ಕುಟುಂಬಕ್ಕೆ ಅಗತ್ಯ ಭದ್ರತೆ ಒದಗಿಸಬೇಕು ಮತ್ತು ರಮೇಶ ಕತ್ತಿ ಅವರಿಗೆ ಕಠಿಣ ಶಿಕ್ಷೆಗೆ ಗುರಿಪಡಿಸಬೇಕೆಂದು ಸರ್ಕಾರಕ್ಕೆ’ ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಮಾನಪ್ಪ ಕಟ್ಟಿಮನಿ, ಗೋಪಾಲ ತೆಳಿಗೇರಿ, ಭೀಮರಾಯ ಹೊಸಮನಿ, ಪರಶುರಾಮ ಒಡಾಯರ, ಸೈದಪ್ಪ ಕೊಲೂರು, ಬಾಲರಾಜ ಖಾನಾಪೂರ, ರಾಯಪ್ಪ ಸಾಲಿಮನಿ, ಭೀಮಾಶಂಕರ ಯರಗೋಳ, ಮರೆಪ್ಪ ಜಿ, ಅಬ್ದುಲ್‌ ರಹೀಮ, ರಾಘವೇಂದ್ರ ಬುಕ್ಕಲ್, ಮಹಾದೇವ ದಿಗ್ಗಿ, ಸಂಪತ್ತಕುಮಾರ ಚಿನ್ನಾಕರ, ವಸಂತಕುಮಾರ ಸುಂಗುಕರ, ಬಸವರಾಜ ಬೋಳ್ಹಾರಿ, ಮರಿಲಿಂಗ ಕುರುಕುಂಬಳ, ಭೀಮರಾಯ(ಡ್ಯಾನಿ) ಸುಗುಲಕರ್, ತಿಪ್ಪಣ್ಣ ಲಂಡನಕರ್, ಮಲ್ಲಿಕಾರ್ಜುನ ಬೋಮ್ಮನ್‌, ಉದಯಕುಮಾರ್, ಶರಣಪ್ಪ ಅನಕಸೂಗೂರು, ವಿಜಯಕುಮಾರ್ ಆಶನಾಳ, ಚಂದ್ರು ಚಟ್ಟೇಕರ್, ನಿಂಗಪ್ಪ ಬಿ ಮುರಡಿ, ಮಲ್ಲಿಕಾರ್ಜುನ ಕಾಗಿ, ಪ್ರಕಾಶ, ಆದೇಶ, ಅಂಬ್ರೇಶ ಚಟ್ಟೇಕರ್, ಸಂತೋಷಕುಮಾರ್ ಚಟ್ಟೇಕರ್, ಹಣಮಂತ ಮಿಲ್ಟ್ರೀ, ಶಿವಕುಮಾರ ಬಂದಳ್ಳಿ, ಮಲ್ಲಿಕಾರ್ಜುನ ಜೀನಕೇರಿ, ಗೌತಮ, ಮಹಾದೇವಪ್ಪ ಬದ್ದೇಪಲ್ಲಿ, ದೊ.ಯಂಕಪ್ಪ ಬದ್ದೇಪಲ್ಲಿ, ತಾರೇಶ ಬದ್ದೇಪಲ್ಲಿ, ಕಾಮಣ್ಣ, ಈರಪ್ಪ ಅನಕಸೂಗೂರ, ಸಿದ್ರಾಮಪ್ಪ ಚಟ್ಟೇಕರ್, ಶಿವಕುಮಾರ ಚಿನ್ನಾಕರ್, ಸುದರ್ಶನ ನಾಯಕ, ಮಲ್ಲಪ್ಪ ದಾಸನಕೇರಿ, ವೀರಭದ್ರಪ್ಪ ಯಡ್ಡಳ್ಳಿ, ಅನೀಲಕುಮಾರ ಹೆಡಗಿಮದ್ರಾ, ಬಾಷುಮೀಯಾ ವಡಗೇರಾ, ಭೀಮರಾಯ ಠಾಣಗುಂದಿ, ಸಂತೋಷ ನಿರ್ಮಲಕರ್, ಹುಸೇನಪ್ಪ ಚಿನ್ನಾಕರ, ನಿಜಗುಣ ದೋರನಹಳ್ಳಿ, ಮಂಜುನಾಥ ದಾಸನಕೇರಿ, ಚಂದ್ರಕಾಂತ ಮುನಿಯಪ್ಪನೋರ, ಶ್ಯಾಂಸನ್ ಮಾಳಿಕೇರಿ, ನಿಂಗಪ್ಪ ಭೀರನಾಳ, ಭಗವಂತ ಅನವಾರ, ಬಾಬುರಾವ್ ಕಾಡ್ಲೂರ, ರಾಘವೇಂದ್ರ ಮಾನಸಗಲ್, ಬಾಬುರಾವ್ ಭೋತಾಳಿ, ನಿಂಗಪ್ಪ ನಾಟೇಕರ, ಮರೆಪ್ಪ ಜಾಲಿಮಂಚಿ, ಲಕ್ಷ್ಮಣ ಹಳಿಸಾಗರ್, ಕಾಶಿನಾಥ್ ನಾಟೇಕರ್, ವಿಶ್ವನಾಥ ಬೀರನೂರ್, ರಮೇಶ ದೋರೆ ಇನ್ನಿತರರು ಭಾಗವಹಿಸಿದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...