ಪೆಟ್ಟಿಗೆ ಅಂಗಡಿಗಳನ್ನು ತೆರವು ಮಾಡಿದ ಬಳಿಕವೂ ನಗರಸಭೆ ವ್ಯಾಪ್ತಿಯ ಜಾಗಗಳಲ್ಲಿ ಅನಧಿಕೃತವಾಗಿ ಪೆಟ್ಟಿಗೆ ಅಂಗಡಿಗಳನ್ನು ಇಟ್ಟರೆ ದಂಡವನ್ನು ಹಾಕುವ ಮೂಲಕ ಪೆಟ್ಟಿಗೆಗಳನ್ನು ನಗರಸಭೆಯೇ ವಶಪಡಿಸಿಕೊಳ್ಳುತ್ತದೆ ಎಂದು ಯಾದಗಿರಿ ನಗರಸಭೆ ಅಭಿಯಂತರರು ರಜನಿಕಾಂತ್ ಶೃಂಗೇರಿ ಹೇಳಿದರು.
ಯಾದಗಿರಿ ನಗರದ ಬೀದಿಬದಿಗಳಲ್ಲಿ ಹಾಕಿಕೊಂಡಿದ್ದ ಪೆಟ್ಟಿಗೆ ಅಂಗಡಿಗಳನ್ನು ತೆರವುಗೊಳಿಸಿ ಮಾತನಾಡಿದರು.
ಕಳೆದ 2 ತಿಂಗಳುಗಳಿಂದ ಎಲ್ಲ ಪೆಟ್ಟಿಗೆಗಳ ಮಾಲೀಕರನ್ನು ನಗರಸಭೆಗೆ ಕರೆಸಿ ಪೂರ್ವಭಾವಿ ಸಭೆ ಮಾಡಲಾಗಿತ್ತು. ನಗರದಲ್ಲಿ ಮೈಕ್‌ಗಳ ಮೂಲಕ ಅನೌನ್ಸ್ ಮಾಡಿ, ಪೇಪರ್ ಸ್ಟೇಟ್‌ಮೆಂಟ್ ಕೂಡಾ ನೀಡಲಾಗಿತ್ತು. ಆದರೂ ಮಾಲೀಕರು ಡಬ್ಬಿಗಳನ್ನು ತೆರವು ಮಾಡಿಲ್ಲ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಯಾದಗಿರಿ | ನೀರು ಹರಿಸುವಂತೆ ದಸಂಸ ಮನವಿ
ಸುಮಾರು ವರ್ಷಗಳಿಂದ ಬೀದಿ ಬದಿಗಳಲ್ಲಿ ಪೆಟ್ಟಗೆ ಅಂಗಡಿಗಳನ್ನು ಹಾಕಿಕೊಂಡು ಬಡ ಜನರು ಜೀವನ ಸಾಗಿಸುತ್ತಿದ್ದರು. ಆದರೆ ಜಿಲ್ಲಾಧಿಕಾರಿಯವರ ಆದೇಶದ ಮೇರೆಗೆ ಇಂದು ನಗರಸಭೆಯ ಅಧಿಕಾರಿಗಳು, ಜೆಸ್ಕಾಂ ಅಧಿಕಾರಿಗಳು, ಪೊಲೀಸ್ ಇಲಾಖೆ ಸಮುಖದಲ್ಲಿ ಜೆಸಿಬಿ ಮೂಲಕ ಎಲ್ಲ ಪೆಟ್ಟಿಗೆ ಅಂಗಡಿಗಳನ್ನು ತೆರವು ಮಾಡಿದರು.
ವರದಿ : ರಾಹುಲ್ ಕೊಲ್ಲೂರಕರ್ ಯಾದಗಿರಿ





