ಯಾದಗಿರಿ | ಅಗಲಿದ ಸಾಹಿತಿ ಬುದ್ಧಘೋಷ ದೇವೇಂದ್ರ ಹೆಗ್ಗಡೆಯವರಿಗೆ ನುಡಿನಮನ

Date:

ಹಿರಿಯ ಸಾಹಿತಿ ಹಾಗೂ ಸಾಂಸ್ಕೃತಿಕ ಚಿಂತಕ ಬುದ್ಧಘೋಷ ದೇವೇಂದ್ರ ಹೆಗ್ಗಡೆ ಅವರಿಗೆ ನುಡಿನಮನ ಕಾರ್ಯಕ್ರಮವು ಡಾ. ರವೀಂದ್ರನಾಥ ಹೊಸಮನಿಯವರ ಅಧ್ಯಕ್ಷತೆಯಲ್ಲಿ ಬುಧವಾರ ಶಾಹಪುರದಲ್ಲಿ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಆಯೋಜಿಸಲಾಗಿತ್ತು.

ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಉತ್ತರ ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷ ಡಾ. ಶರಣು ಬಿ. ಗದ್ದುಗೆ, “ಹೆಗ್ಗಡೆ ಅವರ ಬೌದ್ಧಿಕ ಚಿಂತನೆ, ವೈಚಾರಿಕ ಚರ್ಚೆಗಳು ಸಮಾಜಕ್ಕೆ ಪ್ರಬುದ್ಧತೆ ನೀಡಿದವು. ಬುದ್ಧ, ಬಸವ, ಅಂಬೇಡ್ಕರರ ತತ್ವಗಳನ್ನು ತಮ್ಮ ಜೀವನದ ಉಸಿರಾಗಿಸಿಕೊಂಡು ಜನಮಟ್ಟದಲ್ಲಿ ಹರಡುವಲ್ಲಿ ಹೆಗ್ಗಡೆ ಅಪಾರ ಶ್ರಮಪಟ್ಟರು. ಅವರ ಅಗಲಿಕೆ ಸಾಹಿತ್ಯ ಹಾಗೂ ಸಾಂಸ್ಕೃತಿಕ ಕ್ಷೇತ್ರಗಳಿಗೆ ತುಂಬಲಾರದ ನಷ್ಟ” ಎಂದರು.

ಸುರಪುರ ಬುದ್ಧವಿಹಾರದ ಅಧ್ಯಕ್ಷ ವೆಂಕಟೇಶ ಹೊಸಮನಿ, “ಹೆಗ್ಗಡೆ ಅವರ ವ್ಯಕ್ತಿತ್ವ ನನ್ನ ಜೀವನ ಹಾಗೂ ಹೋರಾಟಗಳಿಗೆ ಸ್ಪೂರ್ತಿಯಾಗಿದೆ” ಎಂದರೆ, ಹಿರಿಯ ಸಾಹಿತಿ ಶಿವಣ್ಣ ಇಜೇರಿ, “ಬುದ್ಧ–ಬಸವ–ಅಂಬೇಡ್ಕರ್ ಮಾರ್ಗವನ್ನೇ ಅನುಸರಿಸಿದ ಹೆಗ್ಗಡೆ ಅವರು ದೈಹಿಕವಾಗಿ ಅಗಲಿದ್ದರೂ, ಅವರ ವಿಚಾರಗಳು ಸದಾಕಾಲ ನಮ್ಮೊಂದಿಗೆ ಇರುತ್ತವೆ. ಅವರ ಉದಾತ್ತ ವಿಚಾರಗಳು ಹಾಗೂ ದೂರದೃಷ್ಟಿಯ ವ್ಯಕ್ತಿತ್ವ ಸದಾ ಪ್ರೇರಣೆಯಾಗಿವೆ” ಎಂದು ಹೇಳಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...
1002408496

ಇದೆ ವೇಳೆ ಸಾಹಿತಿ ವಿಶ್ವರಾಧ್ಯ ಸತ್ಯಂಪೇಟ್ ಮಾತನಾಡಿ, “ಹೆಗ್ಗಡೆ ಅವರು ಹೋರಾಟ ಮನೋಭಾವನೆಯ ಚಿಂತಕರು. ಬುದ್ಧ ಮಲಗಿದ ಬೆಟ್ಟವನ್ನು ಥೀಮ್ ಪಾರ್ಕ್ ಆಗಿ ರೂಪಿಸುವ ಕನಸು ಕಂಡಿದರು. ಹೆಗ್ಗಡೆಯವರನ್ನು ಸುಟ್ಟಿಲ್ಲ, ಬಿತ್ತಲ್ಲಪಟ್ಟಿದ್ದಾರೆ. ಅವರ ಸ್ಮರಣೆಯ ದಿನದಂದು ವೈಚಾರಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರ ಮೂಲಕ ನೆನಪು ಅಜರಾಮರಗೊಳಿಸಬೇಕಿದೆ” ಎಂದರು.

ಪ್ರಗತಿಪರ ಚಿಂತಕ ನೀಲಕಂಠ ಬಡಿಗೇರ ಮಾತನಾಡಿ, “ಹೆಗ್ಗಡೆಯವರು ಸಾಮಾಜಿಕ ಚಳುವಳಿಗಳಿಗೆ ಸಾಂಸ್ಕೃತಿಕ ಆಯಾಮ ನೀಡಿದ ತಾಯಿ ಹೃದಯದ ಚಿಂತಕರಾಗಿದ್ದರು ಎಂದು ಸ್ಮರಿಸಿದರು. ಬೌದ್ಧ ಧರ್ಮವನ್ನು ಚಳುವಳಿಯಾಗಿ ಪರಿವರ್ತಿಸಲು ಕನಸು ಕಂಡವರು. ಶಾಹಪುರದ ಬುದ್ಧ ಮಲಗಿದ ಬೆಟ್ಟದ ಕುರಿತಾಗಿ ಸಾಹಿತ್ಯ ರಚಿಸಿ ಹಾಡುಗಳ ಮೂಲಕ ದೇಶಾದ್ಯಂತ ಪ್ರಚಾರ ಮಾಡಿದ ಹೆಗ್ಗಳಿಕೆ ಅವರದು. ನನ್ನ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಿದ ಹೆಗ್ಗಡೆ ಅವರ ಚಿಂತನೆ, ಹೋರಾಟ ಮತ್ತು ಬರಹಗಳು ನನ್ನ ಬದುಕಿಗೆ ದಿಕ್ಕು ತೋರಿವೆ” ಎಂದು ನುಡಿದರು.

ಈ ಸಂದರ್ಭದಲ್ಲಿ ಹಿರಿಯ ಸಾಹಿತಿ ಡಾ. ಅಬ್ದುಲ್ ಕರೀಮ್ ಕನ್ಯಾಕೋಳೂರು, ಹಿರಿಯ ಮುಖಂಡ ಸಣ್ಣನಿಂಗಪ್ಪ ನಾಯ್ಕೊಡಿ,ರೈತಪರ ಚಿಂತಕ ಶರಣಪ್ಪ ಸಲಾದಪುರ,ಡಾ. ಭೀಮಪ್ಪ ಭಂಡಾರಿ, ಡಾ. ದೇವಪ್ಪ ಹೊಸಮನಿ, ನಿಂಗಪ್ಪ ಮಾಸ್ತರ, ಭೀಮರಾಯ ದೊಡ್ಡಮನಿ ಸೇರಿದಂತೆ ಅನೇಕರೂ ನುಡಿನಮನ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ಡಾ. ಗೋವಿಂದರಾಜ ಆಲ್ದಾಳ, ಅಶೋಕ ಚೌದರಿ, ಬಾಬುರಾವ ಬೂತಾಳೆ, ಡಾ. ರಾಘವೇಂದ್ರ ಹಾರಣಗೇರಾ, ನಿಂಗಣ್ಣ ನಾಟೇಕರ, ಸಾಯಬಣ್ಣ ಪಾರ್ಲೆ, ಸಂತೋಷ ಜುನ್ನಾ, ಡಾ. ಗಂಗಪ್ಪ ಹೊಸಮನಿ, ರಂಗನಾಥ ದೊರೆ, ಬಿ ಎಮ್ ಪೂಜಾರಿ, ಮೀನಾಕ್ಷಿ ಹೊಸಮನಿ, ರಾಹುಲ ಹುಲಿಮನಿ, ಸಿದ್ಧಣ್ಣ ತನಕೆದಾರ, ಮಲ್ಲಪ್ಪ ಬಿರನೂರ, ಮೊನಯ್ಯ ಹೊಸಮನಿ, ಹಣಮಂತ ಕಾಂಬಳೆ, ಶಾಂತಪ್ಪ ಕಟ್ಟಿ, ಅಂಬ್ಲಯ್ಯ ಸೈದಾಪುರ, ದೌವಲಪ್ಪ ಸಜ್ಜನ, ಮರೆಪ್ಪ ಜಾಲಿಮಂಚಿ, ರಾಯಪ್ಪ ಸಾಲಿಮನಿ, ಶಾಂತಪ್ಪ ಹಾರಣಗೇರಾ, ಶ್ರೀನಿವಾಸ ಕಶೆಟ್ಟಿ, ಮರೆಪ್ಪ ಜಾಲಿಮಚಿ, ನಿಂಗಣ್ಣ ನಟ್ಟೇಕರ್, ನಿಂಗಪ್ಪ ದೋರನಹಳ್ಳಿ, ವಿಶ್ವ ಬಿರನೂರ್, ಪ್ರಭಾಕರ್ ಹೊಸಮನಿ, ಮೋಹನಕುಮಾರ್ ಹೊಸಮನಿ, ಬಸವರಾಜ್ ಚಿಪ್ಪರ್, ಅಯ್ಯಪ್ಪ ವಡಗೇರಾ, ಮುಂತಾದವರು ಉಪಸ್ಥಿತರಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...