ಯಾದಗಿರಿ | ಸಿಜೆಐ ಮೇಲೆ ಶೂ ಎಸೆದ ಘಟನೆ ಖಂಡಿಸಿ ರಾಜ್ಯ ಹೆದ್ದಾರಿ ತಡೆದು ಪ್ರತಿಭಟನೆ

Date:

ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಾಧೀಶ ಬಿ.ಆರ್.ಗವಾಯಿ ಅವರ ಮೇಲೆ ಶೂ ಎಸೆದಿರುವ ಸನಾತನವಾದಿ ಕಿಶೋರ ರಾಕೇಶ ಎಂಬ ವಕೀಲನನ್ನು ದೇಶದಿಂದ ಗಡಿಪಾರು ಮಾಡುವಂತೆ ಒತ್ತಾಯಿಸಿ ಸಂವಿಧಾನ ಸಂರಕ್ಷಣಾ ಸಮಿತಿ ಹಾಗೂ ದಲಿತಪರ ಸಂಘಟನೆಗಳು ಶಹಾಪುರದಲ್ಲಿ ರಾಜ್ಯ ಹೆದ್ದಾರಿ ತಡೆದು ಸೋಮವಾರ ಪ್ರತಿಭಟನೆ ನಡೆಸಿದರು.

ಸಿಜೆಐ ಬಿ.ಆರ್.ಗವಾಯಿ ಅವರ ಮೇಲೆ ಮತಾಂಧ ಸನಾತನಿ ವಕೀಲನೊಬ್ಬ ಶೂ ಎಸೆದು ಅಪಮಾನ ಮಾಡಿರುವ ದುರ್ಘಟನೆಯನ್ನು ತೀವ್ರವಾಗಿ ಖಂಡಿಸುತ್ತದೆ. ಇದು ಪ್ರಜಾಪ್ರಭುತ್ವ ಸಂವಿಧಾನ ಹಾಗೂ ಭಾರತದ ನ್ಯಾಯಾಂಗ ವ್ಯವಸ್ಥೆಯ ಮೇಲೆ ನಡೆದ ಅತ್ಯಂತ ಹೀನಾಯವಾದ ಘಟನೆಯಾಗಿದೆ ಎಂದು ಸಂಘಟನೆಗಳು ಚಳುವಳಿ ಮಾಡುವ ಮೂಲಕ ತಹಶೀಲ್ದಾರ್ ಮುಖಾಂತರ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು.

ಇದನ್ನೂ ಓದಿ: ಯಾದಗಿರಿ | ಸಿಜೆಐ ಬಿ.ಆರ್.ಗವಾಯಿ ಮೇಲೆ ಶೂ ಎಸೆದ ವಕೀಲನ ವಿರುದ್ಧ ಕ್ರಮಕ್ಕೆ ಎಂಆರ್‌ಎಚ್ಎಸ್ ಆಗ್ರಹ

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...
ಗವಾಯಿ 4

ಇದೇ ವೇಳೆ ಸಂವಿಧಾನ ಸಂರಕ್ಷಣಾ ಸಮಿತಿ ಮುಖಂಡ ನೀಲಕಂಠ ಬಡಿಗೇರ ಮಾತನಾಡಿ, ‘ದಲಿತ ಸಮುದಾಯಕ್ಕೆ ಸೇರಿದ ನ್ಯಾಯಮೂರ್ತಿ ಗವಾಯಿ ಅವರು ಸಂವಿಧಾನದ ತತ್ವಗಳ ಆಧಾರದ ಮೇಲೆ ಅತ್ಯಂತ ಘನತೆಯ ನ್ಯಾಯಾಧೀಶರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇಂತಹ ನ್ಯಾಯಾಧೀಶರ ಮೇಲೆ ಸನಾತನಿ ಮನಸ್ಥಿತಿಯ ವಕೀಲನೊಬ್ಬ ತೋರಿಸಿರುವ ಅಸಹನೆ ಹಿಂದೂ ಧರ್ಮದ ಒಳಗಿನ ಅಸ್ಪೃಶ್ಯತೆ ಜಾತೀಯತೆಯ ತಾರತಮ್ಯ ಸ್ವಾತಂತ್ರ್ಯ ನಂತರದ 75 ವರ್ಷಗಳ ನಂತರವೂ ಮತ್ತಷ್ಟು ಗಟ್ಟಿಯಾಗಿ ಮನುವಾದ ಉಳಿದುಕೊಂಡಿದೆ ಎನ್ನುವುದನ್ನು ಈ ಘಟನೆಯು ತೋರಿಸುತ್ತದೆ ಎಂದರು.

‘ನ್ಯಾಯಮೂರ್ತಿ ಗವಾಯಿಯವರು ಸಂವಿಧಾನದ ಕರ್ತೃ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಅಪ್ಪಟ ಅನುಯಾಯಿಯಾಗಿದ್ದು, ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಮೇಲೆ ಅಪಾರ ಗೌರವವನ್ನು ಇಟ್ಟುಕೊಂಡಿದ್ದಾರೆ. ನ್ಯಾಯಮೂರ್ತಿಗಳು ಯಾವುದೇ ಧರ್ಮ ಅಥವಾ ಜಾತಿಗೆ ಸೇರಿದವರಂತೆ ಎಂದೂ ವರ್ತಿಸಿಲ್ಲ. ಭಾರತದ ಸಾರ್ವಭೌಮತ್ವವನ್ನು ನ್ಯಾಯಾಂಗದಲ್ಲಿ ಎತ್ತಿ ಹಿಡಿಯುವ ಅತ್ಯಂತ ಮಹತ್ವದ ಸ್ಥಾನದಲ್ಲಿ ಬಿ.ಆರ್. ಗವಾಯಿಯವರು ಕುಳಿತಿದ್ದಾರೆ ಎಂದು ಹೇಳಿದರು.

ಶೂ ಎಸೆಯಲು ಪ್ರಯತ್ನಿಸಿದ ರಾಕೇಶ್ ಕಿಶೋರ್ ಎಂಬ ಮನುವಾದಿ ಮನಸ್ಸಿನ ವಕೀಲ ಜಾತಿ ಮತ್ತು ಧರ್ಮದ ಹೆಸರಿನಲ್ಲಿ ಸಮಾಜವನ್ನು ಇಬ್ಬಾಗಿಸಿ ಪರಸ್ಪರ ದ್ವೇಷ ಮತ್ತು ಅಸಹನೆಯನ್ನು ಹುಟ್ಟು ಹಾಕುತ್ತಿರುವ ಸಂಘ ಪರಿವಾರ ಮತ್ತು ಮನುವಾದದ ಪ್ರತಿನಿಧಿಯಾಗಿ ಕಾರ್ಯನಿರ್ವಹಿಸಿದ್ದಾನೆ. ನಾಥೂರಾಮ್ ಗೋಡ್ಸೆಯಂತ ಕೊಲೆಗಡುಕ ಮನಸ್ಥಿತಿ ಇರುವ ಈ ತನ ವಿರುದ್ಧ ಕಾನೂನು ಕ್ರಮ ಕೈಗೊಂಡು ಈ ದೂರ್ತ ವಕೀಲನಿಗೆ ಸರಿಯಾದ ಶಿಕ್ಷೆ ನೀಡಬೇಕು ಎಂದು ಸಂವಿಧಾನ ಸಂರಕ್ಷಣಾ ಸಮತಿ ಹಾಗೂ ದಲಿತಪರ ಸಂಘಟನೆಗಳು ಒತ್ತಾಯಿಸುತ್ತವೆ. ಅಂಬೇಡ್ಕರ್ ವಾದಿ ದಲಿತರೊಬ್ಬರು ಭಾರತದ ಉಚ್ಚ ನ್ಯಾಯಾಲಯದ ಪ್ರಧಾನ ನ್ಯಾಯಮೂರ್ತಿ ಆಗಿರುವುದನ್ನು ಸಹಿಸಿಕೊಳ್ಳಲಾರದಷ್ಟು ಅಸಹನೆ, ಅಸಂಹಿಷ್ಣತೆ ಸನಾತನಿಗಳಲ್ಲಿ ಇದೆ ಎಂಬುದು ಇದರಿಂದ ಸಾಬಿತಾಗಿದೆ’ ಎಂದು ತಿಳಿಸಿದರು.

‘ವಕೀಲನನ್ನು ಕೂಡಲೇ ನ್ಯಾಯಾಂಗ ನಿಂದನೆಯ ಪ್ರಕ್ರಿಯೆಗೆ ಒಳಪಡಿಸಬೇಕು ಮತ್ತು ನೀತಿ ಸಂಹಿತೆ ವಿರುದ್ಧವಾಗಿ ನಡೆದುಕೊಂಡಿದ್ದರಿಂದ ಬಾರ್ ಕೌನ್ಸಿಲ್ ನವರು ಅವರ ಸದಸ್ಯತ್ವವನ್ನು ರದ್ದುಪಡಿಸಬೇಕೆಂದು’ ಆಗ್ರಹಿಸಿದರು.

ಈ ಸಂದರ್ಭದಲ್ಲಿ ಮಹಾದೇವಪ್ಪ ಸಾಲಿಮನಿ, ಅಂಬರೇಶ ವಿಭೂತಿಹಳ್ಳಿ, ಚಂದಪ್ಪ ಸಿಕ್ಕಿ, ರವೀಂದ್ರನಾಥ ಹೊಸ್ಮನಿ, ಮಲ್ಲಪ್ಪ ಬೀರನೂರ, ಚಂದ್ರು ಚಕ್ರವರ್ತಿ, ಮರೆಪ್ಪ ಚಟ್ಟೇರಕರ್, ಎಂ. ಮಹಾದೇವಪ್ಪ ದಿಗ್ಗಿ, ಗಿರೇಪ್ಪಗೌಡ ಬಾಣತಿಹಾಳ, ಶಾಂತಪ್ಪ ಕಟ್ಟಿಮನಿ, ವಿಶ್ವರಾಧ್ಯ ಸತ್ಯಂಪೇಠ, ಮಾನಯ್ಯ ಹೊಸ್ಮನಿ, ಬಸವರಾಜ ತಳವಾರ, ವೆಂಕಟೇಶ ಹೊಸ್ಮನಿ, ರಾಯಪ್ಪ ಸಾಲಿಮನಿ, ಅಯ್ಯಣ್ಣ ಕನ್ಯಾಕೋಳೂರ, ರುದ್ರಪ್ಪ ಹುಲಿಮನಿ, ಬಾಬುರಾವ್ ಭೂತಾಳಿ, ಆರ್. ಚನ್ನಬಸು, ಯೂಸೂಪ್ ಸಿದ್ದಕಿ, ಸೈಯದ್ ಖಾದಿ, ಮುಸ್ತಾಫ್ ದರ್ಭಾನ್, ವಿ.ಜಿ. ಅಂಗಡಿ, ಸೈಯದ್ ಖಾಲೀದ್, ಶಂಕರ ಶಿಂಗೆ, ಮರೆಪ್ಪ ಪಾಟ ವಾಲ್ಮೀಕಿ, ಸತ್ಯಮ್ಮ ಹೊಸಮನಿ, ಮಾನಪ ಗಡದ, ಮಲ್ಲಪ್ಪ ಉಳ್ಳಂಡಗೇರಿ, ಲಾಲಪ್ಪ ಹೊಸ್ಮನಿ, ಮಾನಪ್ಪ ಹುಲಸೂರ, ಮೊಹನ್ ಕನ್ಯಾಕೋಳೂರ, ವಿ.ಸಿ. ಪಾಟೀಲ್, ಸಾಹೇಬಣ್ಣ ಪುರ್ಲೆ, ಬಸವರಾಜ ಬಳಬಟ್ಟಿ, ತಾಯಮ್ಮ ದೋರನಹಳ್ಳಿ, ಮಾಹಂತೇಶ ದೊಡ್ಡಮನಿ, ಮಾನಪ್ಪ ಜೇಗ್ರಿ, ಮಾನಯ್ಯ ಪಂಚಮ, ಮಹೀಂದ್ರಕುಮಾರ ದಿಗ್ಗಿ, ನಿಜಗುಣ ದೋರನಹಳ್ಳಿ, ಹೈಯ್ಯಾಳಪ್ಪ ಗಂಗನಾಳ, ಈರಣ್ಣ ಶಖಾಪುರ, ಯಂಕಪ್ಪ ಪೂಜಾರಿ, ದವಲಪ್ಪ ಸಜ್ಜನ್, ಯಲ್ಲಪ್ಪ ನರಿ, ಲಕ್ಷ್ಮಣ ಹಳಿಸಗರ, ಲಕ್ಷ್ಮಣ ಗೋಗಿ, ಭೀಮರಾಯ ದೊಡ್ಡನಿ, ಅಂಬ್ರಪ್ಪ ಜೇಗಿ, ಮರೆಪ್ಪ ಮಕ್ತಾಪೂರ, ಅರುಣಕುಮಾರ ಸೈದಾಪುರ, ಶರಣರೆಡ್ಡಿ ಹತ್ತಿಗೂಡೂರ, ಚಂದ್ರಶೇಖರ ಹುಲಿಮನಿ, ಭೀಮರಾಯ ಜುನ್ನಾ, ಲಿಂಗರಾಜ ಕೋಳೂರ, ಶರಣು ಉಕ್ಕಿನಾಳ, ಅಮಜಾದ್ ಹುಸೇನ, ರಾಹುಲ್ ಹುಲಿಮನಿ, ವಿಶ್ವ ರಾಮೋಜಿ, ಪರಶುರಾಮ ರೋಜಾ, ಚಂದ್ರಶೇಖರ ಹತ್ತಿಗೂಡೂರ, ಶಾಂತಪ್ಪ ಗುಡಿಮನಿ, ವಿರೇಶ ಕೋಳೂರ, ರವಿ ಬೀರನೂರ, ಪರಶುರಾಮ ಮಾಲಗತ್ತಿ, ಬಸವರಾಜ ಕೋಂಡೋಳು, ಭೀಮಣ್ಣ ಮಾಲಗತ್ತಿ, ಯಮನಪ್ಪ ರೇವಲ್ ಇನ್ನಿತರರು ಭಾಗವಹಿಸಿದರು.

WhatsApp Image 2025 11 17 at 3.21.38 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...