ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತು ಯಾದಗಿರಿಯಲ್ಲಿ ಏರ್ಪಡಿಸಿರುವ ರಾಜ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿರುವ ವೈಚಾರಿಕ ಸಾಹಿತಿ, ಚಿಂತಕ ವಿಶ್ವಾರಾಧ್ಯ ಸತ್ಯಂಪೇಟೆ ಸತ್ಯಂಪೇಟೆ ಅವರನ್ನು ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕದಿಂದ ಸನ್ಮಾನಿಸಲಾಯಿತು.
ಇದೆ ತಿಂಗಳ 28,29 ಹಾಗೂ 30 ರಂದು ಮೂರು ದಿನಗಳ ಕಾಲ ಯಾದಗಿರಿಯ ಕ್ರೀಡಾಂಗಣದಲ್ಲಿ ಸಮ್ಮೇಳನ ಜರುಗಲಿದೆ. ಸಮ್ಮೇಳನದಲ್ಲಿ ʼಕೃತಕ ಬುದ್ಧಿ ಮತ್ತೆ, ಮೌಲ್ಯ ಮತ್ತು ಮಹಿಳೆ, ಏನು ಮಾಡಿ ಏನು ಬಂತಣ್ಣ, ಓ ರೈತಣ್ಣ ಮತ್ತು ನೂರು ಮತದ ಹೊಟ್ಡ ತೂರಿʼ ಎಂಬ ವಿಚಾರ ಗೋಷ್ಠಿಗಳು ನಡೆಯಲಿವೆ. ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಿಂದ ಪವಾಡ ಬಯಲು, ಬಾಬಾ ಮತಿ ಕೇಗಾಮತಿಯ ಕುರಿತು ಪ್ರಾತ್ಯಕ್ಷತೆಯೂ ಇರುತ್ತದೆ ಎಂದು ತಾ.ಕ.ರಾ.ವೈ.ಸಂ.ಪರಿಷತ್ತಿನ ಷಣ್ಮುಖ ಜೈನ ತಿಳಿಸಿದರು.
ಜಿಲ್ಲಾ ಕಸಾಪ ಅಧ್ಯಕ್ಷ ಸಿದ್ದಪ್ಪ ಹೊಟ್ಟಿ ಮಾತನಾಡಿ, ʼನಮ್ಮ ಕಲ್ಯಾಣ ಕರ್ನಾಟಕ ಭಾಗದ ಪ್ರಖರ ಚಿಂತಕ ಲೇಖಕ ಪತ್ರಕರ್ತ ವಿಶ್ವಾರಾಧ್ಯ ಸತ್ಯಂಪೇಟೆ ಸಮಾಜಕ್ಕೆ ಉತ್ತಮವಾದ ಕೊಡುಗೆ ನೀಡಿದ್ದಾರೆ. ಇನ್ನು ಹೆಚ್ಚು ಕೃತಿಗಳನ್ನು ಸಮಾಜಕ್ಕೆ ನೀಡಿ ಜನರು ವೈಜ್ಞಾನಿಕ ಹಾಗೂ ವೈಚಾರಿಕ ನಡೆಯನ್ನು ರೂಢಿಸಿಕೊಳ್ಳಲಿʼ ಎಂದರು.
ಇದನ್ನೂ ಓದಿ : ಬಾಬಾಸಾಹೇಬರ ಕಣ್ಣಲ್ಲಿ ಭಗವದ್ಗೀತೆ; ಸತ್ಯ ಮರೆಯಲಾದೀತೆ?
ಜಿಲ್ಲಾ ಕಸಾಪ ಪದಾಧಿಕಾರಿಗಳಾದ ಪ್ರಕಾಶ ಅಂಗಡಿ ಕನ್ನೆಳ್ಳಿ, ಮಹಾದೇವಪ್ಪ ಅಬ್ಬೆ ತುಮಕೂರು, ಚೆನ್ನಪ್ಪ ಠಾಣಗುಂದಿ, ಮಡಿವಾಳಪ್ಪ ಪಾಟೀಲ, ಅಯ್ಯಣ್ಣಗೌಡ ಕಾಸಪನಳ್ಳಿ, ದೇವರಾಜ ವರ್ಕನಳ್ಳಿ, ಶಹಾಪುರ ತಾಲೂಕಾ ಕಸಾಪ ಅಧ್ಯಕ್ಷ ರವೀಂದ್ರ ಹೊಸ್ಮನಿ ಹಾಜರಿದ್ದರು.





