ಯಾದಗಿರಿ | ಮೈಲಾರಲಿಂಗ ಪಲ್ಲಕ್ಕಿಗೆ ಕುರಿಮರಿ ಎಸೆಯುವ ಸಂಪ್ರದಾಯಕ್ಕೆ ತಡೆ; ಕರಿಮರಿಗಳ ಹರಾಜು

Date:

ಯಾದಗಿರಿಯ ಮೈಲಾಪುರದ ಮೈಲಾರಲಿಂಗ ಜಾತ್ರೆ ಸೋಮವಾರ ನಡೆದಿದೆ. ಜಾತ್ರೆಯಲ್ಲಿ ಮೈಲಾರ ಪಲ್ಲಕಿ ಮೇಲೆ ಭಕ್ತರು ಕುರಿಮರಿಗಳನ್ನು ಎಸೆಯುವ ಸಂಪ್ರದಾಯಕ್ಕೆ ಜಿಲ್ಲಾಡಳಿತ ತಡೆಯೊಡ್ಡಿತ್ತು. ಭಕ್ತರು ತಂದಿದ್ದ ಕುರಿಮರಿಗಳನ್ನು ದೇವಾಲಯ ಪ್ರವೇಶ ರಸ್ತೆಯಲ್ಲೇ ಅಧಿಕಾರಿಗಳು ವಶಕ್ಕೆ ಪಡೆದಿದ್ದರು. ಅವುಗಳನ್ನು ಹರಾಜು ಹಾಕಿದ್ದು, ದೇವಾಲಯಕ್ಕೆ ಆದಾಯ ಬಂದಿದೆ.

ಪ್ರತಿವರ್ಷವೂ ಸಂಕ್ರಾಂತಿ ವೇಳೆ ನಡೆಯುವ ಜಾತ್ರೆಯಲ್ಲಿ ಕಲ್ಯಾಣ ಕರ್ನಾಟಕ ಭಾಗದ ನೂರಾರು ಭಕ್ತರು ಕುರಿಮರಿಗಳನ್ನು ತಂದು, ಉತ್ಸವ ಪಲ್ಲಕ್ಕೆ ಮೇಲೆ ಎಸೆಯುತ್ತಿದ್ದರು. ಈ ರೀತಿ ಎಸೆಯುವುದು ಪ್ರಾಣಿಹಿಂಸೆಯಾಗುತ್ತದೆ ಎಂದು ಅಂತಹ ಪದ್ದತಿಗೆ ಈ ವರ್ಷ ಜಿಲ್ಲಾಡಳಿತ ತಡೆಯೊಡ್ಡಿತ್ತು. ದೇವಾಲಯಕ್ಕೆ ಬರುವ ರಸ್ತೆಗಳನ್ನು ಚೆಕ್‌ಪೋಸ್ಟ್‌ಗಳನ್ನು ನಿರ್ಮಿಸಿ, ಪರಿಶೀಲನೆ ನಡೆಸಿತ್ತು. ಇದರಿಂದಾಗಿ, ಸುಮಾರು 683 ಕುರಿಮರಿಗಳನ್ನು ಅಧಿಕಾರಿಗಳು ಭಕ್ತರಿಂದ ವಶಕ್ಕೆ ಪಡೆದಿದ್ದರು.

ಜಿಲ್ಲಾಡಳಿತ ನಡೆಸಿದ ಟೆಂಡರ್‌ ಪ್ರಕ್ರಿಯೆಯಲ್ಲಿ ಹಲವರು ಭಾಗವಹಿಸಿದ್ದರು. ಪ್ರತಿ ಕುರಿಮರಿಗಳಿಗೆ 1,400ರಿಂದ 2,900 ರೂ.ವರೆಗಿನ ಮೌಲ್ಯಕ್ಕೆ 8 ಮಂದಿ ಟೆಂಡರ್‌ ಪಡೆದುಕೊಂಡಿದ್ದಾರೆ. ಇದರಿಂದ ದೇವಸ್ಥಾನಕ್ಕೆ ಸುಮಾರು 12 ಲಕ್ಷಕ್ಕೂ ಅಧಿಕ ಹಣ ಬಂದಿದೆ ಎಂದು  ಪಶು ಇಲಾಖೆ ಸಹಾಯಕ ನಿರ್ದೇಶಕ ಡಾ. ಶರಣ ಭೂಪಾಲರೆಡ್ಡಿ ತಿಳಿಸಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...