ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಆರೋಪದ ಹಿನ್ನೆಲೆಯಲ್ಲಿ ವಿದ್ಯುತ್ ಪರಿವೀಕ್ಷಣಾಲಯ ಇಲಾಖೆಯ ಉಪ ವಿದ್ಯುತ್ ಇನ್‌ಸ್ಪೆಕ್ಟರ್ ವೀರೇಶ ಹಿರೇಮಠ ಅವರಿಗೆ ಸಂಬಂಧಿಸಿದ ಮನೆಗಳ ಮೇಲೆ ಗುರುವಾರ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದರು.
ಕರ್ನಾಟಕ ಲೋಕಾಯುಕ್ತ ಪೊಲೀಸರ ತಂಡವು ಯಾದಗಿರಿ ನಗರದ ಮಾತಾ ಮಾಣಿಕೇಶ್ವರಿ ಕಾಲೊನಿಯಲ್ಲಿರುವ ಮನೆ ಹಾಗೂ ಬೆಂಗಳೂರು ನಗರದ ವಿದ್ಯಾರಣ್ಯಪುರದ ಚಿಕ್ಕಬೆಟ್ಟಹಳ್ಳಿಯಲ್ಲಿರುವ ಮನೆಯಲ್ಲಿ ಶೋಧ ಕಾರ್ಯ ನಡೆಸುತ್ತಿದೆ.
ಶೋಧ ಕಾರ್ಯದ ವೇಳೆ ಕಲಬುರಗಿ, ಯಾದಗಿರಿ ಹಾಗೂ ಸುರಪುರ ಪ್ರದೇಶಗಳಲ್ಲಿ ಆರು ನಿವೇಶನಗಳು, ಸುಮಾರು 14 ಎಕರೆ ಕೃಷಿ ಜಮೀನು ಹಾಗೂ ಎರಡು ಕಾರುಗಳು ಇರುವುದನ್ನು ಪತ್ತೆ ಹಚ್ಚಲಾಗಿದೆ. ಈ ಸಂಬಂಧ ದಾಖಲೆಗಳ ಪರಿಶೀಲನೆ ಮುಂದುವರೆದಿದೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ : ಬೀದರ್ | ಶಿಕ್ಷಕರ ಮೇಲೆ ಹಲ್ಲೆ ಆರೋಪ : ಠಾಣೆ ಎದುರು ಹೈಡ್ರಾಮಾ; 49 ಜನರ ವಿರುದ್ಧ ಪ್ರಕರಣ ದಾಖಲು





