ಕರ್ತವ್ಯಲೋಪ ಎಸಗಿರುವ ಆರೋಪದ ಮೇರೆಗೆ ಸುರುಪುರ ತಾಲೂಕಿನ ಕೆಂಭಾವಿ ವಲಯದ ಪ್ರಭಾರ ಕಂದಾಯ ನಿರೀಕ್ಷಕ ರಾಜೇಸಾಬ್ ಕಂದಗಲ್ ಹಾಗೂ ಮುನೀರ ಬೊಮ್ಮನಹಳ್ಳಿ ಗ್ರಾಮ ಆಡಳಿತ ಅಧಿಕಾರಿ ಬ್ರಹ್ಮದೇವ ಅವರನ್ನು ಅಮಾನತು ಮಾಡಲಾಗಿದೆ.
ಕೆಂಭಾವಿ ಸಮೀಪದ ಏವೂರ ಸೀಮಾಂತರ ಸರ್ವೇ ನಂ.167/2 ವಿಸ್ತೀರ್ಣ 34 ಎಕರೆ 7 ಗುಂಟೆ ದಲಿತರು ಸಾಗುವಾಳಿ ಮಾಡುತ್ತಿದ್ದ ಭೂಮಿಯನ್ನು ಭೂ ನ್ಯಾಯ ಮಂಡಳಿಯಲ್ಲಿ ಬಾಕಿ ಇರುವಾಗ ಮತ್ತು ಹೈಕೋರ್ಟ್ ಮತ್ತು ಜಿಲ್ಲಾಧಿಕಾರಿಗಳ ಆದೇಶ ಉಲ್ಲಂಘಿಸಿ ಆಸ್ತಿ ವರ್ಗಾವಣೆ ಮಾಡಿ ಕರ್ತವ್ಯಲೋಪ ಎಸಗಿರುವ ಆರೋಪದ ಮೇಲೆ ಅಮಾನತು ಮಾಡಿ ಜಿಲ್ಲಾಧಿಕಾರಿ ಅವರು ಆದೇಶ ಹೊರಡಿಸಿದ್ದಾರೆ.
ಇದನ್ನೂ ಓದಿ : ಔರಾದ್ | ಹೋಳಿ ಸಂಭ್ರಮ : ಮಣ್ಣಿನ ಸ್ನಾನದಲ್ಲಿ ಮಿಂದೆದ್ದ ಜನ





