ಸುರಪುರ ತಾಲೂಕಿನ ಕೆಂಭಾವಿ ಪಟ್ಟಣದ ವಾರ್ಡ್ ನಂಬರ್–2ರಲ್ಲಿ ಮಹಾನಾಯಕ ಡಾ. ಬಿ ಆರ್ ಅಂಬೇಡ್ಕರ್ ಅವರ ಪ್ರತಿಮೆ ಎದುರುಗಡೆ 77ನೇ ಗಣರಾಜ್ಯೋತ್ಸವವನ್ನು ಭಾನುವಾರ ಸಂಭ್ರಮ ಹಾಗೂ ಗೌರವಭಾವದಿಂದ ಆಚರಿಸಲಾಯಿತು.
ಕಾರ್ಯಕ್ರಮದ ಆರಂಭದಲ್ಲಿ ಭೀಮರಾಯ ಮೇಸ್ತ್ರಿ ಮಾಳಳ್ಳಿಕರ್, ಸೋಮಲಿಂಗ ದೊಡ್ಡಮನಿ ಹಾಗೂ ಮಾನಪ್ಪ ಮಾಳಳ್ಳಿಕರ್ ಅವರುಗಳು ಸಂಯುಕ್ತವಾಗಿ ರಾಷ್ಟ್ರಧ್ವಜಾರೋಹಣ ನೆರವೇರಿಸಿದರು.
ಈ ಸಂದರ್ಭದಲ್ಲಿ ಮಾಜಿ ಗ್ರಾಮ ಪಂಚಾಯತ್ ಸದಸ್ಯ ಬಸವಣ್ಣಪ್ಪ ಆರ್. ಮಾಳಳ್ಳಿಕರ್ ಮಾತನಾಡಿ, ‘ಇಂದು ನಾವು ಸ್ವಾತಂತ್ರ್ಯ, ಸಮಾನತೆ ಹಾಗೂ ಭ್ರಾತೃತ್ವದ ಮೌಲ್ಯಗಳನ್ನು ಅನುಭವಿಸುತ್ತಿದ್ದರೆ ಅದರ ಮೂಲ ಡಾ. ಭೀಮರಾವ್ ಅಂಬೇಡ್ಕರ್ ಅವರು ರಚಿಸಿದ ಭಾರತೀಯ ಸಂವಿಧಾನದಲ್ಲಿದೆ. ಎಲ್ಲ ಜಾತಿ–ಜನಾಂಗ, ಧರ್ಮ ಹಾಗೂ ವರ್ಗದ ಜನರಿಗೆ ಸಮಾನ ಹಕ್ಕುಗಳು, ಮಹಿಳೆಯರಿಗೆ ಸಮಾನ ಅವಕಾಶ ಹಾಗೂ ಜಾತಿ ತಾರತಮ್ಯರಹಿತ ಸಮಾಜ ನಿರ್ಮಾಣಕ್ಕೆ ಸಂವಿಧಾನವೇ ಭದ್ರ ಅಡಿಪಾಯವಾಗಿದೆ. ಪ್ರತಿಯೊಬ್ಬ ಭಾರತೀಯನು ಸಂವಿಧಾನದ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು,’ ಎಂದು ಕರೆ ನೀಡಿದರು.
ಇದೇ ವೇಳೆ 77ನೇ ಗಣರಾಜ್ಯೋತ್ಸವದ ಶುಭ ಸಂದರ್ಭದಲ್ಲಿ ಮಹಾನ್ ನಾಯಕ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ತ್ಯಾಗ, ಹೋರಾಟ ಹಾಗೂ ಸೇವೆಯನ್ನು ಪ್ರತಿಯೊಬ್ಬ ದೇಶಪ್ರೇಮಿ ನಾಗರಿಕನು ಸ್ಮರಿಸಬೇಕೆಂದು ಅವರು ಹೇಳಿದರು.
ಇದನ್ನು ಓದಿದ್ದೀರಾ? ಕಾರ್ಕಳ ಹತ್ತಿರ ಕ್ರೂಸರ್ ಬಸ್ ಮುಖಾಮುಖಿ : ಕಲಬುರಗಿ ಜಿಲ್ಲೆಯ ನಾಲ್ವರು ಸ್ಥಳದಲ್ಲೇ ಮೃತ
ಕಾರ್ಯಕ್ರಮದಲ್ಲಿ ಯೋಗಪ್ಪ ಮಾಳಳ್ಳಿಕರ್, ತಿಪ್ಪಣ್ಣ ಅಂಬರಖೇಡ, ಅಯ್ಯಣ್ಣ ಮಾಳಳ್ಳಿಕರ್, ಶರಣಪ್ಪ ಕಾಡಮಗೇರಿ, ಭೀಮಶಂಕರ್ ಸೋಮನಾಳಕರ್, ಪರಶುರಾಮ ಮಾಳಳ್ಳಿಕರ್, ಮಲ್ಲಿಕಾರ್ಜುನ ಕಟ್ಟಿಮನಿ, ಬಸವರಾಜ ಯಮನೂರ, ಲಕ್ಷ್ಮಣ್ಣ ಬಾವಿಮನಿ, ಅಂಬರೀಶ್ ಬೊಮ್ಮನಹಳ್ಳಿ, ಜುಮಣ್ಣ ಕಟ್ಟಿಮನಿ, ತಿಪ್ಪಣ್ಣ ಅಗ್ನಿ, ಗುರಪ್ಪ ನಗನೂರ, ಸಿದ್ದಪ್ಪ ಕಂಬಾರ, ನಿಂಗಪ್ಪ ಕಟ್ಟಿಮನಿ, ಶೇಖಪ್ಪ ಇಂಗಳಿಗಿ, ಶಿವಪ್ಪ ಬಳವಾಟ, ಬಾಲರಾಜ ಬಸರಿಗಿಡ, ಶಿವು ಕಟ್ಟಿಮನಿ, ಬಸವರಾಜ ಬಡಿಗೇರ, ನಿಂಗಪ್ಪ ಅಂಬರಖೇಡ ಸೇರಿದಂತೆ ಅನೇಕ ಗಣ್ಯರು ಹಾಗೂ ಸಾರ್ವಜನಿಕರು ಭಾಗವಹಿಸಿದರು.





