ಕಾರ್ಮಿಕ ಸಚಿವರು ಹಾಗೂ ಧಾರವಾಡ ಉಸ್ತುವಾರಿ ಸಚಿವ ಸಂತೋಷ ಎಸ್ ಲಾಡ್ ಅವರ 52ನೇ ಜನ್ಮದಿನದ ಅಂಗವಾಗಿ ಬಡ ರೋಗಿಗಳು ಮತ್ತು ಆಟೋ ಚಾಲಕರಿಗೆ 200 ದಿನನಿತ್ಯ ಬಳಕೆಯ ಹಾಗೂ ಆರೋಗ್ಯ ಸಂಬಂಧಿತ ಕಿಟ್‌ಗಳನ್ನು ವಿತರಿಸುವ ಮೂಲಕ ಜನ್ಮದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಯಾದಗಿರಿ ಜಿಲ್ಲಾ ಹೆರಿಗೆ ಆಸ್ಪತ್ರೆಯಲ್ಲಿ ಬಡ ರೋಗಿಗಳಿಗೆ ಹಾಗೂ ಆಟೋ ಚಾಲಕರಿಗೆ ಶುಕ್ರವಾರ ಸಂಜೀವಿನಿ ಜೀವರಕ್ಷಕ ಟ್ರಸ್ಟ್ ವತಿಯಿಂದ 100 ಕಿಟ್‌ಗಳನ್ನು ಹಾಗೂ ಸಂತೋಷ್ ಎಸ್. ಲಾಡ್ ಅಭಿಮಾನಿ ಬಳಗ, ಯಾದಗಿರಿ ವತಿಯಿಂದ 100 ಕಿಟ್‌ಗಳನ್ನು ಒಟ್ಟು 200 ಕಿಟ್‌ಗಳನ್ನು ಫಲಾನುಭವಿಗಳಿಗೆ ಹಸ್ತಾಂತರಿಸಲಾಯಿತು.

ಯಾದಗಿರಿ ಮತಕ್ಷೇತ್ರದ ಶಾಸಕ ಚನ್ನರೆಡ್ಡಿ ಪಾಟೀಲ್ ತುನ್ನೂರ ಅವರ ಸುಪುತ್ರ ಸನ್ನಿ ಗೌಡ (ಪಂಪಣ್ಣಗೌಡ) ತುನ್ನೂರ ಫಲಾನುಭವಿಗಳಿಗೆ ಕಿಟ್‌ಗಳನ್ನು ವಿತರಿಸಿ ಮಾತನಾಡಿದ ಅವರು, ‘ಸಚಿವ ಸಂತೋಷ್ ಲಾಡ್ ಅವರು ಸದಾ ಕಾರ್ಮಿಕರು, ಬಡವರು ಹಾಗೂ ಹಿಂದುಳಿದ ವರ್ಗಗಳ ಪರವಾಗಿ ಕೆಲಸ ಮಾಡುತ್ತಿದ್ದು, ಅವರ ಜನ್ಮದಿನವನ್ನು ಸೇವಾ ಕಾರ್ಯಗಳ ಮೂಲಕ ಆಚರಿಸುವುದು ಸಂತೋಷದ ವಿಚಾರ’ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಯಾದಗಿರಿ ಜಿಲ್ಲೆಯ ಆಟೋ ರಿಕ್ಷಾ ಕಾರ್ಮಿಕರಿಗೆ ಕಾಂಗ್ರೆಸ್ ಯುವ ಮುಖಂಡ ಮಲಿಕ್ ಬೀರನೊರ ಕಿಟ್‌ಗಳನ್ನು ವಿತರಿಸಿ, ಕಾರ್ಮಿಕರ ಬದುಕಿಗೆ ನೆರವಾಗುವ ಉದ್ದೇಶದಿಂದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಇದನ್ನು ಓದಿದ್ದೀರಾ? ಯಾದಗಿರಿ | ಬಾಲಕಿ ಜೊತೆ ಅನುಚಿತ ವರ್ತನೆ ಆರೋಪ : ಮಲ್ಲಿಕಾರ್ಜುನ ಮುತ್ಯಾ ವಿರುದ್ಧ ಪೋಕ್ಸೊ ದಾಖಲು
ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಯುವ ಮುಖಂಡರಾದ ಸಿದ್ದುಪ್ರಕಾಶ್ ರೆಡ್ಡಿ, ಕೆಪಿಸಿಸಿ ಪದವೀಧರ ವಿಭಾಗದ ಜಿಲ್ಲಾ ಅಧ್ಯಕ್ಷ ವಿಶ್ವನಾಥ್ ರೆಡ್ಡಿ ಕಿರದಹಳ್ಳಿ, ಎನ್‌ಎಸ್‌ಯುಐ ಜಿಲ್ಲಾಧ್ಯಕ್ಷ ಹೊನ್ನೇಶ ದೊಡ್ಡಮನಿ, ಕೆಪಿಸಿಸಿ ಪದವೀಧರ ಜಿಲ್ಲಾ ಉಪಾಧ್ಯಕ್ಷ ಮರಿಲಿಂಗ ಸಾವೂರ ಸೇರಿದಂತೆ ಪಕ್ಷದ ಮುಖಂಡರು, ಕಾರ್ಯಕರ್ತರು ಹಾಗೂ ಅಭಿಮಾನಿಗಳು ಭಾಗವಹಿಸಿದ್ದರು.





