ಜಿಲ್ಲೆಯ ಸುರಪುರ ತಾಲೂಕಿನ ಕಕ್ಕೇರಾ ವಲಯದ ಆಯ್ಕಟ್ ರಸ್ತೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮ ಅಭಿವೃದ್ಧಿ ಯೋಜನೆಯ ಜ್ಞಾನವಿಕಾಸ ಕಾರ್ಯಕ್ರಮದಡಿ ವಾತ್ಸಲ್ಯ ಮನೆ ಹಸ್ತಾಂತರ ಕಾರ್ಯಕ್ರಮ ಆಯೋಜಿಸಲಾಯಿತು.
ಮಂಗಳವಾರ ಮಾಶಾಸನ ಫಲಾನುಭವಿಯಾದ ಮೈಬುಬ್ಬಿ ಅವರಿಗೆ ₹1,35,000 ಸಾವಿರ ವೆಚ್ಚದಲ್ಲಿ ನಿರ್ಮಿಸಲಾದ ವಾತ್ಸಲ್ಯ ಮನೆ ಹಸ್ತಾಂತರಿಸಲಾಯಿತು. ಇದೇ ವೇಳೆ ಅವರಿಗೆ ಪ್ರತಿ ತಿಂಗಳು ₹1000 ಮಾಶಾಸನ ಸಹ ನೀಡಲಾಗುತ್ತಿದೆ.
ಕಾರ್ಯಕ್ರಮದಲ್ಲಿ ಜಿಲ್ಲಾ ನಿರ್ದೇಶಕರಾದ ವಸಂತಗೌಡ ಮಾತನಾಡಿ, ‘ಯೋಜನೆಯಡಿ ಕೃಷಿ ಅಭಿವೃದ್ಧಿ, ಕೆರೆ ಹೂಳೆತ್ತುವ ಕಾರ್ಯ, ಸಮುದಾಯ ಅಭಿವೃದ್ಧಿ ಚಟುವಟಿಕೆಗಳು, ಶಾಲಾ-ಕಾಲೇಜುಗಳಿಗೆ ಡೆಸ್ಕ್-ಬೆಂಚ್ ವಿತರಣೆ, ಹಿಂದೂ ರುದ್ರಭೂಮಿ ನಿರ್ಮಾಣ, ಸುಜ್ಞಾನ ನಿಧಿ ಶಿಷ್ಯವೇತನ ಹಾಗೂ ಜನಮಂಗಳ ಯೋಜನೆಯಡಿ ವೀಲ್‌ಚೇರ್ ವಿತರಣೆ ಸೇರಿದಂತೆ ಅನೇಕ ಸೇವಾ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಜಾರಿಗೊಳಿಸಲಾಗುತ್ತಿದೆ’ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ವಿಎಸ್‌ಎಸ್‌ಎನ್ ಅಧ್ಯಕ್ಷ ಅಂಬ್ರಪ್ಪ ಮಂಡೆ, ಸೋಮಶೇಖರ್ ದೊರೆ, ಉದ್ಯಮಿಗಳಾದ ರಮೇಶ್ ಶೆಟ್ಟರ್ ಹಾಗೂ ಪ್ರಕಾಶ ಕುಂಬಾರ, ಸೋಮನಾಥ ದೇವಸ್ಥಾನದ ಅರ್ಚಕ ಅಯ್ಯಣ್ಣ ಪೂಜೇರಿ ಸೇರಿದಂತೆ ಹಲವರು ಭಾಗವಹಿಸಿದ್ದರು. ಜೊತೆಗೆ ದಸ್ತಗೀರ್ ಶಾನಿಮುತ್ತ್ಯಾ, ಮೂಡೆಪ್ಪ ದೇಸಾಯಿ, ಬಸವರಾಜ್, ಶರಣು ಅಕ್ಕಿ, ಬಾಶಾಸಾಬ್, ಮೈಬುಬ್ ಸಾಬ್, ಶಿವಲಿಂಗಪ್ಪ ಉಪಸ್ಥಿತರಿದ್ದರು.
ತಾಲೂಕಿನ ಯೋಜನಾಧಿಕಾರಿಗಳಾದ ನಾಗೇಶ್ ಎನ್‌ಪಿ ಹಾಗೂ ಜ್ಞಾನವಿಕಾಸ ಸಮನ್ವಯ ಅಧಿಕಾರಿ ಅನಿತಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ವಲಯ ಮೇಲ್ವಿಚಾರಕರಾದ ನಿಂಗರಾಜ್ ಬಿಎಸ್ ಸ್ವಾಗತಿಸಿ, ಸುರಿಯಾ ಬೇಗಂ ವಂದಿಸಿದರು. ಸೇವಾ ಪ್ರತಿನಿಧಿಗಳಾದ ರವಿ, ಸೈದಾಬಿ ಕಾಜಾಬಿ, ಒಕ್ಕೂಟದ ಅಧ್ಯಕ್ಷೆ ಕಸ್ತೂರಿ ಹಾಗೂ ಸಂಘದ ಸದಸ್ಯರು ಉಪಸ್ಥಿತರಿದ್ದರು.
ಇದನ್ನು ಓದಿದ್ದೀರಾ? ಯಾದಗಿರಿ | ಹತ್ತಿಕುಣಿ ಹೊರವಲಯದಲ್ಲಿ ಚಿರತೆ ದಾಳಿ: ಹಸು ಬಲಿ, ಕರುಗೆ ಗಾಯ
ಜ್ಞಾನವಿಕಾಸ ಕಾರ್ಯಕ್ರಮದಡಿ ಒಟ್ಟು 11 ವಾತ್ಸಲ್ಯ ಮನೆಗಳನ್ನು ನಿರ್ಮಿಸಲಾಗಿದ್ದು, ಇಂತಹ ಯೋಜನೆಗಳು ದುರ್ಬಲ ವರ್ಗದ ಜನರಿಗೆ ಆಶ್ರಯ ಒದಗಿಸುತ್ತಿವೆ ಎಂದು ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದರು.





