ವಡಿಗೇರಾ ತಾಲೂಕಿನ ಟಿ. ವಡಿಗೇರಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳು ವಸತಿ ಯೋಜನೆಗಳ ಅಕ್ರಮಗಳಲ್ಲಿ ಇಡೀ ಜಿಲ್ಲೆಯಲ್ಲಿ ಅಗ್ರಸ್ಥಾನದಲ್ಲಿವೆ ಎನ್ನುವ ಗಂಭೀರ ಆರೋಪಗಳು ಕೇಳಿಬಂದಿವೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವಸತಿ ರಹಿತರಿಗೆ ಒದಗಿಸಬೇಕಾದ ವಸತಿ ಯೋಜನೆಗಳನ್ನು ಸರಿಯಾದ ಫಲಾನುಭವಿಗಳಿಗೆ ಕಾನೂನುಬದ್ಧ ನಿಯಮಾನುಸಾರ ನೀಡದೆ, ಅಕ್ರಮವಾಗಿ ಬೋಗಸ್ ಬಿಲ್ಲುಗಳ ಮೂಲಕ ಹಣ ಎತ್ತಿಕೊಳ್ಳಲಾಗುತ್ತಿದೆ ಎಂದು ಸಂಘಟನಾಕಾರರು ಆರೋಪಿಸಿದರು.
ಈ ಕುರಿತು ಕರ್ನಾಟಕ ರಾಜ್ಯ ರೈತಸಂಘವು ಹತ್ತಾರು ಬಾರಿ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಿ, ಹೋರಾಟಗಳನ್ನು ನಡೆಸಿದರೂ ಯಾವುದೇ ಸ್ಪಂದನೆ ದೊರಕಿಲ್ಲ. ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ಅಕ್ರಮಗಳಿಗೆ ವಿರೋಧವಾಗಿ ಸಂಘವು ಕಠಿಣ ಹೋರಾಟಕ್ಕೆ ಮುಂದಾಗಿದೆ.
ಈ ಹಿನ್ನೆಲೆ, ಜನವರಿ 8, 2026ರ ಗುರುವಾರ ವಡಿಗೇರಾ ತಾಲೂಕಿನ ಗುರುಸಣಿಗಿ ಕ್ರಾಸ್ ಬಳಿ ಡಿ ಸಿ ಕಚೇರಿಗೆ ತೆರಳುವ ಸೇತುವೆ ಹಾಗೂ ಬ್ಯಾರೇಜ್ ಸಮೀಪದ ರಸ್ತೆ ತಡೆ ಪ್ರತಿಭಟನೆ ನಡೆಸಲು ತೀರ್ಮಾನಿಸಲಾಗಿದೆ ಎಂದು ಸಂಘದ ಮುಖಂಡರು ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಕಲಬುರಗಿ | ಕೇಂದ್ರ ಕಾರಾಗೃಹದಲ್ಲಿ ಕೈದಿಗಳ ನಡುವೆ ಗಲಾಟೆ
ಈ ಸಂದರ್ಭದಲ್ಲಿ ಬಾಲಾಜಿ ಟಿ. ವಡಿಗೇರಾ ದೇವೇಂದ್ರಪ್ಪ ಟಿ. ವಡಿಗೇರಾ, ಮಹಿಬೂಬಸಾಬ, ಮಲ್ಲಿಕಾರ್ಜುನ ಸತ್ಯಂಪೇಟೆ, ಶರಣು ಮಂದ್ರವಾಡ, ಶರಣುರೆಡ್ಡಿ ಹತ್ತಿಗುಡೂರು, ಮಲ್ಕಣ್ಣ ಚಿಂತಿ, ಬಸವರಾಜ ಹೊಸಮನಿ, ಶರಣಪ್ಪ ಹಂಚಿನಾಳ ಸೇರಿದಂತೆ ಅನೇಕ ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.





