ಯಾದಗಿರಿ | ಆಸ್ತಿ ವಿವಾದ, ಹಳೆಯ ವೈಷಮ್ಯ ಹಿನ್ನೆಲೆ ₹2.50 ಲಕ್ಷ ಸುಪಾರಿಗೆ ತಂದೆಯ ಕೊಲೆ; ಮಗ ಸೇರಿ ಐವರ ಬಂಧನ

Date:

ವಡಗೇರಾ ತಾಲ್ಲೂಕಿನ ಗೋನಾಲ ಗ್ರಾಮದಲ್ಲಿ ನಡೆದ ವೃದ್ಧನ ಹತ್ಯೆ ಪ್ರಕರಣಕ್ಕೆ ಬೆಚ್ಚಿಬೀಳಿಸುವ ತಿರುವು ಸಿಕ್ಕಿದ್ದು, ಆಸ್ತಿ ವಿವಾದ ಹಾಗೂ ವೈಯಕ್ತಿಕ ವೈಷಮ್ಯದ ಹಿನ್ನೆಲೆ ಮಗನೇ ಸುಪಾರಿ ನೀಡಿ ತಂದೆಯನ್ನು ಕೊಲೆ ಮಾಡಿಸಿದ ಪ್ರಕರಣ ಪೊಲೀಸ್ ತನಿಖೆಯಲ್ಲಿ ಬಹಿರಂಗವಾಗಿದೆ.

ಕೊಲೆಯಾದವರು ಹಂಪಣ್ಣ ಸಜ್ಜನ್ (76) ಎಂದು ಗುರುತಿಸಲಾಗಿದೆ. ಈ ಪ್ರಕರಣದಲ್ಲಿ ಅವರ ಮಗ ನರಸರೆಡ್ಡಿ ಸಜ್ಜನ್ (48) ಪ್ರಮುಖ ಆರೋಪಿ ಎಂದು ಪತ್ತೆಯಾಗಿದ್ದು, ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ರಾಚಮರ್ರಿ ಗ್ರಾಮದ ರಮೇಶ್ ನರಸಪ್ಪ (32), ಜಿ ವೀರೇಶ್ ಮುರಕಪ್ಪ (40), ಕೃಷ್ಣ ತಿಕ್ಕಯ್ಯ (28) ಹಾಗೂ ಎಂ ವೀರೇಶ್ ಉರಕುಂದಿ (26) ಸೇರಿದಂತೆ ಒಟ್ಟು ಐವರನ್ನು ಪೊಲೀಸರು ಬಂಧಿಸಿದ್ದಾರೆ.

ಮಾರ್ಚ್ 11ರ ರಾತ್ರಿ, ಗೋನಾಲ ಗ್ರಾಮದ ಹೊರವಲಯದಲ್ಲಿರುವ ಹೊಲದ ಮನೆಯಲ್ಲಿ ಒಂಟಿಯಾಗಿ ವಾಸಿಸುತ್ತಿದ್ದ ಹಂಪಣ್ಣ ಮೇಲೆ ಆರೋಪಿಗಳು ದಾಳಿ ನಡೆಸಿದ್ದಾರೆ. ಕುತ್ತಿಗೆಯನ್ನು ಬಿಗಿದು, ದೇಹದ ವಿವಿಧ ಭಾಗಗಳಿಗೆ, ವಿಶೇಷವಾಗಿ ತೊಡೆ ಭಾಗಕ್ಕೆ ಗಂಭೀರ ಗಾಯಗೊಳಿಸಿ ಕ್ರೂರವಾಗಿ ಹತ್ಯೆ ಮಾಡಲಾಗಿದೆ. ಘಟನೆ ಬಳಿಕ ಮೊದಲಿಗೆ ಶವವನ್ನು ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದವರೇ ಮಗ ನರಸರೆಡ್ಡಿ ಎಂಬುದು ಪ್ರಕರಣಕ್ಕೆ ಮತ್ತಷ್ಟು ಸಂಶಯ ಹುಟ್ಟಿಸಿತು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ತನಿಖೆಯಲ್ಲಿ ಹೊರಬಂದ ಸಂಗತಿಗಳು

ಪ್ರಾರಂಭಿಕ ಹಂತದಲ್ಲಿ ಪ್ರಕರಣವನ್ನು ಆಸ್ತಿ ವಿವಾದದ ದೃಷ್ಟಿಯಿಂದ ಪರಿಶೀಲಿಸಿದ ಪೊಲೀಸರು, ಬಳಿಕ ಕುಟುಂಬದೊಳಗಿನ ಒಳಜಗಳ, ವೈಯಕ್ತಿಕ ಅಸಮಾಧಾನ ಹಾಗೂ ಹಳೆಯ ವೈಷಮ್ಯಗಳತ್ತ ಗಮನ ಹರಿಸಿದರು. ತನಿಖೆಯಲ್ಲಿ ಹಂಪಣ್ಣ ಅವರ ಜೀವನ ಶೈಲಿ, ಕುಟುಂಬದೊಳಗಿನ ಭಿನ್ನಾಭಿಪ್ರಾಯಗಳು ಹಾಗೂ ಹಿಂದಿನ ಘಟನೆಗಳ ಕುರಿತು ಹಲವು ಮಾಹಿತಿ ಹೊರಬಂದಿವೆ.

ಹಂಪಣ್ಣ ಅವರು ತಮ್ಮ ಆಸ್ತಿಯನ್ನು ಮೂರು ಮಕ್ಕಳಿಗೆ ಹಂಚಿಕೊಂಡಿದ್ದರೂ, ತಮ್ಮ ಬಳಿ ಸುಮಾರು 12 ಎಕರೆ ಜಮೀನು ಉಳಿಸಿಕೊಂಡು ಹೊಲದಲ್ಲೇ ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ಸುಮಾರು ಹತ್ತು ವರ್ಷಗಳ ಹಿಂದೆ ಪತ್ನಿ ಮೃತಪಟ್ಟ ನಂತರ ಅವರು ಏಕಾಂಗಿಯಾಗಿ ಜೀವನ ಸಾಗಿಸುತ್ತಿದ್ದರು ಎನ್ನಲಾಗಿದೆ. ಈ ಅವಧಿಯಲ್ಲಿ ಅವರ ನಡೆ-ನುಡಿಗಳ ಬಗ್ಗೆ ಕುಟುಂಬದೊಳಗೆ ಅಸಮಾಧಾನ ಹೆಚ್ಚಾಗಿದ್ದುದಾಗಿ ತಿಳಿದುಬಂದಿದೆ.

ಆಸ್ತಿ ವಿವಾದವೇ ಮೂಲ ಕಾರಣ

ಹಂಪಣ್ಣ ಅವರು ತಮ್ಮ ಜಮೀನಿನ ಒಂದು ಭಾಗವನ್ನು ಕಡಿಮೆ ದರಕ್ಕೆ ಮಾರಾಟ ಮಾಡಿದ್ದ ವಿಚಾರಕ್ಕೆ ಸಂಬಂಧಿಸಿ ಕುಟುಂಬದೊಳಗೆ ಭಿನ್ನಾಭಿಪ್ರಾಯ ಉಂಟಾಗಿತ್ತು. ಈ ವಿಚಾರವಾಗಿ ಮಕ್ಕಳು ನ್ಯಾಯಾಲಯದ ಮೆಟ್ಟಿಲೇರಿದ್ದರೆಂಬ ಮಾಹಿತಿಯೂ ಲಭ್ಯವಾಗಿದೆ. ಇದರಿಂದ ಕುಟುಂಬದೊಳಗಿನ ಅಸಮಾಧಾನ ಮತ್ತಷ್ಟು ಗಾಢಗೊಂಡಿತ್ತು.

ಸುಪಾರಿ ಸಂಚು ಹೇಗೆ ರೂಪುಗೊಂಡಿತು?

ಪೊಲೀಸ್ ತನಿಖೆಯಲ್ಲಿ ಬಹಿರಂಗವಾದಂತೆ, ನರಸರೆಡ್ಡಿ ತನ್ನ ತಂದೆಯನ್ನು ಕೊಲೆ ಮಾಡಲು ಆಂಧ್ರಪ್ರದೇಶ ಮೂಲದ ನಾಲ್ವರನ್ನು ಸಂಪರ್ಕಿಸಿದ್ದಾನೆ. ಈ ನಾಲ್ವರು ಹಿಂದೆ ಹಂಪಣ್ಣನ ಜಮೀನಿನಲ್ಲಿ ಕೆಲಸ ಮಾಡಿದ್ದವರಾಗಿದ್ದು, ಹಳೆಯ ವೈಷಮ್ಯವೂ ಹೊಂದಿದ್ದರು.

ಈ ಹಿನ್ನೆಲೆ, ನರಸರೆಡ್ಡಿ ₹2.50 ಲಕ್ಷ ಸುಪಾರಿ ನೀಡಲು ಒಪ್ಪಂದ ಮಾಡಿಕೊಂಡಿದ್ದಾನೆ. ಹಣದ ಅವಶ್ಯಕತೆ ಹಾಗೂ ಹಳೆಯ ಸಿಟ್ಟಿನ ಕಾರಣಕ್ಕೆ ಆರೋಪಿಗಳು ಕೊಲೆ ಮಾಡಲು ಸಮ್ಮತಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಂಧನಕ್ಕೆ ದಾರಿ ಮಾಡಿದ ಡಿಜಿಟಲ್ ಸುಳಿವುಗಳು

ಘಟನೆ ನಡೆದ ದಿನ ರಾತ್ರಿ ಬೈಕ್‌ಗಳಲ್ಲಿ ಗೋನಾಲ ಗ್ರಾಮಕ್ಕೆ ಬಂದ ಆರೋಪಿಗಳು, ಕೊಲೆ ನಡೆಸಿ ಪರಾರಿಯಾಗಿದ್ದರು. ಬಳಿಕ ತಮ್ಮ ಸ್ವಗ್ರಾಮಗಳಿಗೆ ತೆರಳಿ ಯಾವುದೇ ಅನುಮಾನ ಬಾರದಂತೆ ಸಹಜವಾಗಿ ವರ್ತಿಸುತ್ತಿದ್ದರು.

ಆದರೆ ಪೊಲೀಸರು ಕಾಲ್ ಡೀಟೇಲ್ಸ್, ಮೊಬೈಲ್ ಡೇಟಾ ಹಾಗೂ ವಾಟ್ಸ್‌ಆಪ್‌ ಚಾಟ್‌ಗಳ ಪರಿಶೀಲನೆ ಮೂಲಕ ಪ್ರಕರಣವನ್ನು ಭೇದಿಸಿದರು. ಮೊದಲಿಗೆ ದೂರು ನೀಡಿದ್ದ ನರಸರೆಡ್ಡಿಯ ಮೇಲೆಯೇ ಅನುಮಾನ ವ್ಯಕ್ತವಾಗಿ, ವಿಚಾರಣೆಯಲ್ಲಿ ಆತನೇ ಸಂಚಿನ ಸೂತ್ರಧಾರನೆಂದು ಒಪ್ಪಿಕೊಂಡಿದ್ದಾನೆ. ನಂತರ ಉಳಿದ ಆರೋಪಿಗಳನ್ನೂ ಬಂಧಿಸಲಾಗಿದೆ.

ಇದನ್ನು ಓದಿದ್ದೀರಾ? ಯಾದಗಿರಿ | ಊರಿಗೆ ತೆರಳಲು ವಾಹನ ಸಿಕ್ಕಿಲ್ಲವೆಂದು ಸಾರಿಗೆ ಬಸ್ ಕದ್ದೊಯ್ದ ಚಾಲಕ!

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪೃಥ್ವಿಕ್ ಶಂಕರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನಷ್ಟು ಅಂಶಗಳ ಕುರಿತು ತನಿಖೆ ಮುಂದುವರಿದಿದೆ ಎಂದು ತಿಳಿಸಿದ್ದಾರೆ. ಡಿವೈಎಸ್‌ಪಿ ಸುರೇಶ್ ನಾಯಕ ಮಾರ್ಗದರ್ಶನದಲ್ಲಿ ಸಿಪಿಐ ಸುನಿಲ್ ವಿ. ಮೂಲಿಮನಿ ಹಾಗೂ ಪಿಎಸ್‌ಐ ಮಹೆಬೂಬ್ ಅಲಿ ಅವರ ತಂಡ ಈ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ನಡೆಸಿದೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಯಾದಗಿರಿ | ಸಾಮಾಜಿಕ ಬಹಿಷ್ಕಾರ : ನದಿಗೆ ಹಾರಿ ಮಹಿಳೆ ಆತ್ಮಹತ್ಯೆ

ಸಾಮಾಜಿಕ ಬಹಿಷ್ಕಾರಕ್ಕೆ ಮನನೊಂದು ಮಾಂಗಲ್ಯ ಸರ ತೆಗೆದಿಟ್ಟು ನದಿಗೆ ಹಾರಿ ಮಹಿಳೆಯೊಬ್ಬರು...

ಯಾದಗಿರಿ | ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಭಯ ಬೇಡ: ಸಿಇಒ ಲವೀಶ್ ಒರಡಿಯಾ

ಎಸ್ಎಸ್‌ಎಲ್‌ಸಿ ಪರೀಕ್ಷೆಗೆ ವಿದ್ಯಾರ್ಥಿಗಳು ಭಯಪಡಬೇಕಾದ ಅಗತ್ಯ ಇಲ್ಲ. ಆತ್ಮವಿಶ್ವಾಸದಿಂದ ಹಾಗೂ ಸಮರ್ಪಕವಾಗಿ...

ಯಾದಗಿರಿ | ವಿದ್ಯಾರ್ಥಿನಿ ಆತ್ಮಹತ್ಯೆ: ವಸತಿ ನಿಲಯದ ಕೋಣೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆ

ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯೊಬ್ಬಳು ವಸತಿ ನಿಲಯದ ಕೋಣೆಯಲ್ಲಿ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ...

ಯಾದಗಿರಿ | ಕ್ರೂಸರ್ ಬೈಕ್ ಮುಖಾಮುಖಿ ಡಿಕ್ಕಿ: ಸವಾರರಿಬ್ಬರು ಸ್ಥಳದಲ್ಲೇ ಸಾವು

ಸುರಪುರ ತಾಲೂಕಿನ ಆಲ್ದಾಳ ಮುಖ್ಯ ರಸ್ತೆಯಲ್ಲಿ ಕ್ರೂಸರ್ ವಾಹನ ಮತ್ತು ಬೈಕ್...