ಯಾದಗಿರಿ | ಮಕ್ಕಳ ಕಲಿಕೆಗೆ ಶಿಕ್ಷಕರ ಜೊತೆಗೆ ಪೋಷಕರ ಪಾತ್ರ ಮುಖ್ಯ: ಸಿಆರ್‌ಪಿ ಜಿ ಗುಂಡೂರಾವ್

Date:

ಮಗುವಿನ ಶಿಕ್ಷಣವು ಮನೆಯಿಂದಲೇ ಪ್ರಾರಂಭವಾಗುತ್ತದೆ ಮತ್ತು ಪೋಷಕರೇ ಅವರ ಮೊದಲ ಶಿಕ್ಷಕರು. ಮಗುವಿನ ವ್ಯಕ್ತಿತ್ವ, ಸ್ವಭಾವ, ಅಭ್ಯಾಸಗಳು, ಭಾವನಾತ್ಮಕ ಬೆಳವಣಿಗೆ ಇತ್ಯಾದಿಗಳನ್ನು ರೂಪಿಸುವಲ್ಲಿ ಪಾಲಕರು ನಿರ್ಣಾಯಕ ಪಾತ್ರವನ್ನು ವಹಿಸುತ್ತಾರೆ ಎಂದು ಸಿಆರ್‌ಪಿ ಗುಂಡೂರಾವ್ ಮಕ್ಕಳ ಪೋಷಕರಿಗೆ ಕಿವಿಮಾತು ಹೇಳಿದರು.

ಯಾದಗಿರಿ ನಗರದ ಹೊಸಳ್ಳಿ ಕ್ರಾಸ್ ಬಳಿ ಇರುವ ರತ್ನಂ ಶಾಲಾ ವಾರ್ಷಿಕೋತ್ಸವ ದಿನ ಮತ್ತು ಕ್ರಿಸ್‌ಮಸ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

“ಯಾವುದೇ ಶಾಲೆಯಲ್ಲಿ ನಮ್ಮ ಮಕ್ಕಳು ಕಲಿಯಲು ಆ ಶಾಲೆ ಶಿಕ್ಷಕರ ಜೊತೆಗೆ ತಂದೆ-ತಾಯಿ ಅವರ ಉತ್ತಮ ಒಡನಾಟ ಇಟ್ಟುಕೊಳ್ಳಬೇಕು. ಅವರಿಗೆ ಬೆಂಬಲವನ್ನು ನೀಡಬೇಕು. ಮನೆಯ ಮೊದಲ ಗುರು ಎಂದರೆ ಅದು ತಂದೆ ತಾಯಿ. ಹಾಗಾಗಿ ಶಾಲೆಯಿಂದ ಬಂದ ಮಕ್ಕಳನ್ನು ತಾವೂ ಕೂಡ ಮಕ್ಕಳ ನಡವಳಿಕೆ ಮುಕ್ತವಾಗಿ ಆಲಿಸಬೇಕು. ಮಕ್ಕಳ ಕಲಿಕೆ ಮತ್ತು ಅವರನ್ನು ಗಮನಿಸಿ ಒಳ್ಳೆಯ ದಾರಿಯಲ್ಲಿ ಕೊಂಡೊಯ್ಯಲು ಶಿಕ್ಷಕರ ಜೊತೆಗೆ ಪೋಷಕರ ಅರ್ಧ ಪಾತ್ರವಿದೆ” ಎಂದು ಹೇಳಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಸಾಮಾಜಿಕ ಹೋರಾಟಗಾರ ಉಮೇಶ್ ಮುದ್ನಾಳ್‌ ಮಾತನಾಡಿ, “ನಿಮ್ಮ ಮಕ್ಕಳನ್ನು ತಾಲೂಕು ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳನ್ನಾಗಿ ಮಾಡಲು ಪೋಷಕರು ಪಣತೊಡಬೇಕು. ಮಕ್ಕಳನ್ನು ಎಲ್ಲ ರಂಗದಲ್ಲಿ ಬೆಳೆಸಲು ಪೋಷಕರ ಸಹಕಾರ ಕೂಡಾ ಇದೆ. ಶಿಕ್ಷಕರಿಂದ ಮಾತ್ರ ಸಾಧ್ಯವಿಲ್ಲ. ಪೋಷಕರೂ ಕೂಡ ಕೈ ಜೋಡಿಸಿದಾಗ ಮಕ್ಕಳ ಭವಿಷ್ಯಕ್ಕೆ ಅನುಕೂಲವಾಗುತ್ತದೆ. ಶಿಕ್ಷಣ ಎಂಬುದು ಹುಲಿಯ ಹಾಲು ಇದ್ದಂತೆ. ಹಾಗಾಗಿ ನೀವು ಉತ್ತಮ ಶಿಕ್ಷಣ ಪಡೆದಾಗ ಮಾತ್ರ ಉನ್ನತ ಸ್ಥಾನಕ್ಕೇರಲು ಸಾಧ್ಯವಾಗುತ್ತದೆ” ಎಂದು ಅಭಿಪ್ರಾಯಪಟ್ಟರು.

“ನಿಮ್ಮ ಮಕ್ಕಳು ಕಾರ್ಯಕ್ರಮದಲ್ಲಿ ಪ್ರದರ್ಶಿಸಿದ ಕಲೆ ನೋಡಿ ನೀವು ತುಂಬಾ ಖುಷಿಯಾಗಿದ್ದೀರಿ. ನಮಗೂ ಕೂಡ ಪುಟ್ಟ ಮಕ್ಕಳ ಕಲೆ ನೋಡಿ ತುಂಬಾ ಖುಷಿ ತಂದಿದೆ. ಹೀಗೆ ಮಕ್ಕಳು ಉತ್ತಮ ಶಿಕ್ಷಣ ಪಡೆದು ಶಾಲೆಯ ಹೆಸರು ಮತ್ತು ತಂದೆ ತಾಯಿ ಹೆಸರು ತರಬೇಕೆಂಬುದು ನಮ್ಮ ಆಶಯ” ಎಂದು ಬಿ ಶ್ಯಾಮವೇಲ್ ಪ್ರಾಸ್ತಾವಿಕವಾಗಿ ಮಾತನಾಡಿದರು.

ಮಕ್ಕಳ ನೃತ್ಯಕ್ಕೆ ಪೋಷಕರ ಮೆಚ್ಚುಗೆ

ರತ್ನಂ ಶಾಲಾ ವಾರ್ಷಿಕೋತ್ಸವ ದಿನ ಮತ್ತು ಕ್ರಿಸ್‌ಮಸ್ ಕಾರ್ಯಕ್ರಮದಲ್ಲಿ ಶಾಲೆಯ ಪುಟಾಣಿ ಮಕ್ಕಳು ಬಣ್ಣಬಣ್ಣದ ಉಡುಪು ಧರಿಸಿ ನೃತ್ಯ ಮಾಡಿದ ಕಲೆ ನೋಡಿ ಶಿಕ್ಷಕರು ಮತ್ತು ಪೋಷಕರು ಖುಷಿಪಟ್ಟರು.

ಪೋಷಕರ ಮನಸ್ಸು ಸೆಳೆದ ಪುಟಾಣಿ ಮಕ್ಕಳು

ಸ್ವಾತಂತ್ರ್ಯ ಹೋರಾಟಗಾರರ ವೇಷಭೂಷಣ ಧರಿಸಿದ ಪುಟಾಣಿ ಮಕ್ಕಳು ಪೋಷಕರು ಉಬ್ಬೇರುಸುವಂತೆ ಮಾಡಿದರು. ಇದೇ ವೇಳೆ ರತ್ನಂ ಶಾಲಾ ವಾರ್ಷಿಕೋತ್ಸವ ದಿನ ಮತ್ತು ಕ್ರಿಸ್‌ಮಸ್ ಕಾರ್ಯಕ್ರಮದ ಪ್ರಯುಕ್ತ ವಿವಿಧ ಕ್ರೀಡೆಯಲ್ಲಿ ವಿಜೇತರಾದ ಮಕ್ಕಳಿಗೆ ಕಪ್ ಮತ್ತು ವಿಜೇತ ಪತ್ರ ವಿತರಿಸಿದರು.

ಈ ಸುದ್ದಿ ಓದಿದ್ದೀರಾ? ಉಡುಪಿ | ನ್ಯಾ. ಶಾಂತಾರಾಮ್ ಶೆಟ್ಟಿಗೆ ‘ಅಲೆವೂರು ಗ್ರೂಪ್ ಪ್ರಶಸ್ತಿ’ ಪ್ರದಾನ

ಈ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿ ಫಾದರ್ ಜಾನ್ ವೆಸ್ಲಿ, ಮಲ್ಲಣ್ಣ ದಾಸನಕೇರಿ, ಸಲೋಚನ್, ಸೌಮ್ಯಶ್ರಿ, ಪೀಭ್ಭ, ನಾಗಪ್ಪ, ರಷೀಮಿ, ಸೈಲಾಜ, ಸುನೀತಾ, ಗೀತಾಂಜಲಿ, ಅಂಬಿಕಾ, ಯೋಸುರಾಜ, ಅಂಜನಾ ಸೇರಿದಂತೆ ಇತರರು ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...