ಮಕರ ಸಂಕ್ರಾಂತಿ ಪ್ರಯುಕ್ತ ಮುಂಡರಗಿ ಗ್ರಾಮೀಣ ಕ್ರಿಕೆಟ್ ಟೂರ್ನಮೆಂಟ್–2026 ಅನ್ನು ಫೆಬ್ರವರಿ 1ರಿಂದ ಯಾದಗಿರಿ ನಗರದ ಹೊರವಲಯದಲ್ಲಿರುವ ಮುಂಡರಗಿ ಗ್ರಾಮದಲ್ಲಿ ಆಯೋಜಿಸಲಾಗಿದೆ ಎಂದು ಟೂರ್ನಮೆಂಟ್ ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
‘ಈ ಟೂರ್ನಮೆಂಟ್‌ನಲ್ಲಿ ಪ್ರಥಮ ಸ್ಥಾನ ಪಡೆಯುವ ತಂಡಕ್ಕೆ ರೂ.25, ಸಾವಿರ ನಗದು ಬಹುಮಾನ ಹಾಗೂ ಕಪ್, ದ್ವಿತೀಯ ಸ್ಥಾನ ಪಡೆಯುವ ತಂಡಕ್ಕೆ ರೂ.20, ಸಾವಿರ ನಗದು ಬಹುಮಾನ ಹಾಗೂ ಕಪ್ ನೀಡಲಾಗುವುದು. ಅಲ್ಲದೇ ವಿವಿಧ ವಿಭಾಗಗಳ ಉತ್ತಮ ಸಾಧಕರಿಗೆ ಬಹುಮಾನಗಳು ಹಾಗೂ ಸ್ಮರಣಿಕೆಗಳನ್ನು ನೀಡಲಾಗುವುದು’ ಎಂದು ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಕಲಬುರಗಿ | ಬಸ್ ಟ್ಯಾಂಕರ್ ನಡುವೆ ಡಿಕ್ಕಿ ; ಹಲವರಿಗೆ ಗಾಯ
‘ಮುಂಡರಗಿ ಗ್ರಾಮದಲ್ಲಿ ನಡೆಯುವ ಈ ಗ್ರಾಮೀಣ ಕ್ರಿಕೆಟ್ ಟೂರ್ನಮೆಂಟ್‌ನಲ್ಲಿ ಪಾಲ್ಗೊಳ್ಳಲು ಆಸಕ್ತ ತಂಡಗಳು ಸಂಘಟಕರನ್ನು ಸಂಪರ್ಕಿಸುವಂತೆ ಕೋರಲಾಗಿದೆ. ಹೆಚ್ಚಿನ ವಿವರಗಳಿಗಾಗಿ ಟೂರ್ನಮೆಂಟ್ ವ್ಯವಸ್ಥಾಪಕ ರವಿ ಎಂ. ಅವರನ್ನು ಮೊಬೈಲ್ ಸಂಖ್ಯೆ: 9739689107 ನಲ್ಲಿ ಸಂಪರ್ಕಿಸಬಹುದು’ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.





