ಪ್ರಧಾನಿ ಮೋದಿ ಹೆಸರು ಎಫ್ಸ್ ಟೀನ್ ಫೈಲ್‌ನಲ್ಲಿ ಉಲ್ಲೇಖ ಯುವ ಕಾಂಗ್ರೆಸ್ ಪ್ರತಿಭಟನೆ

Date:

ಕೋಲಾರ: ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಹೆಸರು ಎಫ್ಸ್ ಟೀನ್ ಫೈಲ್ ನಲ್ಲಿ ಉಲ್ಲೇಖಿಸಲಾಗಿದ್ದು ಭಾರತ ದೇಶದ ಘನತೆ ಮತ್ತು ಗಾಂಭೀರ್ಯತೆಗೆ ಕಪ್ಪು ಚುಕ್ಕೆ ತಂದಿದ್ದಾರೆ ಕೂಡಲೇ ರಾಜೀನಾಮೆ ಕೊಡಬೇಕು ಎಂದು ಒತ್ತಾಯಿಸಿ ಜಿಲ್ಲಾ ಯುವ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಆಫ್ರೀದ್ ನೇತೃತ್ವದಲ್ಲಿ ನಗರದ ಮೆಕ್ಕೆ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ಆಫ್ರೀದ್ ಮಾತನಾಡಿ ನಮ್ಮ ದೇಶದ ಪ್ರಧಾನಿ ನರೇಂದ್ರ ಮೋದಿ ರವರು ಟ್ರಂಪ್ ಜೊತೆ ಮತ್ತು ಎಫ್ಸ್ ಟೀನ್ ಜೊತೆ ಸಂಬಂಧ ಏನು ಅಂತ ಕೂಡಲೇ ಉತ್ತರ ಕೊಡಬೇಕು ಪ್ರಧಾನಿ ಬೇರೆ ದೇಶದ ಅಧ್ಯಕ್ಷರ ಮುಂದೆ ಕುಣಿತಾರೆ ಅಂದ್ರೆ ನಮ್ಮ ದೇಶಕ್ಕೆ ಅಗೌರವ ತಂದಿದ್ದಾರೆ ಮೋದಿ ಬಂಡವಾಳಶಾಹಿ ಪರವಾಗಿದ್ದಾರೆ ಅದಕ್ಕಾಗಿ ದೇಶವನ್ನು ಮಾರಾಟ ಮಾಡಲು ಸಂಚು ರೂಪಿಸಿದ್ದಾರೆ ಇದಕ್ಕೆ ಕಾಂಗ್ರೆಸ್ ಪಕ್ಷವು ಬಿಡುವುದಿಲ್ಲ ಎಂದರು.

ಎಫ್ಸ್ಟಿನ್ ಫೈಲ್ ಏನೆಂದರೆ ಜಫ್ರಿ ಎಫ್ಸ್ಟಿನ್ ಒಬ್ಬ ಕಾಮುಕ 18 ವರ್ಷಗಿಂತ ಕಡಿಮೆ ವಯಸ್ಸಿನ ಹೆಣ್ಣು ಮಕ್ಕಳಿಗೆ ಅತ್ಯಾಚಾರ ಮಾಡಿರುತ್ತಾನೆ. ಈ ಎಫ್ಸ್ಟಿನ್ ಫೈಲ್ ನಲ್ಲಿ ಮೋದಿ ಹೆಸರು ಕೂಡ ಇದೆ ಜಫ್ರಿ ಎಫ್ಸ್ಟಿನ್ ಅನೀಲ್ ಅಂಬಾನಿ ಸ್ನೇಹಿತನಾಗಿದ್ದ ಇಸ್ರೇಲ್ ನಲ್ಲಿ ಅಮೆರಿಕ ಅಧ್ಯಕ್ಷರ ಮುಂದೆ ಡ್ಯಾನ್ಸ್ ಮಾಡಿದ್ದಾರೆ ಎಂದು.

‌ಎಫ್ಸ್ಟಿನ್ ಫೈಲ್ ನಲ್ಲಿ ಮೋದಿ ಹೆಸರು ಬಂದಿದ್ದು ಇದನ್ನು ಮುಚ್ಚಿಕೊಳ್ಳುವುದಕ್ಕೆ ಪ್ರಧಾನಿ ಮೋದಿ ರವರು ಇದುವರೆಗೂ ಒಂದೇ ಒಂದು ಪತ್ರಿಕಾಗೋಷ್ಠಿ ಮಾಡಲಿಲ್ಲ ಯಾಕೆಂದರೆ ಮೋದಿಗೆ ಎಫ್ಸ್ಟಿನ್ ಫೈಲ್ ಭಯ ಇದರಿಂದ ನಮ್ಮ ದೇಶದ ಮೇಲೆ ಟೆರಿಫ್ ಜಾಸ್ತಿ ಮಾಡಿದ್ರು ಇದನ್ನು ನಾವು ಖಂಡಿಸುತ್ತೇವೆ ಹಾಗೂ ಪ್ರಧಾನಿ ಮೋದಿ ಈ ಕೂಡಲೇ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸುತ್ತೇವೆ.

ಈ ಸಂದರ್ಭದಲ್ಲಿ ಜಿಲ್ಲಾ ಉಪಾಧ್ಯಕ್ಷ ಸಾಧಿಕ್ ಮಾತನಾಡಿ ನಮ್ಮ ದೇಶದ ಪ್ರಧಾನಿ ನರೇಂದ್ರ ಮೋದಿ ರವರು ಟ್ರಂಪ್ ಜೊತೆ ಮತ್ತು ಎಫ್ಸ್ಟಿನ್ ಜೊತೆ ಸಂಬಂಧ ಏನು ಅಂತ ಕೂಡಲೇ ಉತ್ತರ ಕೊಡಬೇಕು. ನಮ್ಮ ಪ್ರಧಾನಿ ಬೇರೆ ದೇಶದ ಅಧ್ಯಕ್ಷರ ಮುಂದೆ ಕುಣಿತಾರೆ ಅಂದ್ರೆ ನಮ್ಮ ದೇಶಕ್ಕೆ ನೋವಿನ ಸಂಗತಿ.

ಎಫ್ಸ್ ಟೀನ್ ಅನ್ನುವವನು ಕಾಮಕ ಕಡಿಮೆ ವಯಸ್ಸಿನ ಮಕ್ಕಳಿಗೆ ಅತ್ಯಾಚಾರ ಮಾಡಿದವನು ಅಂತವರ ಜೊತೆ ಮೋದಿ ಕೈ ಜೋಡಿಸ್ತಾರೆ ಅಂದ್ರೆ ನಮ್ಮ ದೇಶಕ್ಕೆ ತುಂಬಾ ಅವಮಾನ ಆಗುತ್ತೆ ಕೂಡಲೇ ಇದರ ಬಗ್ಗೆ ಉತ್ತರ ಕೊಡಬೇಕು ಇಲ್ಲದಿದ್ದರೆ ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿದರು.

ಇದನ್ನು ಓದಿದ್ದೀರಾ..? ಮೇಡಿಹಾಳ ಗ್ರಾಮದಲ್ಲಿ ಅವೈಜ್ಞಾನಿಕ ಗಣಿಗಾರಿಕೆ: ರೈತರ ಬೆಳೆ-ಮನೆಗಳಿಗೆ ಕಲ್ಲಿನ ಮಳೆ, ಧೂಳಿನ ಪರದೆ

ಈ ಸಂದರ್ಭದಲ್ಲಿ ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಿಯಾಜ್ ಗೋರು, ಉಪಾಧ್ಯಕ್ಷ ತೌಫಿಕ್ ಅನ್ವರ್, ಕೋಲಾರ ತಾಲ್ಲೂಕು ಅಧ್ಯಕ್ಷ ಸುಹೈಲ್, ಶ್ರೀನಿವಾಸಪುರ ಅಧ್ಯಕ್ಷ ಮನೋಹರ್, ಮುಳಬಾಗಿಲು ಅಧ್ಯಕ್ಷ ಸೂರಿ, ಕೋಲಾರ ನಗರ ಅಧ್ಯಕ್ಷ ಅರ್ಬಾಜ್, ಗ್ರಾಮಾಂತರ ಅಧ್ಯಕ್ಷ ಬರ್ಕತ್, ಅಭಿಷೇಕ್, ಯುವ ಮುಖಂಡರಾದ ಯತೀಶ್ ನಾಯ್ಡು,ಮನ್ಸೂರ್, ನೂರ್, ಬಾಬರ್ ಷಮ್ಸ್, ನಿಜಾಮುದ್ದೀನ್ ಮುಂತಾದವರು ಇದ್ದರು.

WhatsApp Image 2025 06 24 at 16.24.21 6207fd1d
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...