ಚಾಮರಾಜನಗರ ಜಿಲ್ಲೆ, ಹನೂರು ತಾಲ್ಲೂಕು, ಮಲೆ ಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ ಹೊರಟಿದ್ದ ವೇಳೆ ಚಿರತೆ ದಾಳಿಗೆ ಯುವಕ ಮೃತಪಟ್ಟಿರುವ ಘಟನೆ ನಡೆದಿದೆ.
ಮಂಡ್ಯ ಜಿಲ್ಲೆ ಚೀರನಹಳ್ಳಿ ಗ್ರಾಮದ ನಿವಾಸಿಯಾದ ಪ್ರವೀಣ್ ಮೃತಪಟ್ಟ ದುರ್ದೈವಿ. ತಾಳಬೆಟ್ಟದಲ್ಲಿ ಪೂಜೆ ಸಲ್ಲಿಸಿ ತೆರಳುವಾಗ ತಡೆಗೋಡೆ ಮೇಲೆ ಕುಳಿತಿದ್ದ ಚಿರತೆ ದಾಳಿ ನಡೆಸಿರುವುದಾಗಿ ತಿಳಿದುಬಂದಿದೆ. ತಾಳಬೆಟ್ಟದ ಕಾಡಿನೊಳಗೆ ಸರಿ ಸುಮಾರು ಒಂದು ಕಿಮೀವರೆಗೂ ಶವವನ್ನು ಚಿರತೆ ಎಳೆದೋಯ್ದಿದೆ.

ಅರಣ್ಯ ಇಲಾಖೆ ಸಿಬ್ಬಂದಿ ಹಾಗು ಪೊಲೀಸರಿಗೆ ಮಾಹಿತಿ ತಿಳಿದಕೂಡಲೇ ಸ್ಥಳಕ್ಕೆ ಆಗಮಿಸಿ, ಕಾರ್ಯಾಚರಣೆ ನಡೆಸುವಾಗ ಚಿರತೆ ಶವದ ಪಕ್ಕದಲ್ಲಿರುವುದು ಕಂಡುಬಂದಿದೆ. ಕೂಡಲೇ ಪಟಾಕಿ ಸಿಡಿಸಿ, ಚಿರತೆಯನ್ನು ಅಲ್ಲಿಂದ ಓಡಿಸಿ ಮೃತದೇಹವನ್ನು ಮೇಲೆತ್ತಿದ್ದಾರೆಂದು ವರದಿಯಾಗಿದೆ.
ಈ ವಿಶೇಷ ಸುದ್ದಿ ಓದಿದ್ದೀರಾ? ಮೈಸೂರು ಜಿಲ್ಲೆಯಾದ್ಯಂತ 18 ಸಾವಿರಕ್ಕೂ ಅಧಿಕ BPL ಕಾರ್ಡ್ ರದ್ದು; ಅನರ್ಹತೆಗೆ ಕಾರಣಗಳೇನು?
ಈ ಘಟನೆಯಿಂದ ಎಚ್ಚೆತ್ತಿರುವ ಜಿಲ್ಲಾಡಳಿತ ನಾಲ್ಕು ದಿನಗಳ ಕಾಲ ದಿನಾಂಕ -21-01-2026 ರಿಂದ 24-01-2026ರವರೆಗೆ ಕಾಲ್ನಡಿಗೆ ಹಾಗು ದ್ವಿಚಕ್ರ ವಾಹನದಲ್ಲಿ ಬೆಟ್ಟಕ್ಕೆ ತೆರಳುವುದನ್ನು ನಿರ್ಬಂಧಿಸಿ ಆದೇಶ ಹೊರಡಿಸಿದ್ದಾರೆ.





