ಅಂಕಿ-ಅಂಶಗಳಾಚೆಗಿನ ಅಂತಃಕರಣ: ಸಾಹಿತ್ಯದ ಆಶಯದಲ್ಲಿ 2026-27ರ ಆಯವ್ಯಯ

Date:

ಕರ್ನಾಟಕ ಆಯವ್ಯಯದ ಸಾರವನ್ನು ಕನ್ನಡ ಸಾಹಿತ್ಯದ ವಿವಿಧ ವಚನಕಾರರು, ಕವಿಗಳು ಮತ್ತು ವಿದ್ವಾಂಸರ ಆಶಯಗಳ ಹಿನ್ನೆಲೆಯಲ್ಲಿ ವಿಶ್ಲೇಷಿಸಲಾಗಿದೆ. ವಿದ್ವಾಂಸರ ದರ್ಶನದೊಂದಿಗೆ 'ಕರ್ನಾಟಕ ಮಾದರಿ'ಯನ್ನು ಮಿಳಿತಗೊಳಿಸಲಾಗಿದೆ.

2026-27ನೇ ಸಾಲಿನ ಕರ್ನಾಟಕ ಆಯವ್ಯಯದ ಸಾರವನ್ನು ವಿವಿಧ ವಚನಕಾರರು, ಕವಿಗಳು ಮತ್ತು ವಿದ್ವಾಂಸರ ಆಶಯಗಳ ಹಿನ್ನೆಲೆಯಲ್ಲಿ ವಿಶ್ಲೇಷಿಸಿದರೆ, ಇದು ಕೇವಲ ಅಂಕಿ-ಅಂಶಗಳ ದಾಖಲೆಯಲ್ಲ, ಬದಲಾಗಿ ಸರ್ವರ ಏಳಿಗೆಯನ್ನು ಬಯಸುವ ಒಂದು ಸಾಮಾಜಿಕ ಬದ್ಧತೆಯ ಜೀವಂತ ದಸ್ತಾವೇಜಾಗಿ ಗೋಚರಿಸುತ್ತದೆ.

ಆಯವ್ಯಯದ ಆರಂಭದಲ್ಲಿಯೇ ವಚನಕಾರ್ತಿ ಅಕ್ಕಮ್ಮನವರ ”ಧನಶೀಲ ಮನಶೀಲ ತನುಶೀಲ/ಸರ್ವಮಯ ದೃಕ್ಕಿಂಗೆ ಕಾಂಬುದೆಲ್ಲವು ಶೀಲ/ಇಂತೀ ವ್ರತಸಂಪದವೆಲ್ಲವೂ/ಅದಾರ ಕುರಿತು ಮಾಡುವನೇಮ/ಎಂಬುದ ತಾನರಿಯಬೇಕು” ಎಂಬ ವಚನವನ್ನು ಉಲ್ಲೇಖಿಸುವ ಮೂಲಕ, ಸರ್ಕಾರವು ರೂಪಿಸುವ ಯೋಜನೆಗಳು ಮತ್ತು ವಿನಿಯೋಗಿಸುವ ಅನುದಾನಗಳು ಸದುದ್ದೇಶದಿಂದ ಕೂಡಿರಬೇಕು ಹಾಗೂ ಅವು ಯಾರ ಏಳಿಗೆಯನ್ನು ಬಯಸುತ್ತವೆ ಎಂಬ ಸ್ಪಷ್ಟ ಅರಿವು ನಮಗಿರಬೇಕು ಎಂದು ಪ್ರತಿಪಾದಿಸಲಾಗಿದೆ.

ಈ ಜನಕೇಂದ್ರಿತ ಆರ್ಥಿಕ ತತ್ವಕ್ಕೆ ‘ಸರ್ವೋದಯವಾಗಲಿ ಸರ್ವರಲಿ’ ಎಂಬ ಕವಿವಾಣಿಯು ಸಮಗ್ರ ಅಭಿವೃದ್ಧಿಯ ದೀಕ್ಷೆಯಾಗಿ ಪೂರಕವಾಗಿದೆ. ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯದ ಹಕ್ಕುಗಳ ಕುರಿತು ಚರ್ಚಿಸುವಾಗ ಭೀಷ್ಮನ ತತ್ವವನ್ನು ಉಲ್ಲೇಖಿಸಿ, ”ಹೆಚ್ಚು ಹಾಲು ಕೊಡುವ ಹಸು/ಎಮ್ಮೆಗಳಿಗೆ ಹೆಚ್ಚಿನ ಆರೈಕೆಯ ಅಗತ್ಯವಿರುತ್ತದೆ, ಅವು ಬಡವಾದರೆ ಗೋವಳಿಗನೂ ಸಂಕಷ್ಟಕ್ಕೆ ಸಿಲುಕುತ್ತಾನೆ” ಎಂದು ಹೇಳುವ ಮೂಲಕ ರಾಜ್ಯದ ತೆರಿಗೆ ಸಂಪನ್ಮೂಲಗಳ ನ್ಯಾಯಯುತ ಹಂಚಿಕೆಗಾಗಿ ಆಗ್ರಹಿಸಲಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಇದನ್ನು ಓದಿದ್ದೀರಾ?: ​ರಾಜ್ಯದಲ್ಲಿ 16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಮಾಧ್ಯಮ ನಿಷೇಧ: ಸಿಎಂ ಸಿದ್ದರಾಮಯ್ಯ ಘೋಷಣೆ

ಆರ್ಥಿಕ ಅಭಿವೃದ್ಧಿಯ ನೈತಿಕತೆಯನ್ನು ವಿವರಿಸಲು ಅಮರ್ತ್ಯ ಸೇನ್ ಅವರ ”ಮಾನವ ಅಭಿವೃದ್ಧಿಯಲ್ಲಿನ ಹೂಡಿಕೆಯನ್ನು ನಿರ್ಲಕ್ಷಿಸಿದ ಆರ್ಥಿಕ ಅಭಿವೃದ್ಧಿಯು ಅಸ್ಥಿರ ಮಾತ್ರವಲ್ಲ ಅನೈತಿಕವಾದುದು” ಎಂಬ ಪ್ರಮೇಯವನ್ನು ಅಳವಡಿಸಿಕೊಂಡು ಜನಕಲ್ಯಾಣದ ಯೋಜನೆಗಳಿಗೆ ಹೂಡಿಕೆ ಮಾಡಲಾಗಿದೆ. ರಾಜ್ಯದ ಹಿತಾಸಕ್ತಿಗಾಗಿ ನಡೆಸುವ ಹೋರಾಟವನ್ನು ಡಾ.ಬಿ.ಆರ್. ಅಂಬೇಡ್ಕರ್ ಅವರ ಮಾತುಗಳಲ್ಲಿ ”ನ್ಯಾಯವು ನಮ್ಮ ಪರವಾಗಿರುವಾಗ ಈ ಹೋರಾಟದಲ್ಲಿ ನಾವು ಸೋಲಲು ಸಾಧ್ಯವೇ ಇಲ್ಲ… ಇದು ಪರಿಪೂರ್ಣ ಅರ್ಥದಲ್ಲಿ ಆಧ್ಯಾತ್ಮಿಕವಾದ ಹೋರಾಟವಾಗಿದೆ” ಎಂದು ಬಣ್ಣಿಸುವ ಮೂಲಕ ಬಜೆಟ್ ಅನ್ನು ಒಂದು ಸಾಮಾಜಿಕ ನ್ಯಾಯದ ಹೋರಾಟದ ಭಾಗವಾಗಿ ಬಿಂಬಿಸಲಾಗಿದೆ. ಕೃಷಿ ವಲಯದ ಸುಧಾರಣೆಯ ಕುರಿತು ವಚನಕಾರ ಶಿವಲೆಂಕ ಮಂಚಣ್ಣನವರ ”ಧರೆಯ ಕೃಷಿ ಶುದ್ಧವಾಗಿಯಲ್ಲದೆ, ಸಸಿ ಶುದ್ಧವಿಲ್ಲ” ಎಂಬ ಹೇಳಿಕೆಯು ಕೃಷಿಯೇ ರಾಜ್ಯದ ಅಭಿವೃದ್ಧಿಗೆ ಮೂಲಾಧಾರ ಎಂಬ ನಂಬಿಕೆಯನ್ನು ದೃಢಪಡಿಸುತ್ತದೆ.

ಜಲಸಂಪನ್ಮೂಲಗಳ ರಕ್ಷಣೆಯ ಮಹತ್ವವನ್ನು ಸಾರಲು ಕೆ.ಪಿ. ಪೂರ್ಣಚಂದ್ರ ತೇಜಸ್ವಿಯವರ ”ನದಿಗಳು ನಮ್ಮೆಲ್ಲ ಮಾನವಸಮಾಜ ಮತ್ತು ಸಂಸ್ಕೃತಿಗಳ ಜೀವವಾಹಿನಿ. ಅವು ಕೊಳಕಾದರೆ, ಅವು ಬತ್ತಿದರೆ ನಮ್ಮ ಉಸಿರು ಉಡುಗುತ್ತಾ ಬಂದಂತೆ” ಎಂಬ ಎಚ್ಚರಿಕೆಯನ್ನು ಮನಗಂಡು ನೀರಾವರಿ ಯೋಜನೆಗಳಿಗೆ ಆದ್ಯತೆ ನೀಡಲಾಗಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿಯ ವಿಭಾಗದಲ್ಲಿ ಬಿ.ಎಂ. ಬಶೀರ್ ಅವರ ”ಗುಲಾಬಿಯೆಂದರೆ ಅಮ್ಮನಿಗೆ ಇಷ್ಟ ಗೊತ್ತು ಅವಳಿಗೆ ಮುಳ್ಳಲ್ಲಿ ಅರಳುವ ಕಷ್ಟ” ಎಂಬ ಕವನದ ಸಾಲುಗಳ ಮೂಲಕ ಮಹಿಳೆಯರ ಸಬಲೀಕರಣದ ಹಿಂದಿರುವ ಸರ್ಕಾರದ ಸಂವೇದನಾಶೀಲತೆಯನ್ನು ವ್ಯಕ್ತಪಡಿಸಲಾಗಿದೆ. ಸಮಾಜ ಕಲ್ಯಾಣದ ಅಡಿಯಲ್ಲಿ ದಲಿತ ಕವಿ ಸಿದ್ದಲಿಂಗಯ್ಯನವರ ”ಕುರಿಗಳ ಕಾಯುವ ಕುರುಬನ ಕೂಗು ಜನರ ಮಾತು ಕವನ” ಎಂಬ ಉಲ್ಲೇಖವು ಅಂಚಿಗೆ ತಳ್ಳಲ್ಪಟ್ಟ ವರ್ಗಗಳ ಧ್ವನಿಗೆ ಈ ಬಜೆಟ್ ಪೂರಕವಾಗಿದೆ ಎಂಬುದನ್ನು ಸೂಚಿಸುತ್ತದೆ. ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ಬಿ.ಆರ್. ಲಕ್ಷ್ಮಣರಾವ್ ಅವರ ”ಮಾನವತೆಯ ಕಟ್ಟಡಕ್ಕೆ ಪ್ರೀತಿಯೊಂದೇ ಇಟ್ಟಿಗೆ, ಇಟ್ಟಿಗೆಗಳ ಬೆಸೆಯಬೇಕು ಕರುಣೆ ಸ್ನೇಹದೊಟ್ಟಿಗೆ” ಎಂಬ ಸಾಲುಗಳ ಮೂಲಕ ಸಾಮಾಜಿಕ ಸಾಮರಸ್ಯದ ಸಂದೇಶ ಸಾರಲಾಗಿದೆ.

ವಿಜ್ಞಾನ ಮತ್ತು ತಂತ್ರಜ್ಞಾನದ ಪ್ರಗತಿಯನ್ನು ಪ್ರತಿಪಾದಿಸಲು ರಾಷ್ಟ್ರಕವಿ ಕುವೆಂಪು ಅವರ ”ಹಳಮತದ ಕೊಳೆಯಲ್ಲಿ ಹೊಸಮತಿಯ ಹೊಳೆಯಲ್ಲಿ ಕೊಚ್ಚಿಹೋಗಲಿ; ಬರಲಿ ವಿಜ್ಞಾನ ಬುದ್ಧಿ” ಎಂಬ ಆಶಯದಂತೆ ಆಧುನಿಕ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಲು ಉತ್ತೇಜನ ನೀಡಲಾಗಿದೆ.

ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಬಲವರ್ಧನೆಗಾಗಿ ದಿನಕರ ದೇಸಾಯಿಯವರ ”ಜನಮನದ ನುಡಿಯಾಗಿ ಬಾಳು ತಾಯಿ, ಮೂಕ ಜನರಿಗೂ ಕೂಡ ಬರಲಿ ಬಾಯಿ” ಎಂಬ ಆಶಯಕ್ಕೆ ಬದ್ಧವಾಗಿ ಕನ್ನಡದ ಅಸ್ಮಿತೆಯನ್ನು ಎತ್ತಿಹಿಡಿಯಲು ಯೋಜಿಸಲಾಗಿದೆ. ಹೀಗೆ, ಪ್ರತಿಯೊಂದು ವಲಯದ ಅಭಿವೃದ್ಧಿಯು ಮಹಾನ್ ವಿದ್ವಾಂಸರ ದರ್ಶನದೊಂದಿಗೆ ಮಿಳಿತಗೊಂಡು ‘ಕರ್ನಾಟಕ ಮಾದರಿ’ಯ ಸಶಕ್ತ ಮತ್ತು ಸುಸ್ಥಿರ ಆರ್ಥಿಕತೆಯನ್ನು ರೂಪಿಸುವ ಗುರಿಯನ್ನು ಈ ಆಯವ್ಯಯ ಹೊಂದಿದೆ.

Ravi sidlipura
ಡಾ. ರವಿ ಎಂ. ಸಿದ್ಲಿಪುರ
+ posts

ಕುವೆಂಪು ವಿಶ್ವವಿದ್ಯಾಲಯದಿಂದ ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ, ಕನ್ನಡ ಪತ್ರಿಕೋದ್ಯಮದಲ್ಲಿ ಡಿಪ್ಲೊಮೋ ಪದವಿ, 'ಕನ್ನಡ ಮಹಾಭಾರತ ಕಾವ್ಯಗಳಲ್ಲಿ ಪ್ರಭುತ್ವ, ಯುದ್ಧ ಮತ್ತು ಜನತೆ' ಎಂಬ ವಿಷಯದಲ್ಲಿ ಪಿಎಚ್.ಡಿ. ಪದವಿ ಪಡೆದಿದ್ದಾರೆ. 'ಪರ್ಯಾಯ' ಎಂಬ ವಿಮರ್ಶಾ ಲೇಖನಗಳ ಸಂಕಲನ, 'ಶಾಸನ ಓದು', 'ವಿಮರ್ಶೆ ಓದು' ಪುಸ್ತಕಗಳು ಪ್ರಕಟಗೊಂಡಿವೆ. ಯುದ್ಧ ಪರಿಕಲ್ಪನೆಯನ್ನು ಪ್ರಧಾನ ಆಶಯವನ್ನಾಗಿಟ್ಟುಕೊಂಡ 'ಸಮರ ವ್ಯಾಪಾರ' ಎಂಬ ಪುಸ್ತಕ ಮುದ್ರಣ ಹಂತದಲ್ಲಿದೆ. ಶಾಸ್ತ್ರೀಯ ಕನ್ನಡ ಸಾಹಿತ್ಯ ಇವರ ಆಸಕ್ತಿ ಕ್ಷೇತ್ರವಾಗಿದೆ.

ಪೋಸ್ಟ್ ಹಂಚಿಕೊಳ್ಳಿ:

ಡಾ. ರವಿ ಎಂ. ಸಿದ್ಲಿಪುರ
ಡಾ. ರವಿ ಎಂ. ಸಿದ್ಲಿಪುರ
ಕುವೆಂಪು ವಿಶ್ವವಿದ್ಯಾಲಯದಿಂದ ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ, ಕನ್ನಡ ಪತ್ರಿಕೋದ್ಯಮದಲ್ಲಿ ಡಿಪ್ಲೊಮೋ ಪದವಿ, 'ಕನ್ನಡ ಮಹಾಭಾರತ ಕಾವ್ಯಗಳಲ್ಲಿ ಪ್ರಭುತ್ವ, ಯುದ್ಧ ಮತ್ತು ಜನತೆ' ಎಂಬ ವಿಷಯದಲ್ಲಿ ಪಿಎಚ್.ಡಿ. ಪದವಿ ಪಡೆದಿದ್ದಾರೆ. 'ಪರ್ಯಾಯ' ಎಂಬ ವಿಮರ್ಶಾ ಲೇಖನಗಳ ಸಂಕಲನ, 'ಶಾಸನ ಓದು', 'ವಿಮರ್ಶೆ ಓದು' ಪುಸ್ತಕಗಳು ಪ್ರಕಟಗೊಂಡಿವೆ. ಯುದ್ಧ ಪರಿಕಲ್ಪನೆಯನ್ನು ಪ್ರಧಾನ ಆಶಯವನ್ನಾಗಿಟ್ಟುಕೊಂಡ 'ಸಮರ ವ್ಯಾಪಾರ' ಎಂಬ ಪುಸ್ತಕ ಮುದ್ರಣ ಹಂತದಲ್ಲಿದೆ. ಶಾಸ್ತ್ರೀಯ ಕನ್ನಡ ಸಾಹಿತ್ಯ ಇವರ ಆಸಕ್ತಿ ಕ್ಷೇತ್ರವಾಗಿದೆ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ಸಮರ್ಥ್‌ ನಾಮಪತ್ರ ಸಲ್ಲಿಕೆ; ದೂರ ಉಳಿದ ರಾಜ್ಯ ಮುಸ್ಲಿಂ ಮುಖಂಡರು

ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ದಾವಣಗೆರೆ ಮುಸ್ಲಿಂ ಕಾಂಗ್ರೆಸ್‌ ಟಿಕೆಟ್...

84.56 ಲಕ್ಷ ಕೋಟಿ ರೂ. ನಷ್ಟದ ಅಮೆರಿಕ – ಇರಾನ್ ಸಂಘರ್ಷದಲ್ಲಿ ನಿಜಕ್ಕೂ ಗೆದ್ದವರಾರು?

ಅಮೆರಿಕದ ಬಹುಕೋಟಿ ಡಾಲರ್ ವೆಚ್ಚದ 'ಪೇಟ್ರಿಯಾಟ್' ಮತ್ತು 'ಥಾಡ್' ಕ್ಷಿಪಣಿ ನಿರೋಧಕ...

ಕೇಂದ್ರವನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಮಂಗಮಾಯ: ಉಳಿಯುವುದು ಬರೀ ಮೋದಿಮಯ!

ಹೀಗೆ ಮೋದಿ ಸರ್ಕಾರವನ್ನು ವಿರೋಧಿಸಿದವರ ಖಾತೆಗಳು ಸಾಮಾಜಿಕ ಮಾಧ್ಯಮಗಳಿಂದ ಅಳಿಸಿ ಕೊನೆಗೆ...