ಮಧ್ಯಪ್ರದೇಶದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ(ಎಸ್‌ಐಆರ್) ಮೊದಲ ಹಂತವು ಮಂಗಳವಾರ ಪೂರ್ಣಗೊಂಡಿದ್ದು, 230 ವಿಧಾನಸಭಾ ಕ್ಷೇತ್ರಗಳ ಕರಡು ಮತದಾರರ ಪಟ್ಟಿಯಿಂದ 42.74 ಲಕ್ಷಕ್ಕೂ ಹೆಚ್ಚು ಮತದಾರರ ಹೆಸರುಗಳನ್ನು ಡಿಲೀಟ್ ಮಾಡಲಾಗಿದೆ. 2003ರ ಮತದಾರರ ಪಟ್ಟಿಯಲ್ಲಿ ಪೋಷಕರು ಅಥವಾ ಅಜ್ಜ-ಅಜ್ಜಿಯರ ವಿವರಗಳು ಕಂಡುಬಂದಿಲ್ಲವಾದ್ದರಿಂದ ಒಟ್ಟು 8,65,832 ಹೆಸರುಗಳನ್ನು ತೆಗೆದುಹಾಕಲಾಗಿದೆ ಎಂದು ಹೇಳಲಾಗಿದೆ. ಪಟ್ಟಿಯಿಂದ ತೆಗೆದುಹಾಕಲಾದ 42.74 ಲಕ್ಷಕ್ಕೂ ಹೆಚ್ಚು ಮತದಾರರಲ್ಲಿ 19.19 ಲಕ್ಷ ಪುರುಷರು ಮತ್ತು 23.64 ಲಕ್ಷ ಮಹಿಳೆಯರು.




