ಭಾರತದ ಪ್ರಜಾಪ್ರಭುತ್ವ ಮತ್ತು ಜನಸಂಖ್ಯಾಶಾಸ್ತ್ರವು ‘ಜಗತ್ತಿಗೆ ಭರವಸೆಯ ದಾರಿದೀಪ’ವಾಗಿವೆ. ನಮ್ಮ ಸಂಸತ್ ಸದಸ್ಯರು ರಾಷ್ಟ್ರೀಯ ಬೆಳವಣಿಗೆಗೆ ಸಾಮೂಹಿಕವಾಗಿ ಕೆಲಸ ಮಾಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಬಜೆಟ್ ಅಧಿವೇಶನಕ್ಕೂ ಮುನ್ನ ಸಂಸತ್ ಸಂಕೀರ್ಣದಲ್ಲಿ ಮಾಧ್ಯಮಗಳನ್ನುದ್ದೇಶಿಸಿ ಮೋದಿ ಮಾತನಾಡಿದರು. “ನಮ್ಮ ಸರ್ಕಾರ ಸುಧಾರಣೆ, ಕಾರ್ಯಕ್ಷಮತೆ ಹಾಗೂ ಬದಲಾವಣೆಯಲ್ಲಿ ನಂಬಿಕೆ ಇಡುತ್ತದೆ. ರಾಷ್ಟ್ರವು ಸುಧಾರಣಾ ಎಕ್ಸ್‌ಪ್ರೆಸ್‌ನಲ್ಲಿ ವೇಗವಾಗಿ ಚಲಿಸುತ್ತಿದೆ” ಎಂದು ಹೇಳಿದ್ದಾರೆ.
ಸಂಸತ್ತಿನ ಉಭಯ ಸದನಗಳನ್ನು ಉದ್ದೇಶಿಸಿ ರಾಷ್ಟ್ರಪತಿ ಮಾಡಿದ ಭಾಷಣವನ್ನು ಉಲ್ಲೇಖಿಸಿದ ಮೋದಿ, “ಇದು 140 ಕೋಟಿ ಭಾರತೀಯರ ಆತ್ಮ ವಿಶ್ವಾಸವನ್ನು ಪ್ರತಿಬಿಂಬಿಸುತ್ತದೆ. ಜನರ, ವಿಶೇಷವಾಗಿ ಯುವಕರ ಆಕಾಂಕ್ಷೆಗಳನ್ನು ವ್ಯಕ್ತಪಡಿಸಿದೆ. ರಾಷ್ಟ್ರಪತಿಯವರ ಭಾಷಣವು ಎಲ್ಲ ಸಂಸದರಿಗೆ ಮಾರ್ಗದರ್ಶಿ ಆಲೋಚನೆಗಳನ್ನು ನೀಡಿದೆ” ಎಂದಿದ್ದಾರೆ.




