ಲೈಂಗಿಕ ಅಪರಾಧಿ ‘ಎಪ್ಸ್ಟೀನ್ ಫೈಲ್‌’ನಲ್ಲಿ ಪ್ರಧಾನಿ ಮೋದಿ ಹೆಸರು!

Date:

ಲೈಂಗಿಕ ಅಪರಾಧದಲ್ಲಿ ಶಿಕ್ಷೆಗೊಳಗಾಗಿದ್ದ ಲೇವಾದೇವಿದಾರ ದಿ. ಜೆಫ್ರಿ ಎಪ್ಸ್ಟೀನ್‌ಗೆ ಸಂಬಂಧಿಸಿದ ಹೊಸ ತನಿಖಾ ಕಡತವನ್ನು ಅಮೆರಿಕದ ನ್ಯಾಯ ಇಲಾಖೆ ಬಿಡುಗಡೆ ಮಾಡಿದೆ. ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಹೆಸರು ಉಲ್ಲೇಖವಾಗಿದೆ. ‘ಎಪ್ಸ್ಟೀನ್‌ನಿಂದ ಸಲಹೆ ಪಡೆದು 2017ರಲ್ಲಿ ಪ್ರಧಾನಿ ಮೋದಿ ಅವರು ಇಸ್ರೇಲ್‌ಗೆ ಭೇಟಿ ನೀಡಿದ್ದರು’ ಎಂದು ಹೇಳಲಾಗಿದೆ. ಈ ಬೆಳವಣಿಗೆಯನ್ನು ಕಾಂಗ್ರೆಸ್‌ ಖಂಡಿಸಿದ್ದು, ‘ಇದು ರಾಷ್ಟ್ರೀಯ ಘನತೆಯ ವಿಷಯ’ ಎಂದು ಹೇಳಿದೆ. ಕಡತದಲ್ಲಿನ ವಿವರವನ್ನು ಸುಳ್ಳು ಎಂದು ಭಾರತೀಯ ವಿದೇಶಾಂಗ ಸಚಿವಾಲಯ ಪ್ರತಿಪಾದಿಸಿದೆ.

ಕತಡದಲ್ಲಿ, “ಅಮೆರಿಕ ಅಧ್ಯಕ್ಷರ ಅನುಕೂಲಕ್ಕಾಗಿ ಇಸ್ರೇಲ್‌ಗೆ ಭೇಟಿ ನೀಡುವಂತೆ ಭಾರತದ ಪ್ರಧಾನಿ ಮೋದಿ ಅವರು ಎಪ್ಸ್ಟೀನ್‌ನಿಂದ ಸಲಹೆ ಪಡೆದಿದ್ದರು. ಅವರು ಕೆಲವು ವಾರಗಳ ಹಿಂದೆ (2017) ಭೇಟಿ ನೀಡಿದ್ದರು. ಅವರು ಅಲ್ಲಿ ನೃತ್ಯ ಮಾಡಿದರು, ಹಾಡು ಹಾಡಿದರು. ಅವರ ಭೇಟಿ ಕೆಲಸ ಮಾಡಿದೆ” ಎಂದು ವಿವರಿಸಲಾಗಿದೆ.

2017ರ ಜುಲೈ 4ರಿಂದ 6ರವೆಗೆ ಪ್ರಧಾನಿ ಮೋದಿ ಇಸ್ರೇಲ್ ಭೇಟಿ ನೀಡಿದ್ದರು. ಈ ಭೇಟಿಯ ಮೂರು ದಿನಗಳ ಬಳಿಕ (ಜುಲೈ 9) ಎಪ್ಸ್ಟೀನ್ ಇ-ಮೇಲ್‌ ಮಾಡಿದ್ದು, ಅದರಲ್ಲಿ ತಾವು ಮೋದಿಗೆ ಸಲಹೆ ನೀಡಿದ್ದರ ಬಗ್ಗೆ ಬರೆದಿದ್ದಾರೆ. ಅಲ್ಲದೆ, ಮೋದಿ ಇಸ್ರೇಲ್‌ ಭೇಟಿಗೂ ಒಂದು ವಾರಗಳ ಮುನ್ನ, 2017ರ ಜೂನ್ 25-26ರಂದು ಮೋದಿ ಅವರು ಅಮೆರಿಕದಲ್ಲಿ ಟ್ರಂಪ್‌ ಅವರನ್ನು ಭೇಟಿಯಾಗಿದ್ದರು ಎಂದು ಹೇಳಲಾಗಿದೆ.

    ಪೋಸ್ಟ್ ಹಂಚಿಕೊಳ್ಳಿ:

    ಪೋಸ್ಟ್ ಹಂಚಿಕೊಳ್ಳಿ:

    ಈ ಹೊತ್ತಿನ ಪ್ರಮುಖ ಸುದ್ದಿ

    ವಿಡಿಯೋ

    ಇದೇ ರೀತಿಯ ಇನ್ನಷ್ಟು ಲೇಖನಗಳು
    Related

    ಸಂಪುಟ ಪುನರ್‌ರಚನೆಗೆ ಕಾಂಗ್ರೆಸ್‌ ಶಾಸಕರ ಆಗ್ರಹ; ಹೈಕಮಾಂಡ್‌ಗೆ ಪತ್ರ

    ರಾಜ್ಯದಲ್ಲಿ ಮುಖ್ಯಮಂತ್ರಿ ಹುದ್ದೆ ಬದಲಾವಣೆ ಕುರಿತು ಪದೇ-ಪದೇ ಚರ್ಚೆಗಳು ನಡೆಯುತ್ತಿಲೇ ಇವೆ....

    ಮಾಜಿ ರೈಲ್ವೆ ಸಚಿವ ಮುಕುಲ್ ರಾಯ್ ನಿಧನ

    ಮಾಜಿ ರೈಲ್ವೆ ಸಚಿವ, ಈ ಹಿಂದೆ ತೃಣಮೂಲ ಕಾಂಗ್ರೆಸ್‌(ಟಿಎಂಸಿ)ಯ ಎರಡನೇ ಉನ್ನತ...

    ಟ್ರಂಪ್ ಸುಂಕ 15%ಗೆ ಏರಿಕೆ!

    ನಾನಾ ರಾಷ್ಟ್ರಗಳ ಮೇಲೆ ಅಮೆರಿಕ ಅಧ್ಯಕ್ಷ ಟ್ರಂಪ್ ಹೇರಿದ್ದ ಭಾರೀ ಸುಂಕವನ್ನು...

    ಇಂದಿನಿಂದ ಒಂದೆಡೆ ರಂಗೋತ್ಸವ

    ಫೆಬ್ರವರಿ 21 ಮತ್ತು 22ರಂದು ಬೆಂಗಳೂರು ನಗರದ ನ್ಯಾಷನಲ್ ಗ್ಯಾಲರಿ ಆಫ್...