ಶಿವರಾತ್ರಿ | ಮುಸ್ಲಿಂ ಶಾಸಕ ಭೇಟಿ ನೀಡಿದ್ದಕ್ಕೆ ದೇವಾಲಯ ಶುದ್ಧೀಕರಿಸಿ ವಿಕೃತಿ!

Date:

ಶಿವರಾತ್ರಿ ಹಬ್ಬದ ಹಿನ್ನೆಲೆ ಶಿವನ ದೇ‌ವಾಲಯಕ್ಕೆ ‌ಮುಸ್ಲಿಂ ಶಾಸಕ ಭೇಟಿ ನೀಡಿದ್ದಕ್ಕಾಗಿ, ದೇವಾಲಯವನ್ನು ಬಿಜೆಪಿಗರು ಶುದ್ದೀಕರಣ ಮಾಡಿ ಕೋಮುದ್ವೇಷ ಮೆರೆದಿರುವ ಘಟನೆ ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರದ ಸಿಲ್ಲೋದ್‌ನಲ್ಲಿ ನಡೆದಿದೆ.

ಸಿಲ್ಲೋದ್‌ನ ಶಿವ ದೇವಾಲಯದಲ್ಲಿ ಶಿವರಾತ್ರಿ ಉತ್ಸವ ಆಯೋಜಿಸಲಾಗಿತ್ತು. ಹೀಗಾಗಿ, ಕ್ಷೇತ್ರದ ಶಾಸಕ ಶಿವಸೇನೆ ನಾಯಕ ಅಬ್ದುಲ್ ಸತ್ತಾರ್ ಅವರು ದೇವಾಲಯಕ್ಕೆ ಭೇಟಿ ನೀಡಿ ದರ್ಶನ ಪಡೆದು, ಹಬ್ಬದ ಶುಭಾಶಯ ಕೋರಿದ್ದರು. ಆದರೆ, ಅವರು ದೇವಾಲಯದಿಂದ ತೆರಳಿದ ಬಳಿಕ, ಬಿಜೆಪಿ ಕಾರ್ಯಕರ್ತರು ಗೋಮೂತ್ರ ಸಿಂಪಡಿಸಿ ದೇವಾಸ್ಥಾನವನ್ನು ಶುದ್ಧೀಕರಸಿದ್ದಾರೆ.

ಶಾಸಕ ಸತ್ತಾರ್ ಅವರು ಶಿವ ದೇವಾಲಯಕ್ಕೆ ಭಾನುವಾರ ಭೇಟಿ ನೀಡಿದ್ದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಅವರ ಭೇಟಿಯ ವಿರುದ್ಧವೂ ಬಿಜೆಪಿ ಮತ್ತು ಹಿಂದುತ್ವವಾದಿಗಳು ದ್ವೇಷಕಾರಿದ್ದಾರೆ. ಹಿಂದುತ್ವ ಕೋಮುವಾದಿಗಳು‌ ದೇವಾಲಯವನ್ನು ಶುದ್ಧೀಕರಿಸಿರುವ ವಿಡಿಯೋಗಳು ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

    ಪೋಸ್ಟ್ ಹಂಚಿಕೊಳ್ಳಿ:

    ಪೋಸ್ಟ್ ಹಂಚಿಕೊಳ್ಳಿ:

    ಈ ಹೊತ್ತಿನ ಪ್ರಮುಖ ಸುದ್ದಿ

    ವಿಡಿಯೋ

    ಇದೇ ರೀತಿಯ ಇನ್ನಷ್ಟು ಲೇಖನಗಳು
    Related

    ಸಂಪುಟ ಪುನರ್‌ರಚನೆಗೆ ಕಾಂಗ್ರೆಸ್‌ ಶಾಸಕರ ಆಗ್ರಹ; ಹೈಕಮಾಂಡ್‌ಗೆ ಪತ್ರ

    ರಾಜ್ಯದಲ್ಲಿ ಮುಖ್ಯಮಂತ್ರಿ ಹುದ್ದೆ ಬದಲಾವಣೆ ಕುರಿತು ಪದೇ-ಪದೇ ಚರ್ಚೆಗಳು ನಡೆಯುತ್ತಿಲೇ ಇವೆ....

    ಮಾಜಿ ರೈಲ್ವೆ ಸಚಿವ ಮುಕುಲ್ ರಾಯ್ ನಿಧನ

    ಮಾಜಿ ರೈಲ್ವೆ ಸಚಿವ, ಈ ಹಿಂದೆ ತೃಣಮೂಲ ಕಾಂಗ್ರೆಸ್‌(ಟಿಎಂಸಿ)ಯ ಎರಡನೇ ಉನ್ನತ...

    ಟ್ರಂಪ್ ಸುಂಕ 15%ಗೆ ಏರಿಕೆ!

    ನಾನಾ ರಾಷ್ಟ್ರಗಳ ಮೇಲೆ ಅಮೆರಿಕ ಅಧ್ಯಕ್ಷ ಟ್ರಂಪ್ ಹೇರಿದ್ದ ಭಾರೀ ಸುಂಕವನ್ನು...

    ಇಂದಿನಿಂದ ಒಂದೆಡೆ ರಂಗೋತ್ಸವ

    ಫೆಬ್ರವರಿ 21 ಮತ್ತು 22ರಂದು ಬೆಂಗಳೂರು ನಗರದ ನ್ಯಾಷನಲ್ ಗ್ಯಾಲರಿ ಆಫ್...