9 ವರ್ಷದ ಬಾಲಕಿಯ ಮೇಲೆ ಶಾಲೆಯಲ್ಲಿ ಅತ್ಯಾಚಾರ ಎಸಗಿದ್ದ ಶಾಲೆಯ ಶಿಕ್ಷಕ, ಬಿಜೆಪಿ ನಾಯಕನೊಬ್ಬನಿಗೆ ಸಾಯುವವರೆಗೂ ಜೈಲು ಶಿಕ್ಷೆ ವಿಧಿಸಿ ಕೇರಳ ನ್ಯಾಯಾಲಯ ಆದೇಶಿಸಿದೆ.
ಕೇಳದ ಕಣ್ಣೂರಿನ ಪಾಲಥೈನಲ್ಲಿ ಖಾಸಗಿ ಶಾಲೆಯಲ್ಲಿ ಶಿಕ್ಷಕನಾಗಿದ್ದ ಬಿಜೆಪಿ ನಾಯಕ ಕೆ. ಪದ್ಮರಾಜನ್ ಎಂಬ ಶಿಕ್ಷಗೆ ಗುರಿಯಾಗಿರುವ ಕಾಮುಕ ಅಪರಾಧಿ. ಈತ 4ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿಯ ಮೇಲೆ ಅತ್ಯಾಚಾರ ಎಸಗಿದ್ದ ಪ್ರಕರಣದಲ್ಲಿ ಪೋಕ್ಸೋ ವಿಶೇಷ ನ್ಯಾಯಾಲಯ ಆತನಿಗೆ ಜಿವನ ಪರ್ಯಂತ ಜೈಲು ಶಿಕ್ಷೆ ವಿಧಿಸಿದೆ.
ಅಪರಾಧಿ ಪದ್ಮರಾಜ್ ಎಂಬಾತ 2020ರ ಜನವರಿ ಮತ್ತು ಫೆಬ್ರವರಿಯಲ್ಲಿ ಬಾಲಕಿ ಮೇಲೆ ಮೂರು ಬಾರಿ ಅತ್ಯಾಚಾರ ಎಸಗಿದ್ದನೆಂದು ಆರೋಪಿಸಲಾಗಿತ್ತು. ಆತನ ವಿರುದ್ಧ ಬಾಲಕಿಯ ಪೋಷಕರು ದೂರು ನೀಡಿದ್ದರು. 2020ರ ಏಪ್ರಿಲ್ 15ರಂದು ಪದ್ಮರಾಜ್‌ನನ್ನು ಬಂಧಿಸಲಾಗಿತ್ತು.




