ಭಾರತದ ವಿವಿಧ ಬ್ಯಾಂಕ್‌ಗಳಿಗೆ ವಂಚಿಸಿ ದೇಶದಿಂದ ಪರಾರಿಯಾಗಿ, ಬ್ರಿಟನ್‌ನಲ್ಲಿ ನೆಲೆಸಿರುವ ಉದ್ಯಮಿ ವಿಜಯ್ ಮಲ್ಯ ಮತ್ತು ನೀರವ್ ಮೋದಿ ಸೇರಿದಂತೆ ಹಲವು ವಂಚಕರನ್ನು ಬ್ರಿಟನ್ ಶೀಘ್ರವೇ ಭಾರತಕ್ಕೆ ಗಡಿಪಾರು ಮಾಡುವ ಸಾಧ್ಯತೆಗಳಿವೆ. ಬ್ರಿಟನ್ ಅಧಿಕಾರಿಗಳ ತಂಡವು ದೆಹಲಿಯಲ್ಲಿರುವ ತಿಹಾರ್ ಜೈಲಿಗೆ ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದು, ಗಡಿಪಾರು ಪ್ರಕ್ರಿಯೆಗಳು ಅರಂಭವಾಗಿವೆ ಎಂಬದುನ್ನು ಸೂಚಿಸಿವೆ.
ದೇಶದ ವಿವಿಧ ಬ್ಯಾಂಕುಗಳಲ್ಲಿ ಸಾವಿರಾರು ಕೋಟಿ ರೂಪಾಯಿ ಸಾಲ ಮಾಡಿ, ಮರುಪಾವತಿ ಮಾಡದೆ ಹಲವಾರು ಉದ್ಯಮಿಗಳು ಭಾರತದಿಂದ ಪರಾರಿಯಾಗಿದ್ದಾರೆ. ಅವರಲ್ಲಿ, ವಿಜಯ್ ಮಲ್ಯ ಮತ್ತು ನೀರವ್ ಮೋದಿ ಲಂಡನ್‌ನಲ್ಲಿದ್ದಾರೆ. ಅವರನ್ನು ಭಾರತಕ್ಕೆ ಗಡಿಪಾರು ಮಾಡುವಂತೆ ಭಾರತ ಸರ್ಕಾರವು ಲಂಡನ್ ಸರ್ಕಾರಕ್ಕೆ ಮನವಿ ಮಾಡಿದೆ. ಆದಾಗ್ಯೂ, ಗಡಿಪಾರು ಮಾಡಲಾಗುವ ವಂಚಕ ಉದ್ಯಮಿಗಳನ್ನು ದೆಹಲಿಯ ತಿಹಾರ್ ಜೈಲಿನಲ್ಲಿ ಇರಿಸಲಾಗುತ್ತದೆ. ಅಲ್ಲಿನ ನ್ಯಾಯಾಲಯವೂ ಗಡಿಪಾರಿಗೆ ಸಮ್ಮತಿ ನೀಡಿದೆ. ಲಂಡನ್‌ನ ತಜ್ಞರು ಮತ್ತು ಅಧಿಕಾರಿಗಳ ತಂಡವು ದೆಹಲಿಗೆ ಬಂದಿದ್ದು, ಆರೋಪಿಗಳನ್ನು ಇರಿಸಲಾಗುವ ಜೈಲಿನ ಪರಿಸ್ಥಿತಿ, ಭದ್ರತೆ ಮತ್ತು ಸೌಲಭ್ಯಗಳ ಕುರಿತು ಪರಿಶೀಲನೆ ನಡೆಸಿದೆ



