ಆಸ್ಕರ್ ಸ್ಪರ್ಧೆ: ಭಾರತದಿಂದ ‘ಹೋಮ್‌ಬೌಂಡ್’ ಆಯ್ಕೆ

Date:

98ನೇ ಆಸ್ಕರ್ ಪ್ರಶಸ್ತಿ ಸ್ಪರ್ಧೆಗೆ ಭಾರತದಿಂದ ನೀರಜ್ ಘಾಯ್‌ವಾನ್ ನಿರ್ದೇಶನದ ಸಿನಿಮಾ ‘ಹೋಮ್‌ಬೌಂಡ್’ ಅಧಿಕೃತವಾಗಿ ಆಯ್ಕೆಯಾಗಿದೆ. ಅಂತಾರಾಷ್ಟ್ರೀಯ ಚಲನಚಿತ್ರ ವಿಭಾಗದಲ್ಲಿ ಈ ಸಿನಿಮಾ ಸ್ಪರ್ಧಿಸಲಿದೆ ಎಂದು ಆಯ್ಕೆ ಸಮಿತಿ ಮುಖ್ಯಸ್ಥ ಎನ್ ಚಂದ್ರ ತಿಳಿಸಿದ್ದಾರೆ.

ಆಸ್ಕರ್‌ ಪ್ರಶಸ್ತಿ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಲು ವಿಭಿನ್ನ ಭಾಷೆಗಳ 24 ಚಲನಚಿತ್ರಗಳು ಪೈಪೋಟಿ ನಡೆಸಿದ್ದವು. ಪುಷ್ಪ2, ಬೆಂಗಾಲ್ ಫೈಲ್ಸ್, ತನ್ವಿ ದಿ ಗ್ರೇಟ್, ಕೇಸರಿ:ಚಾಪ್ಟರ್ 2,ಕಣ್ಣಪ್ಪ, ಕುಬೇರ, ಫುಲೆ ಮುಂದಾದ ಸಿನಿಮಾಗಳು ಪೈಪೋಟಿಯಲ್ಲಿದ್ದವು. ಈ ಸಿನಿಮಾಗಳ ಪೈಕಿ, ‘ಹೋಮ್‌ಬೌಂಡ್’ ಸಿನಿಮಾವನ್ನು 14 ಮಂದಿ ಸದಸ್ಯರಿದ್ದ ಆಯ್ಕೆ ಸಮಿತಿ ಆಯ್ಕೆ ಮಾಡಿದೆ ಎಂದು ಅವರು ವಿವರಿಸಿದ್ದಾರೆ.

ಉತ್ತರ ಭಾರತದ ಸಣ್ಣ ಹಳ್ಳಿಯೊಂದರ ಇಬ್ಬರು ಬಾಲ್ಯ ಸ್ನೇಹಿತರು, ತಲತಲಾಂತರಗಳಿಂದ ನಿರಾಕರಿಸಲಾಗಿದ್ದ ಘನತೆ ಮತ್ತು ಸ್ವಾಭಿಮಾನಕ್ಕಾಗಿ ಪೊಲೀಸ್ ನೌಕರಿಯ ಬೆನ್ನೆತ್ತಿ ಹೋಗುವ ಕಥೆ ಸಿನಿಮಾದ ಹಂದರವಾಗಿದೆ. ಸಿನಿಮಾದಲ್ಲಿ ಇಶಾನ್‌ಕಟ್ಟರ್, ವಿಶಾಲ್ ಜೇಥ್ವಾ ಹಾಗೂ ಜಾಹ್ನವಿ ಕಪೂರ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

    ಪೋಸ್ಟ್ ಹಂಚಿಕೊಳ್ಳಿ:

    ಪೋಸ್ಟ್ ಹಂಚಿಕೊಳ್ಳಿ:

    ಈ ಹೊತ್ತಿನ ಪ್ರಮುಖ ಸುದ್ದಿ

    ವಿಡಿಯೋ

    ಇದೇ ರೀತಿಯ ಇನ್ನಷ್ಟು ಲೇಖನಗಳು
    Related

    ಸಂಪುಟ ಪುನರ್‌ರಚನೆಗೆ ಕಾಂಗ್ರೆಸ್‌ ಶಾಸಕರ ಆಗ್ರಹ; ಹೈಕಮಾಂಡ್‌ಗೆ ಪತ್ರ

    ರಾಜ್ಯದಲ್ಲಿ ಮುಖ್ಯಮಂತ್ರಿ ಹುದ್ದೆ ಬದಲಾವಣೆ ಕುರಿತು ಪದೇ-ಪದೇ ಚರ್ಚೆಗಳು ನಡೆಯುತ್ತಿಲೇ ಇವೆ....

    ಮಾಜಿ ರೈಲ್ವೆ ಸಚಿವ ಮುಕುಲ್ ರಾಯ್ ನಿಧನ

    ಮಾಜಿ ರೈಲ್ವೆ ಸಚಿವ, ಈ ಹಿಂದೆ ತೃಣಮೂಲ ಕಾಂಗ್ರೆಸ್‌(ಟಿಎಂಸಿ)ಯ ಎರಡನೇ ಉನ್ನತ...

    ಟ್ರಂಪ್ ಸುಂಕ 15%ಗೆ ಏರಿಕೆ!

    ನಾನಾ ರಾಷ್ಟ್ರಗಳ ಮೇಲೆ ಅಮೆರಿಕ ಅಧ್ಯಕ್ಷ ಟ್ರಂಪ್ ಹೇರಿದ್ದ ಭಾರೀ ಸುಂಕವನ್ನು...

    ಇಂದಿನಿಂದ ಒಂದೆಡೆ ರಂಗೋತ್ಸವ

    ಫೆಬ್ರವರಿ 21 ಮತ್ತು 22ರಂದು ಬೆಂಗಳೂರು ನಗರದ ನ್ಯಾಷನಲ್ ಗ್ಯಾಲರಿ ಆಫ್...