ವರ್ಷಕ್ಕೆ ಒಮ್ಮೆ ಮಾತ್ರವೇ ಬಾಗಿಲು ತೆರೆಯುವ ಹಾಸನ ಹಾಸನಾಂಬ ದೇವಾಲಯದಲ್ಲಿ ಕರ್ತವ್ಯ ಲೋಕಪದ ಆರೋಪದ ಮೆಲೆ ನಾಲ್ವರು ಸರ್ಕಾರಿ ಸಿಬ್ಬಂದಿಗಳನ್ನು ಅಮಾನತು ಮಾಡಲಾಗಿದೆ. ಪ್ರವೇಶ ಕಾರ್ಡ್ ಸ್ಕ್ಯಾನ್ ಮಾಡದೇ ಭಕ್ತರಿಗೆ ಪ್ರವೇಶ ನೀಡಿದ ಆರೋಪದ ಮೇಲೆ ಕ್ರಮ ಕೈಗೊಳ್ಳಲಾಗಿದೆ ಎಂದು ವರದಿಯಾಗಿದೆ.
ದೇವಾಲಯದ ಪ್ರವೇಶದಲ್ಲಿ ನೇರ ಪ್ರವೇಶ ಪಡೆಯುವವರಿಗೆ ಗೋಲ್ಡ್ ಪಾಸ್ ನೀಡಲಾಗಿದೆ. ಈ ಪಾಸ್‌ಗಳ ಉಸ್ತುವಾರಿಗಾಗಿ ಕಂದಾಯ ಇಲಾಖೆಯ ಸಿಬ್ಬಂದಿಗಳನ್ನು ನೇಮಿಸಲಾಗಿದೆ. ಆದಾಗ್ಯೂ, ಪಾಸ್‌ಗಳನ್ನು ಸ್ಕ್ಯಾನ್ ಮಾಡದೆಯೇ ಕೆಲವರಿಗೆ ಪ್ರವೇಶ ನೀಡಲಾಗಿದೆ ಎಂದು ಆರೋಪಿಸಲಾಗಿದ್ದು, ಗೋಲ್ಡ್ ಕಾರ್ಡ್ ಕೌಂಟರ್ನಲ್ಲಿ ಕುಳಿತಿದ್ದ ನಾಲ್ವರು ಸಿಬ್ಬಂದಿಗಳನ್ನು ಅಮಾನತು ಮಾಡಲಾಗಿದೆ.
ಸಿಬಂದಿಗಳಾದ ಗೋವಿಂದರಾಜ್, ಯೋಗಾನಂದ್, ವಿಎಗಳಾದ ಸಂತೋಷ್ ಅಂಬಿಗರ ಹಾಗೂ ಶಿರಾಜ್ ಮಹಿಮಾ ಪಟೇಲ್ ಎಂಬವರು ಅಮಾನತು ಮಾಡಿ ಜಿಲ್ಲಾಧಿಕಾರಿ ಲತಾಕುಮಾರಿ ಆದೇಶಿಸಿದ್ದಾರೆ.




