ದೆಹಲಿಯಲ್ಲಿ ಗಾಳಿಯ ಗುಣಮಟ್ಟವು ಅತ್ಯಂತ ಕಳಪೆ ಮಟ್ಟಕ್ಕೆ ಕುಸಿದಿದ್ದು, ಕೆಲವು ಪ್ರದೇಶಗಳಲ್ಲಿ ಗಂಭೀರ ಮಟ್ಟಕ್ಕೆ ತಲುಪಿದೆ. ಹಲವು ವರ್ಷಗಳಿಂದ ವಾಯುಮಾಲಿನ್ಯ ಸಾಮಾನ್ಯ ಸಮಸ್ಯೆಯಾಗಿರುವ ದೆಹಲಿಯಲ್ಲಿ ವಾಯು ಗುಣಮಟ್ಟ ಸೂಚ್ಯಂಕ (AQI) 300 ರಿಂದ 400 ರ ನಡುವೆ ಇರುತ್ತಿತ್ತು. ಆದರೆ ಈ ದೀಪಾವಳಿಯ ಬಳಿಕ 400 ದಾಟಿದೆ. ಗಾಳಿಯ ಗುಣಮಟ್ಟ ಕಳಪೆಗೊಂಡಿರುವುದರಿಂದಾಗಿ ಜನರು ಉಸಿರಾಟದ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.




